- Saturday
- September 12th, 2026
ಕೊಡಗು-ಸಂಪಾಜೆಯ ಹಿರಿಯ ವೈದ್ಯರಾದ ಡಾ. ಸುಬ್ರಹ್ಮಣ್ಯ ಭಟ್ ಕೋಣೆತೋಟ ರವರು ಅಲ್ಪಕಾಲದ ಅಸೌಖ್ಯದಿಂದ(ವಯೋಸಹಜ) ಜು.11 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ದೇವಿ, ಶುಭಾ, ಸೊಸೆ ರೇಷ್ಮಾ, ಮೊಮ್ಮಗ ಶಾಂತನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ನಾಳೆ(ಜು.12) ಬೆಳಿಗ್ಗೆ ಅಂದಾಜು 10:00 ಗಂಟೆ ಸುಮಾರಿಗೆ ಸ್ವಗೃಹದಲ್ಲಿ ನೆರವೇರಲಿದೆ...
ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಮಲೆಯಾಳ ನಿವಾಸಿ ಗೋಪಾಲಕೃಷ್ಣ ಭಟ್ ಮಲೆಯಾಳ(93) ಶನಿವಾರ ಸ್ವಗೃಹದಲ್ಲಿ ನಿಧನರಾದರು. ಪ್ರಗತಿಪರ ಕೃಷಿಕರಾಗಿಯೂ, ಹವ್ಯಾಸಿ ಯಕ್ಷಗಾನ ವೇಷ ಧಾರಿಯೂ, ಯಕ್ಷ ಗುರುಗಳಾಗಿಯೂ ಪ್ರಸಿದ್ಧಿ ಹೊಂದಿದ್ದರು. ಯಕ್ಷಗುರುಗಳಾದ ಇವರು ಪುತ್ತೂರು, ಸುಳ್ಯ ತಾಲೂಕಿನ ಅನೇಕ ಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಬೇತಿ ನೀಡಿ ಮಕ್ಕಳು ಯಕ್ಷ ರಂಗಸ್ಥಳದಲ್ಲಿ ಮಿಂಚುವಂತೆ ಮಾಡಿದವರು....
ಐವರ್ನಾಡಿನಲ್ಲಿ ಜೀಪು ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಜು. 8ರಂದು ನಡೆದಿದೆ. ಐವರ್ನಾಡಿನ ಪರ್ಲಿಕಜೆಯಲ್ಲಿ ಜು. 7ರಂದು ರಾತ್ರಿ ಜೀಪು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಐವರ್ನಾಡು ಕೃಷಿ ಕಾಲನಿ ನಿವಾಸಿ ಚಂದ್ರಶೇಖರ (28) ಎಂಬವರು ಗಾಯಗೊಂಡಿದ್ದರು. ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು....
ತೂಗುಸೇತುವೆಗಳ ನಿರ್ಮಿಸುವ ಗ್ರಾಮೀಣ ಜನರ ಬದುಕಿಗೆ ನೆರವಾಗಿ "ಬ್ರಿಡ್ಜ್ ಮ್ಯಾನ್" ಎಂದೇ ಪ್ರಸಿದ್ಧಿಯಾಗಿ ಭಾರತ ಸರ್ಕಾರಿಂದ ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು. ಜನಪ್ರತಿನಿಧಿ ಹಾಗೂ ಅಧಿಕಾರಿಗಳು, ಗಣ್ಯರು, ಅಭಿಮಾನಿಗಳು ಸೇರಿದಂತೆ ಸಾವಿರಾರು ಜನ ಅಂತಿಮ ದರ್ಶನ ಪಡೆದರು. ಅರಂಬೂರಿನ ಅವರ ನಿವಾಸದಲ್ಲಿ ಅಂತಿಮ ವಿಧಿ...
“ತೂಗು ಸೇತುವೆಯ ಸರದಾರರು, ಗ್ರಾಮೀಣ ಪ್ರದೇಶ ಸಾಮಾನ್ಯ ಜನರಿಗೆ ತೂಗು ಸೇತುವೆ ನಿರ್ಮಿಸಿ ಸಂಪರ್ಕ ವ್ಯವಸ್ಥೆ ಕಲ್ಪಿಸಿದ ಪದ್ಮಶ್ರೀ ಡಾ.ಗಿರೀಶ್ ಭಾರಧ್ವಾಜ್ ನಿಧನರಾಗಿದ್ದು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆಯೆಂದು” ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಸುಳ್ಯ ಮಾತ್ರವಲ್ಲದೆ ದೇಶದ ಆನೇಕ ಕಡೆ ನೂರಾರು ಸೇತುವೆ ನಿರ್ಮಿಸಿ ಗ್ರಾಮೀಣ ಭಾರತದ ಜನರಿಗೆ...
