ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೋವರ್ ರೇಂಜರ್ಸ್ ಘಟಕ, ಯುವ ರೆಡ್ ಕ್ರಾಸ್ ಘಟಕ, ಪ್ರಾಕ್ತನ ವಿದ್ಯಾರ್ಥಿ ಪರಿಷತ್, ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ ಪುತ್ತೂರು ಜಂಟಿ ಆಶ್ರಯದಲ್ಲಿ 4.03.2025 ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ರೋಟರಿ ಕ್ಯಾಂಪ್ ಬ್ಲಡ್ ಸೆಂಟರ್ ಪುತ್ತೂರಿನ ವೈದ್ಯಾಧಿಕಾರಿಗಳಾದ, ಡಾ .ಕೆ ಸೀತಾರಾಮ ಭಟ್...

ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ನಿರ್ಮಲಾ ಪದ್ಮನಾಭ ಪರಮಲೆ

ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ನಿರ್ಮಲಾ ಪದ್ಮನಾಭ ಪರಮಲೆಯವರು ಅವಿರೋಧವಾಗಿ ಆಯ್ಕೆಯಾದರು.ಸದಸ್ಯರುಗಳಾಗಿ ದೇವಾಲಯದ ಪ್ರಧಾನ ಅರ್ಚಕ ಮಹಾಬಲೇಶ್ವರ ಭಟ್, ರಾಜೇಶ್ ಉತ್ರಂಬೆ, ಸೂರ್ಯಪ್ರಕಾಶ್ ಕೋಡಿಬೈಲು, ಮೋನಪ್ಪ ಚಾರ್ಮತ, ವೆಂಕಪ್ಪ ನಾಯ್ಕ ಅಂಜೇರಿ, ಷಣ್ಮುಖ ಅಂಬೆಕಲ್ಲು, ಚಂದ್ರಕಲಾ ಉತ್ರಂಬೆ, ರತ್ನಾವತಿ ಹುಲ್ಲುಕುಮೇರಿ ಆಯ್ಕೆಯಾಗಿದ್ದಾರೆ.
Ad Widget

ಮಂಗಳೂರು ವಿ.ವಿ.ಮಟ್ಟದ ಚೆಸ್ ಪಂದ್ಯಾವಳಿ – ದ್ವಿತೀಯ ಸ್ಥಾನ ಪಡೆದ ಸುಳ್ಯದ ಡಿಗ್ರಿ ಕಾಲೇಜು ತಂಡ

ಮಂಗಳೂರು ವಿ.ವಿ.ಮಟ್ಟದ ಚೆಸ್ ಪಂದ್ಯಾವಳಿ - ದ್ವಿತೀಯ ಸ್ಥಾನ ಪಡೆದ ಸುಳ್ಯದ ಡಿಗ್ರಿ ಕಾಲೇಜು ತಂಡ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಚೆಸ್ ಪಂದ್ಯಾವಳಿಯು ಡಾ. ದಯಾನಂದ ಪೈ ಸತೀಶ್ ಪೈ ಮೆಮೋರಿಯಲ್ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ಫೆ. 28ರಂದು ನಡೆಯಿತು. ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ...

ಹರಿಹರ ಪಲ್ಲತಡ್ಕ ಗ್ರಾ.ಪಂ. ಮಾಜಿ ಸದಸ್ಯ ನವೀನ್ ಕಟ್ರಮನೆ ನಿಧನ

ಹರಿಹರ ಪಲ್ಲತಡ್ಕ ಗ್ರಾ.ಪಂ. ಮಾಜಿ ಸದಸ್ಯ, ಬಿಜೆಪಿ ಪಕ್ಷದ ಸಕ್ರಿಯ ಸದಸ್ಯ ಐನೆಕಿದು ಗ್ರಾಮದ ನವೀನ್ ಕಟ್ರಮನೆ ಇಂದು ಸಂಜೆ ನಿಧನರಾದರು. ಇಂದು ಬೆಳಿಗ್ಗೆ ಅನಾರೋಗ್ಯಕ್ಕೆ ಒಳಗಾದ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ನಿಧನರಾದರೆಂದು ತಿಳಿದುಬಂದಿದೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಫುಡ್...

ಕಲ್ಚರ್ಪೆ : ನಿಂತಿದ್ದ ವಾಹನಕ್ಕೆ ಕಾರು ಡಿಕ್ಕಿ – ಪ್ರಯಾಣಿಕರಿಗೆ ಗಾಯ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಸಮೀಪದ ಕಲ್ಚರ್ಪೆಯಲ್ಲಿ ನಿಂತಿದ್ದ ಟೆಂಪೊ ಒಂದಕ್ಕೆ ಮೈಸೂರು ಕಡೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ನಡೆದಿದದೆ. ಅಪಘಾತದಿಂದ ಕಾರಿನಲ್ಲಿದ್ದ ಮೂವರು ಪ್ರಯಾಣಿಕರಿಗೆ ಗಾಯಗಳಾಗಿದ್ದು,ಅವರನ್ನು ಸುಳ್ಯ ಆಸ್ಪತ್ರೆಗೆ ಕರೆ ತರಲಾಗಿದೆ ಎಂದು ತಿಳಿದುಬಂದಿದೆ.

ವಳಲಂಬೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿಯವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಸದಸ್ಯರುಗಳಾದ ಕೇಶವ ಹೊಸೋಳಿಕೆ, ಪುರುಷೋತ್ತಮ ಬದಿಯಡ್ಕ, ಜಯಾನಂದ ಪಟ್ಟೆ, ಶಿವಪ್ರಸಾದ್ ಕಂದ್ರಪ್ಪಾಡಿ, ಸನತ್ ಮುಳುಗಾಡು, ಉಷಾ ಮಲ್ಕಜೆ, ಪ್ರಧಾನ ಅರ್ಚಕ ಪರಮೇಶ್ವರ ಭಟ್ ಉಪಸ್ಥಿತರಿದ್ದರು.

