- Tuesday
- July 28th, 2026
ಹಲವು ವರ್ಷಗಳಿಂದ ಸುಬ್ರಹ್ಮಣ್ಯ ದಲ್ಲಿ ಹಿರಿಯ ಮರದ ಶಿಲ್ಪಿಯಾಗಿದ್ದ ಜನಾರ್ದನ ಆಚಾರ್ಯ (82) ಬಿಲದ್ವಾರ ಮೇ ೧೮ ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ , ಆರು ಜನ ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕೂತ್ಕುಂಜ ಗ್ರಾಮದ ನಾಯರ್ ಕೆರೆ ಪಂಜ ಖಾಸಗಿ ಬಸ್ ನಿಲ್ದಾಣದಲ್ಲಿ ಅಮರ ಸುದ್ದಿ ಪತ್ರಿಕೆ ಏಜೆಂಟರಾಗಿದ್ದ ಜೆರಾಲ್ಡ್ ಡಿಸೋಜ ರ ಏಕೈಕ ಪುತ್ರ ಸಂತೋಷ್ ಡಿಸೋಜ (20) ಅಸೌಖ್ಯದಿಂದ ಮೇ.೧೭ ರಂದು ನಿಧನರಾದರು. ಅನಾರೋಗ್ಯಕ್ಕೊಳಗಾಗಿದ್ದ ಸಂತೋಷ್ ನನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟರೆಂದು ತಿಳಿದುಬಂದಿದೆ. ತಂದೆ, ತಾಯಿ ಫಿಲೋಮಿನಾ ರನ್ನುಅಗಲಿದ್ದಾರೆ.
ಸುಳ್ಯದಲ್ಲಿ ಹಲವಾರು ವರ್ಷಗಳಿಂದ ಜನಪ್ರಿಯ ವೈದ್ಯರಾಗಿದ್ದ ಡಾ. ಸುಗುಣ ಗೌಡ ಮಿತ್ತಮಜಲು (೭೫)ಮೇ. ೧೫ ರಂದು ನಿಧನರಾದರು. ಮೃತರು ಇಬ್ಬರು ಪುತ್ರರು, ಒರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸುಳ್ಯದಲ್ಲಿ ಕ್ಲಿನಿಕ್ ನಡೆಸಿ ಖ್ಯಾತ ವೈದ್ಯರಾಗಿದ್ದ ಅವರು ಇತ್ತೀಚೆಗೆ ಕೆ.ವಿ.ಜಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ದಶಕಗಳ ಹಿಂದೆ ಭೂಗತ ಜಗತ್ತಿನ ದೊರೆಯಾಗಿದ್ದ ಮುತ್ತಪ್ಪ ರೈ ಇಂದ ಬೆಳಗ್ಗಿನ ಜಾವ ೨ ಗಂಟೆಗೆ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಬೆಂಗಳೂರಿನ ಬಿಡದಿಯಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ದಶಕಗಳಿಂದ ಭೂಗತ ಜಗತ್ತಿನಿಂದ ಹೊರಬಂದು, ಎಲ್ಲಾ ಕೇಸುಗಳಿಂದ ಪಾರಾಗಿ, ಬಳಿಕ ಸಾಮಾಜದಲ್ಲಿ ಉದ್ಯಮಿಯಾಗಿ ಗುರುತಿಸಿ ಕೊಂಡಿದ್ದರು....
ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಕಾರ್ಯನಿರ್ವಹಣಾಧಿಕಾರಿ ವಿ .ಟಿ ವೆಂಕಟೇಶ್ ಇಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.ಇವರು ಹರಿಹರ ಸೊಸೈಟಿಯ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ 2 ವರ್ಷ ದುಡಿದ್ದರು. ಪ್ರಸ್ತುತ ಶುಭಕರ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಸುಬ್ರಹ್ಮಣ್ಯ ಇದರ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು.
