5 ನೇ ವಾರದಲ್ಲಿ ಯಶಸ್ವಿ ತೆರೆ ಕಾಣುತ್ತಿರುವ ಭಾವ ತೀರ ಯಾನ – ಮಾ.23 ರಂದು ಬೆಳಿಗ್ಗೆ 10.30ಕ್ಕೆ ಹಾಗೂ ಸಂಜೆ 4.30 ಕ್ಕೆ ಶೋ ಲಭ್ಯ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 5 ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮಾ.23ರಂದು ಬೆಳಿಗ್ಗೆ 10.30ಕ್ಕೆ ಹಾಗೂ ಸಂಜೆ 4.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್‌'ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು...

ಕುಕ್ಕೆ ಸುಬ್ರಹ್ಮಣ್ಯಕ್ಕೆ ರಾಜ್ಯ ಯೋಜನಾ ಸಚಿವ ಡಿ. ಸುಧಾಕರ್ ಭೇಟಿ

ಸುಬ್ರಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ಸರ್ಕಾರದ ಯೋಜನಾ ಸಚಿವ ಡಿ. ಸುಧಾಕರ್ ಮಾ.22 ರಂದು ಮಧ್ಯಾಹ್ನ ಭೇಟಿ ನೀಡಿದರು. ಸಚಿವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಯೇಸುರಾಜ್ ಅವರು ಸ್ವಾಗತಿಸಿ ಬರಮಾಡಿಕೊಂಡರು. ಸಚಿವರು ಶ್ರೀಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆ ಹಾಗೂ ತುಲಾಭಾರ ಸೇವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
Ad Widget

ಕುಕ್ಕೆ ದೇವಳಕ್ಕೆ ಮಧೂರು ದೇವಳದಿಂದ ಆಮಂತ್ರಣ

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯಆಮಂತ್ರಣ ಪತ್ರಿಕೆಯನ್ನು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೀಡಲಾಯಿತು.ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರಿಗೆ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಶ್ರೀ ದೇವಳಕ್ಕೆ ಆಗಮಿಸಿ ನೀಡುವ ಮೂಲಕ ವಿರಾಟ್ ದೇವತಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.ಬಳಿಕ ಶ್ರೀ ದೇವಳದಿಂದ ಬೋಜನ...

ಅರೆಕಲ್ಲು : ಕಾಡಾನೆ ಸಾವು – ಕೊಳೆತ ಸ್ಥಿತಿಯಲ್ಲಿ ಪತ್ತೆ

ಕೊಡಗು ಸಂಪಾಜೆ ಗ್ರಾಮದ ಅರೆಕಲ್ಲು ಬಳಿ ರಕ್ಷಿತಾರಣ್ಯದಲ್ಲಿ ಆನೆಯೊಂದು ಸತ್ತು ಕೊಳೆತ ಸ್ಥಿತಿಯಲ್ಲಿ ಮಾ.21ರಂದು ಪತ್ತೆಯಾಗಿದ್ದು, ಸಹಜವಾಗಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ವಯಸ್ಸಾಗಿರುವ ಆನೆಯಾಗಿದ್ದು ಕಲ್ಲಿನ ಎಡೆಯಲ್ಲಿ ಕಾಲು ಸಿಲುಕಿ ಸಾವು ಸಂಭವಿಸಿರಬುದು. ಮೂರು ನಾಲ್ಕು ದಿನಗಳ ಹಿಂದೆ ಸತ್ತಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ – ಮಾದಕ ವಸ್ತುಗಳ ವಿರುದ್ಧ ಹೋರಾಡುವಂತೆ ವಿದ್ಯಾರ್ಥಿಗಳಿಗೆ ಉಪನಿರೀಕ್ಷಕ ಸಂತೋಷ್ ಕರೆ

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ ಮಾ.22 ರಂದು ನಡೆಯಿತು. ಸುಳ್ಯ ಪೋಲೀಸ್ ಉಪನಿರೀಕ್ಷಕ ಶ್ರೀ ಸಂತೋಷ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಡಾ. ಜ್ಯೋತಿ ಆರ್. ಪ್ರಸಾದ್, ಸೆಕ್ರೆಟರಿ ಕಮಿಟಿ ‘ಬಿ’ ಎ.ಒ.ಎಲ್.ಇ(ರಿ), ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರುಡಾ....

ಕುಕ್ಕನ್ನೂರು ಉಳ್ಳಾಕುಲು ದೈವಸ್ಥಾನದ ಕಟ್ಟಮುಚ್ಚೀರ್ ಮಾಡಕ್ಕೆ ಶಾಶ್ವತ ಚಪ್ಪರ ನಿರ್ಮಾಣಕ್ಕೆ ಮುಹೂರ್ತ

ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಕುಕ್ಕನ್ನೂರು ಉಳ್ಳಾಕುಲು ದೈವಸ್ಥಾನದ ಕಟ್ಟಮುಚ್ಚೀರ್ ಮಾಡಕ್ಕೆ ಶಾಶ್ವತ ಚಪ್ಪರ ನಿರ್ಮಿಸಲು ಮಾ.22 ರಂದು ಬೆಳಿಗ್ಗೆ ಮುಹೂರ್ತ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಮೊಕ್ತೇಸರರಾದ ಬಾಲಕೃಷ್ಣ ಗೌಡ. ಎನ್.ಎಸ್. ನಡುಬೆಟ್ಟು, ಶ್ರೀ ಕಿನ್ನಿಮಾಣಿ ಪೂಮಾಣಿ ಸೇವಾಸಮಿತಿಯ ಅಧ್ಯಕ್ಷ ಗಿರೀಶ್ ನಾಯಕ್, ಕಾರ್ಯದರ್ಶಿ ಸುದೀರ್ ರೈ, ಖಜಾಂಚಿ...

ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನಿಂದ ಅಸಿಸ್ಟೆಂಟ್ ಗವರ್ನರ್ ಕ್ಲಬ್ ಅಸೆಂಬ್ಲಿ

ಸುಬ್ರಹ್ಮಣ್ಯ ಮಾ .21: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಮುಂದಿನ ತಿಂಗಳು ಡಿಸ್ಟ್ರಿಕ್ಟ್ ಗವರ್ನರ್ ವಿಕ್ರಮದತ್ತ ಅವರು ಭೇಟಿ ನೀಡುವ ಸಮಯದಲ್ಲಿ ಪೂರ್ವ ತಯಾರಿ ಹಾಗೂ ಪರಿಶೀಲನೆಗಾಗಿ ರೋಟರಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ವಿನಯಕುಮಾರ್ ಬೆಳ್ಳಾರೆ ಅವರು ಬುಧವಾರ ಏನೇಕಲ್ಲಿನ ರೈತ ಯುವಕ ಮಂಡಲ ಸಭಾಭವನದಲ್ಲಿ ಕ್ಲಬ್ ಅಸೆಂಬ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸುಬ್ರಹ್ಮಣ್ಯ ರೋಟರಿ...

ಪ್ರೇಕ್ಷಕರ ಮನಗೆದ್ದು 5 ನೇ ವಾರಕ್ಕೆ ಪಾದಾರ್ಪಣೆ ಮಾಡಿದ “ಭಾವ ತೀರ ಯಾನ” – ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಸಂಭ್ರಮಾಚರಣೆ – ಮಾ.22 ರಂದು ಸಂಜೆ 4.30 ಕ್ಕೆ ಶೋ ಲಭ್ಯ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ಹೌಸ್ ಫುಲ್ ಪ್ರದರ್ಶನದೊಂದಿಗೆ 5 ನೇ ವಾರಕ್ಕೆ ಕಾಲಿರಿಸಿದ ಹಿನ್ನೆಲೆಯಲ್ಲಿ ಇಂದು ಪುತ್ತೂರಿನ‌ ಭಾರತ್ ಸಿನೇಮಾಸ್ ನಲ್ಲಿ ಸಂಭ್ರಮಾಚರಣೆ ನಡೆಯಿತು.‌ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ್ ಅಂಬೆಕಲ್ಲು, ನಟ ತೇಜಸ್ ಕಿರಣ್,ಸಂದೀಪ್ ರಾಜಗೋಪಾಲ್,...

ಸುಳ್ಯ :ವಿಶ್ವ ಜಲದಿನ ಅಂಗವಾಗಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಜೀವನದಿ ಪಯಸ್ವಿನಿಗೆ ಆರತಿ ಕಾರ್ಯಕ್ರಮ

ವಿಶ್ವ ಜಲ ದಿನದ ಅಂಗವಾಗಿ ಕರ್ನಾಟಕದ ಜೀವನಾಡಿ ಕಾವೇರಿ ಮಾತೆಗೆ ನಮನ ಸಲ್ಲಿಸುವ ಕಾರ್ಯಕ್ರಮ ಕಾವೇರಿ ಆರತಿ ಇಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ ಭಾಗಮಂಡಲದ ತಲ ಕಾವೇರಿ ಯಲ್ಲಿ ಪೂಜೆ ಸಲ್ಲಿಸಿ ಸಂಜೆ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಆವರಣದಲ್ಲಿ ಕಾವೇರಿ ಆರತಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸುಳ್ಯ ಯುವ ಕಾಂಗ್ರೆಸ್...

ಮಾವಿನಕಟ್ಟೆ ಒಕ್ಕೂಟದ ವತಿಯಿಂದ ಸ್ವಚ್ಛತಾ ಕಾರ್ಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃಧಿ ಯೋಜನೆ ಮಾವಿನಕಟ್ಟೆ ಒಕ್ಕೂಟದ ವತಿಯಿಂದ ಮಾವಿನಕಟ್ಟೆ ಶ್ರೀ ವಿಷ್ಣು ಮೂರ್ತಿ ದೈವಸ್ಥಾನ ದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತುಕಾರ್ಯಕ್ರಮದಲ್ಲಿ ಒಕ್ಕೂಟ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸಂಘದ ಸದಸ್ಯರು, ಸೇವಾಪ್ರತಿನಿಧಿ ಭಾಗವಹಿಸಿ ಸಹಕರಿಸಿದರು.
Loading posts...

All posts loaded

No more posts

error: Content is protected !!