ಸೇವಾ ನಿವೃತ್ತಿ ಪಡೆದ ಮಣಿಯಾನ ಪುರುಷೋತ್ತಮರಿಗೆ ಊರವರಿಂದ ಗೌರವಾರ್ಪಣೆ

ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಪಡೆದ  ಮಣಿಯಾನ ಪುರುಷೋತ್ತಮ ರಿಗೆ ಗುತ್ತಿಗಾರು ಪೈಕದ  ಹನ್ನೆರಡು ಒಕ್ಕಲುಗಳಿಗೆ ಸಂಬಂಧಪಟ್ಟ ಹತ್ತು ಸಮಸ್ತರು ಮತ್ತು ಬೈಲಿನವರು ಸೇರಿ ಸನ್ಮಾನುಸಿದರು. ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ  ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಹಾಗೂ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಿ ಯಂ ರಾಮಣ್ಣಗೌಡ...

ಬೆಟ್ಟಂಪಾಡಿ :  ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಯಕ್ಷಗಾನ ತರಬೇತಿ ಕೇಂದ್ರ ಆರಂಭ

ಶಿವಾಜಿ ಯುವ ವೃಂದ ಹಳೆಗೇಟು ಹಾಗೂ ಶಿವಾಜಿ ಗೆಳೆಯರ ಬಳಗ ಹಳೆಗೇಟು,ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿಯಲ್ಲಿ ಮುಖೇಶ್ ಬೆಟ್ಟಂಪಾಡಿ ಅವರ ಸಂಯೋಜನೆಯಲ್ಲಿ ಉಚಿತ ಯಕ್ಷಗಾನ ತರಬೇತಿ ತರಗತಿಯು ಆರಂಭವಾಯಿತು. ತರಗತಿಯನ್ನು ಯಕ್ಷಗಾನ ಗುರುಗಳು ಶಶಿಕಿರಣ್ ಕಾವು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು.       ವೇದಿಕೆಯಲ್ಲಿ ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ...
Ad Widget

ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ , ವೀರವನಿತೆ ಕ್ರೀಡಾ ಮತ್ತು ಕಲಾ ಸಂಘ ಮಂಡೆಕೋಲು ಇದರ ಜಂಟಿ ಆಶ್ರಯದಲ್ಲಿ 5 ನೇ ವರ್ಷದ ಗೋಪೂಜೆ ಕಾರ್ಯಕ್ರಮ

ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ , ವೀರವನಿತೆ ಕ್ರೀಡಾ ಮತ್ತು ಕಲಾ ಸಂಘ ಮಂಡೆಕೋಲು ಇದರ ಜಂಟಿ ಆಶ್ರಯದಲ್ಲಿ 5 ನೇ ವರ್ಷದ ಗೋಪೂಜೆ ಕಾರ್ಯಕ್ರಮವು ವಿನುತ ಪಾತಿಕಲ್ಲು ಇವರ ಮನೆಯಲ್ಲಿ ನಡೆಯಿತು.ಪಾತಿಕಲ್ಲು ಕುಟುಂಬದ ಹಿರಿಯರಾದ ಚಂದಪ್ಪ ಗೌಡ ಪಾತಿಕಲ್ಲು, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾದ ಪ್ರವೀಣ್ ಜಯನಗರ , ಕಾರ್ಯದರ್ಶಿ ಗುರುರಾಜ್ ಅಜ್ಜಾವರ...

ಡಿ.09 : ಗುತ್ತಿಗಾರಿನಲ್ಲಿ ಸೌಜನ್ಯಳ ಪರವಾಗಿ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನಾ ಸಭೆ

ಸೌಜನ್ಯ ಹೋರಾಟ ಸಮಿತಿ ಗುತ್ತಿಗಾರು ಇದರ ನೇತೃತ್ವದಲ್ಲಿ  ಡಿಸೆಂಬರ್ 9 ರಂದು ಗುತ್ತಿಗಾರಿನಲ್ಲಿ ಸೌಜನ್ಯ ನ್ಯಾಯ ಪರವಾಗಿ ಬೃಹತ್ ಹೋರಾಟ ನಡೆಯಲಿದೆ. ನ.11 ರಂದು ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಗುತ್ತಿಗಾರು ಭಾಗದ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಸರಕಾರಿ ಪ್ರೌಢ ಶಾಲೆ ಎಣ್ಮೂರು: ಶಿವಧೂತೆ ಗುಳಿಗೆ ನಾಟಕ ಪ್ರದರ್ಶನ; ಜನ ಸಾಗರದ ಮಧ್ಯೆ ವಿಜಯ ಕುಮಾರ್ ಕೊಡಿಯಾಲ್ ಬೈಲ್ ರವರಿಗೆ ಅಭಿನಂದನೆ

ಸರಕಾರಿ ಪ್ರೌಢಶಾಲೆ ಎಣ್ಮೂರು ಶಾಲಾ ಬಯಲು ರಂಗಮಂದಿರ ನಿರ್ಮಾಣದ ಪ್ರಯುಕ್ತ ಶಾಲಾಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಕಲಾ ಸಂಗಮ ಕಲಾವಿದರಿಂದ ಈ ವರ್ಷದ ವಿಶಿಷ್ಟ ತುಳು ನಾಟಕ ಶಿವಧೂತೆ ಗುಳಿಗೆ ನಾಟಕ ನವೆಂಬರ್ 10ರಂದು ಪ್ರದರ್ಶನಗೊಂಡಿತು. ಈ ಸಂದರ್ಭದಲ್ಲಿ ದಾಖಲೆ ಸೃಷ್ಟಿಸಿದ ಈ ನಾಟಕದ ನಿರ್ದೇಶಕರಾದ ಶ್ರೀ ವಿಜಯಕುಮಾರ್...