ದೇಶದಾದ್ಯಂತ "ತೂಗುಸೇತುವೆಗಳ ಸರದಾರ" ಎಂದೇ ಖ್ಯಾತಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತ ಹಿರಿಯ ಇಂಜಿನಿಯರ್ ಡಾ. ಗಿರೀಶ್ ಭಾರದ್ವಾಜ್ (76) ಅವರು ಇಂದು (ಜು. 7) ಮುಂಜಾನೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ ಸಂಬಂಧಿತ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರು....
ಅಲೆಟ್ಟಿ ಗ್ರಾಮದ ದೋಣಿಮೂಲೆ ಮನೆಯ ಸೂಂತೋಡು ದಿ. ಶಿವಣ್ಣ ಗೌಡರ ಪತ್ನಿ ಎಸ್. ಜಾನಕಿ ಎಂಬವರು ಇಂದು ಸಂಜೆ (ಜುಲೈ 4) ರಂದು ವಯೋ ಸಹಜವಾಗಿ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 96 ವರ್ಷ ವಯಸ್ಸಾಗಿತ್ತು.ಮೃತರು ಓರ್ವ ಪುತ್ರ, ಮೂವರು ಪುತ್ರಿಯರು, ಸೊಸೆ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.
ಜೂ.11 ರಂದು ನಿಧನರಾದ ಹರಿಹರ ಪಳ್ಳತ್ತಡ್ಕ ಗ್ರಾಮದ ಕಜ್ಜೋಡಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯರಾದ ದಿ| ಶ್ರೀಧರ್ ಭಾಗವತ್ ರವರಿಗೆ ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘ, ಸಚಿನ್ ಕ್ರೀಡಾ ಸಂಘ ಹರಿಹರ ಪಳ್ಳತ್ತಡ್ಕ ಹಾಗೂ ಊರ ಅಭಿಮಾನಿಗಳಿಂದ “ಸಾರ್ವಜನಿಕ ಶ್ರದ್ಧಾಂಜಲಿ ಸಭೆ”ಯು ಜೂ.28ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಕಲಾಮಂದಿರದಲ್ಲಿ ನಡೆಯಿತು.ಸುಳ್ಯ ತಾಲೂಕು ಪಿಂಚಣಿದಾರರ...
ಮಡಪ್ಪಾಡಿ ಗ್ರಾಮದ ಕಡ್ಯ ಪೆರಾಲು ದಿ.ಲಕ್ಷ್ಮಣ ಗೌಡರ ಧರ್ಮಪತ್ನಿ ಶ್ರೀಮತಿ ಹೊನ್ನಮ್ಮ ಕಡ್ಯ ರವರು ಜೂ.27ರಂದು ರಾತ್ರಿ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರ ದೇಹವು ಇಂದು ಬೆಳಿಗ್ಗೆ 8:00 ಗಂಟೆಗೆ ಕಡ್ಯ ಮನೆಗೆ ತಲುಪಿದ್ದು, ಬೆಳಿಗ್ಗೆ 10:00 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘ(ರಿ.) ಸುಳ್ಯ ದ.ಕ, ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಹಾಗೂ ಊರ ಅಭಿಮಾನಿಗಳಿಂದ “ದಿ| ಶ್ರೀಧರ ಭಾಗವತ್ ರವರ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆ”ಯು ಜೂ.28 ಭಾನುವಾರದಂದು ಪೂರ್ವಾಹ್ನ 11:00 ಗಂಟೆಯಿಂದ ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ಕಲಾಮಂದಿರದಲ್ಲಿ ನಡೆಯಲಿದ್ದು, ಅಪರಾಹ್ನ 12:30 ರಿಂದ ಅನ್ನಸಂತರ್ಪಣೆ...
Loading posts...
All posts loaded
No more posts
