ಅಡ್ಕಾರು : 33 ಕೆವಿ ವಿದ್ಯುತ್ ಕಂಬಕ್ಕೆ ಲಾರಿ ಗುದ್ದಿ ವಿದ್ಯುತ್ ವ್ಯತ್ಯಯ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಡ್ಕಾರ್ ಬಳಿ 33 ಕೆ.ವಿ. ವಿದ್ಯುತ್ ಲೈನ್ ನ ಕಂಬಕ್ಕೆ ಲಾರಿ ಗುದ್ದಿ ಹಾನಿಯಾಗಿದೆ. ರಾತ್ರಿ 3.30 ಸುಮಾರಿಗೆ ಈ ಘಟನೆ ನಡೆದಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಮಧ್ಯಾಹ್ನದ ವೇಳೆಗೆ ದುರಸ್ತಿ ಕಾರ್ಯ ಪೂರ್ಣಗೊಳ್ಳಬಹುದೆಂದು ಮೆಸ್ಕಾಂ ಮೂಲಗಳಿಂದ ತಿಳಿದುಬಂದಿದೆ.

ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಂದ ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಕೆ.ಎಂ.ಮುಸ್ತಫರಿಗೆ ಅಭಿನಂದನೆ

ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರ ದ ನಗರಾಭಿವೃದ್ಧಿ Sunflower ನೇಮಕಗೊಂಡ ಕೆ. ಎಂ. ಮುಸ್ತಫ ರನ್ನು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ನಿವೃತ್ತ ಐಪಿಎಸ್ ಅಧಿಕಾರಿ ನಿಸಾರ್ ಅಹ್ಮದ್ ರವರು ಬೆಂಗಳೂರಿನ ಆಯೋಗದ ಕಚೇರಿಯಲ್ಲಿ ಅಭಿನಂದಿಸಿದರು. ಅಭಿನಂದಿಸಿ ಮಾತನಾಡಿದ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಹಾಯ, ಸೌಲಭ್ಯ ತಲುಪಿದಾಗ ಸರ್ಕಾರ...
Ad Widget

ಗುತ್ತಿಗಾರು : ಹಿತೈಷಿ ಎಚ್. ಹಾಗೂ ಧೃತಿಕ್ ಎಂ. ಮುಡಿಪು ನವೋದಯ ಶಾಲೆಗೆ  ಆಯ್ಕೆ

ಅರಿವು ಕೇಂದ್ರ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮತ್ತು ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರ ಗುತ್ತಿಗಾರು ಇದರ ಸಹಯೋಗದೊಂದಿಗೆ ನಡೆಯುತ್ತಿದ್ದ ನವೋದಯ/ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರ 2024-2025 ನೇ ಸಾಲಿನ ವಿದ್ಯಾರ್ಥಿಗಳಾದ ಹಿತೈಷಿ ಎಚ್( ದೇವಚಳ್ಳ ಗ್ರಾಮದ ಚಂದ್ರಹಾಸ ಮತ್ತು ಗಾಯತ್ರಿ ದಂಪತಿಗಳ ಪುತ್ರಿ)...

6ನೇ ವಾರಕ್ಕೆ ಕಾಲಿರಿಸಿದ “ಭಾವ ತೀರ ಯಾನ” – ಮಾ.29ರಂದು ಮಧ್ಯಾಹ್ನ 1.45 ಕ್ಕೆ ಶೋ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6ನೇ ವಾರಕ್ಕೆ ಕಾಲಿರಿಸಿದೆ. ಮಾ.29ರಂದು ಮಧ್ಯಾಹ್ನ 1.45 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

ಬೆಳ್ಳಾರೆ : ಅಸೌಖ್ಯದಿಂದ ಯುವಕ ಮೃತ್ಯು

ಬ್ರೈನ್ ಹೆಮರೇಜ್ ನಿಂದ ಯುವಕನೋರ್ವ ಮೃತಪಟ್ಟ ಘಟನೆ ಇಂದು ಬೆಳ್ಳಾರೆಯಿಂದ ವರದಿಯಾಗಿದೆ. ಬೆಳ್ಳಾರೆ ಗ್ರಾಮದ ಕೊಳಂಬಳ ರುಕ್ಮಯ್ಯ ಶೆಟ್ಟಿಯವರ ಪುತ್ರ ಲೋಕೇಶ್ ಮೃತ ದುರ್ದೈವಿ.ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕೃಪಾ, ಜ್ಞಾನಗಂಗಾ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ ರಿತ್ವಿಕ್, ಮೂರು ವರ್ಷದ ಪುತ್ರಿ ಶರಾಯ...

ಸುಳ್ಯ ನ.ಪಂ. ಸದಸ್ಯ ಶರೀಫ್ ಕಂಠಿಯವರ ಮೇಲೆ ಸುಳ್ಳು ಆರೋಪ,  ಎ.ಐ.ಕೆ.ಎಂ.ಸಿ.ಸಿ. ಖಂಡನೆ

ಸುಳ್ಯ ನಗರ ಪಂಚಾಯತ್ ಸದಸ್ಯ ಸಮಾಜ ಸೇವಕ ಷರೀಫ್ ಕಂಠಿ ಯವರ ಮೇಲೆ ಯಾವುದೋ ದುರುದ್ದೇಶದಿಂದ ಮಹಿಳೆಯೊಬ್ಬರು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ವಿಷಯ. ಸುಳ್ಯ ನಗರದ ಸಾರ್ವಜನಿಕರಿಗೆ ಕಂಠಿ ಯವರ ಬಗ್ಗೆ ಅವರ ಸೇವೆಯ ಬಗ್ಗೆ ಗೊತ್ತಿದ್ದು ಮಹಿಳೆಯೊಬ್ಬರು ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಿರುವುದನ್ನು ಸುಳ್ಯ ತಾಲೂಕು AIKMCC ತೀವ್ರವಾಗಿ ಖಂಡಿಸುತ್ತದೆ, ಸಮಾಜದಲ್ಲಿ...