ಅಮರ ಸುದ್ದಿ ದೀಪಾವಳಿ ವಿಶೇಷಾಂಕ ಮುದ್ದು ಕಂದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ.

ಅಮರ ಸುಳ್ಯ ಸುದ್ದಿ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿದ್ದ ಮುದ್ದು ಕಂದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನ ೧೧ ರಂದು ನಡೆಯಿತು. ವಿಜೇತರಿಗೆ ಅಮರ ಸುದ್ದಿ ಪತ್ರಿಕೆಯ ಸಂಪಾದಕರಾದ ಮುರಳೀಧರ ಅಡ್ಡನಪಾರೆ, ಮುಖಪುಟ ವಿನ್ಯಾಸಗೊಳಿಸಿದ ಶಿಶಿರ್ ಪೆರಾಜೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಪದ್ಮನಾಭ ಅಂರಬೂರು, ಮಿಥುನ್ ಕರ್ಲಪ್ಪಾಡಿ, ಹರ್ಷಿತಾ ಮುರಳೀಧರ ಅಡ್ಡನಪಾರೆ,...

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ

ಸುಬ್ರಹ್ಮಣ್ಯ: ದೀನ ದಲಿತರ ಮತ್ತು ಬಡವರ ಮುಖದಲ್ಲಿ ನಗು ತರುವ ನಮ್ಮ ಅಂತರಾಷ್ಟ್ರೀಯ ಲಯನ್ಸ್ ನ ಉದ್ದೇಶದೊಂದಿಗೆ ಬಡವರ ಸೇವೆಯನ್ನು ನಿರಂತರವಾಗಿ ಮುಂದುವರಿಸೋಣ, ಹಾಗೆಯೇ ಮೂಕ ಪ್ರಾಣಿ ಪಕ್ಷಿಗಳ ಮನಸ್ಸನ್ನು ಅರ್ಥೈಸಿಕೊಂಡು ಅವುಗಳಿಗೆ ಬೇಕಾದ ಆಹಾರವನ್ನು ಕಾಡಿನ ಅಂಚಿನಲ್ಲಿ ಸುಲಭವಾಗಿ ಸಿಗುವ ಹಾಗೆ ಬೀಜ ಬಿತ್ತನೆ ಹಾಗೂ ಹಣ್ಣಿನ ಗಿಡಗಳನ್ನು ಹೆಚ್ಚಾಗಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ...

ಗುತ್ತಿಗಾರು ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ) ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಗಣಪತಿ ಪದವಿ ಪೂರ್ವ ಕಾಲೇಜು ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳ ಕ್ರೀಡಾಂಗಣ ಮಂಗಳೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸುಳ್ಯ ತಾಲೂಕನ್ನು ಪ್ರತಿನಿಧಿಸಿದ್ದ ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇದರ ಯಾಸಿಕ.ಯಂ.ಆರ್ ಇವರು 1500 ಮತ್ತು 3000...

ಎಂ ವೆಂಕಪ್ಪ ಗೌಡರಿಂದ ಕೆರೆಮೂಲೆ ವಾರ್ಡ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮನೆ ಮನೆಗೆ ಸಿಹಿತಿಂಡಿ ವಿತರಣೆ.

ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪ ಗೌಡರು ಇಂದು ತಮ್ಮ ನಗರ ಪಂಚಾಯತ್ ವಾರ್ಡ್ ಕೆರೆಮೂಲೆ ಯಲ್ಲಿ ಪ್ರತೀ ಮನೆ ಮನೆಗೆ ತೆರಳಿ ಸಿಹಿ ಹಂಚಿ ದೀಪಾವಳಿ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ ಗೋಕುಲ್ ದಾಸ್, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ, ಶಹೀದ್ ಪಾರೆ,...

ಶಾಲಾ ಮೈದಾನದ ಪಕ್ಕದಲ್ಲಿ ಬೃಹದಾಕಾರದ ಹಾವನ್ನು ಸೆರೆ ಹಿಡಿದ ಅರಣ್ಯ ಇಲಾಖಾ ಸಿಬ್ಬಂದಿ.

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿಯಲ್ಲಿ ಸಂಜೆ ಬೃಹದಾಕಾರದ ಹಾವನ್ನು ಅರಣ್ಯ ವೀಕ್ಷಕರಾದ ರಾಬರ್ಟ್ ರವರು ನಿನ್ನೆ ರಾತ್ರಿ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿರುವುದಾಗಿ ತಿಳಿದುಬಂದಿದೆ.
Loading posts...

All posts loaded

No more posts

error: Content is protected !!