ಸ್ನೇಹ ಶಾಲೆಯಲ್ಲಿ ಡಾ ಚೂಂತಾರು ರವರಿಗೆ ಸನ್ಮಾನ

ವೈದ್ಯಕೀಯ ,ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಗಮನಾರ್ಹ ಸೇವೆ ಹಾಗೂ ಕೊಡುಗೆಗಾಗಿ ಸುಳ್ಯದ ಸ್ನೇಹ ಶಾಲೆಯಲ್ಲಿ ಡಾ ಮುರಲೀ ಮೋಹನ್ ಚೂಂತಾರು ಮತ್ತು ಡಾ ರಾಜಶ್ರೀ ಮೋಹನ್ ಅವರನ್ನು ಶಾಲು ಹೊದಿಸಿ ಫಲ ಪುಷ್ಪ ಫಲಕ ನೀಡಿ ಸನ್ಮಾನ ಮಾಡಲಾಯಿತು. ಪದ್ಮಶ್ರೀ ಶ್ರೀ ಗಿರೀಶ್ ಭಾರದ್ವಾಜ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಡಾ ಚಂದ್ರಶೇಖರ...

ಪ್ರೇಕ್ಷಕರ ಮನಗೆದ್ದು ಯಾನ ಮುಂದುವರೆಸಿದ “ಭಾವ ತೀರ ಯಾನ” – ಪುತ್ತೂರಿನಲ್ಲಿ ಮಾ.3ರಿಂದ ಮಾ.6 ರ ತನಕ ಸಂಜೆ 7.15 ಕ್ಕೆ ಶೋ ಲಭ್ಯ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ರಾಜ್ಯಾದ್ಯಾಂತ ಪ್ರೇಕ್ಷಕರ ಮೆಚ್ಚುಗೆ ಪಡೆದು ಹೌಸ್ ಫುಲ್ ಪ್ರದರ್ಶನದೊಂದಿಗೆ ಎರಡನೇ ವಾರದಲ್ಲಿ ಮುಂದುವರೆಯಿತ್ತಿದೆ.   ಪುತ್ತೂರಿನ  ಭಾರತ್ ಸಿನಿಮಾಸ್ ನಲ್ಲಿ  ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಬೇಡಿಕೆ ಹಿನ್ನೆಲೆಯಲ್ಲಿ ಮಾ. 03 ರಿಂದ 06 ರವರೆಗೆ ಸಂಜೆ 7.15...

ಅವೈಜ್ಞಾನಿಕ ಕಾಮಗಾರಿ – ಕುರುಂಜಿಭಾಗ್ ನಲ್ಲಿ ಪಾದಾಚಾರಿಗಳಿಗೆ ನರಕ ದರ್ಶನ

ಕುಡಿಯುವ ನೀರಿನ ಯೋಜನೆಗಾಗಿ ಸುಳ್ಯ ನಗರದಲ್ಲಿ ಪೈಪ್ ಅಳವಡಿಕೆ ಕಾರ್ಯ ಭರದಿಂದ ನಡೆಯುತ್ತಿದ್ದು ಕೆಲವೆಡೆ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು ಪಾದಾಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಸಂಕಷ್ಟ ಪಡುವಂತಾಗಿದೆ. ಕುರುಂಜಿಭಾಗ್ ನಲ್ಲಿ ಬೇರೆಡೆ ಜಾಗವಿದ್ದರೂ ರಸ್ತೆ ಮಧ್ಯದಲ್ಲಿಯೇ ಕಾಂಕ್ರಿಟ್ ಒಡೆದು ಪೈಪ್ ಹಾಕಲಾಗುತ್ತಿದೆ. ಇಲ್ಲಿ ಮೊದಲಿದ್ದ ಕುಡಿಯುವ ನೀರಿನ ಪೈಪ್ ಲೈನ್ ಗಳನ್ನು ತುಂಡರಿಸಲಾಗಿದ್ದು...

ಬೇಸಿಗೆಯಲ್ಲಿ ಬೆವರಿಳಿಸಿ ಬೆಂಡಾಗಿಸುವ ನಿರ್ಜಲೀಕರಣ

ನಮ್ಮ ದೇಹದ ತೂಕದ ಸುಮಾರು 60 ಶೇಕಡಾದಷ್ಟು ನೀರಿನಾಂಶ ಇದ್ದು, ದೇಹದ ಹೆಚ್ಚಿ ಎಲ್ಲಾ ಜೈವಿಕ ಕ್ರಿಯೆಗಳಿಗೆ ನೀರು ಅತೀ ಅಗತ್ಯ. ಸುಮಾರು 70 ಕೆ.ಜಿ ತೂಕದ ವ್ಯಕ್ತಿಯಲ್ಲಿ ಸರಿಸುಮಾರು 40 ಲೀಟರ್‍ಗಳಷ್ಟು ಅಂದರೆ ದೇಹದ ತೂಕದ 60 ಶೇಕಡಾದಷ್ಟು ನೀರು ಇರುತ್ತದೆ. ನಮ್ಮ ದೇಹದಲ್ಲಿನ ನೀರು ಬೇರೆ ಬೇರೆ ಕಾರಣಗಳಿಂದ ಬೇರೆ ಬೇರೆ ರೂಪದಲ್ಲಿ...
Loading posts...

All posts loaded

No more posts

error: Content is protected !!