ಗುತ್ತಿಗಾರು : ಕೆನರಾ ಬ್ಯಾಂಕ್ ಎಟಿಎಂ ಅವ್ಯವಸ್ಥೆ – ಬೇಕಿದೆ ಪರ್ಯಾಯ ವ್ಯವಸ್ಥೆ

ಬೆಳೆಯುತ್ತಿರುವ ಗುತ್ತಿಗಾರಿನಲ್ಲಿ ಇರುವುದು ಒಂದೇ ರಾಷ್ಟ್ರೀಕೃತ ಬ್ಯಾಂಕ್ ,ಒಂದೇ ಎಟಿಎಂ. ಉತ್ತಮ ಸೇವೆ ನೀಡುವಲ್ಲಿ ನಿರಂತರ ವಿಫಲ. ಹೆಚ್ಚಿನ ದಿನಗಳಲ್ಲಿ ಎಟಿಎಂ ನೋ ಸರ್ವೀಸ್ ನಲ್ಲಿರುತ್ತದೆ. ನಾಲ್ಕು ಗ್ರಾಮಗಳ ಜನರಿಗೆ ಇರುವುದು ಇದೊಂದೇ ಬ್ಯಾಂಕ್. ಈ ಮೊದಲು ಸಿಂಡಿಕೇಟ್ ಬ್ಯಾಂಕ್ ಆಗಿದ್ದಾಗಲೂ ಉತ್ತಮ ಸೇವೆ ನೀಡದ ಬ್ಯಾಂಕ್ ಕೆನರಾ ಬ್ಯಾಂಕ್ ಆಗಿ ಬದಲಾದರೂ ಗುಣಮಟ್ಟದಲ್ಲಿ ಬದಲಾಗಿಲ್ಲ....

ಕುಮಾರಧಾರ ನದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಕುಕ್ಕೆ ಶ್ರೀ ದೇವಳದ ಅಧಿಕಾರಿಗಳು ಹಾಗೂ ನೌಕರರು

ಸುಬ್ರಹ್ಮಣ್ಯ ಮಾ.26: ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಹಾಗೂ ಪರಿಸರದ ಪ್ರದೇಶಗಳಲ್ಲಿ ವಿಪರೀತ ತ್ಯಾಜ್ಯ ವಸ್ತುಗಳನ್ನ ಭಕ್ತಾದಿಗಳು ಎಸೆದು ಇಡೀ ನೀರು ಹಾಗೂ ಪರಿಸರ ಮಲಿನಗೊಂಡಿರುತ್ತದೆ. ಶ್ರೀ ದೇವಳದ ವತಿಯಿಂದ ಅಲ್ಲಿಯ ನೌಕರರು ನೀರಿನಿಂದ ಎಷ್ಟೇ ತ್ಯಾಜ್ಯಗಳಾದ ಬಟ್ಟೆ ಬರೆಗಳನ್ನ ತೆಗೆದರೂ ಮತ್ತೆ ಮತ್ತೆ ಭಕ್ತಾದಿಗಳು ನೀರಲ್ಲೇ ಬಟ್ಟೆಗಳನ್ನ ಬಿಡುವ ಚಾಳಿಯನ್ನು ಮುಂದುವರಿಸುತ್ತಿರುವುದು ಕೇದಕರ....

ಎನ್‌.ಎಂ .ಎಂ .ಎಸ್ ಪರೀಕ್ಷೆಯಲ್ಲಿ ಲಾವಣ್ಯ ಡಿ.ಎನ್.‌ ತಾಲೂಕಿಗೆ ತೃತೀಯ

2024 - 25 ನೇ ಸಾಲಿನ ಎನ್‌.ಎಂ .ಎಂ .ಎಸ್ ಪರೀಕ್ಷೆಯಲ್ಲಿ ಲಾವಣ್ಯ ಡಿ.ಎನ್.‌ 180 ರಲ್ಲಿ 104 ಅಂಕ ಪಡೆದು ಸುಳ್ಯ ತಾಲೂಕಿಗೆ ತೃತೀಯ ಸ್ಥಾನಿಯಾಗಿದ್ದಾರೆ. ಎಲಿಮಲೆ ಸ.ಪ್ರೌ.ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈ ಕೆ ಗುತ್ತಿಗಾರು ಗ್ರಾಮದ ದೇರುಮಜಲು ಪೈಕ ನೂತನ್ ಹಾಗೂ ರೂಪ ದಂಪತಿಗಳ ಪುತ್ರಿ.

ಕುಲ್ಕುಂದ ಬಸವೇಶ್ವರ ದೇವಳಕ್ಕೆ ವಾಟರ್ ಫಿಲ್ಟರ್ ಹಾಗೂ ಕಾಣಿಕೆ ಹುಂಡಿ ಕೊಡುಗೆ

ಸುಬ್ರಹ್ಮಣ್ಯ ಮಾ 27: 800 ವರ್ಷಗಳ ಇತಿಹಾಸವನ್ನು ಹೊಂದಿರುವ ಪುರಾಣ ಪ್ರಸಿದ್ಧ ದೇವಸ್ಥಾನ, ಬಸವನ ಹಣೆಯ ಮೇಲೆ ಈಶ್ವರ ಲಿಂಗ ಇರುವಂತಹ ಏಕೈಕ ದೇವಸ್ಥಾನ, ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ಪ್ರಾದೇಶಿಕ ಹಾಗೂ ವಲಯ ಕಛೇರಿ ವತಿಯಿಂದ ದೂರದೂರುಗಳಲ್ಲಿ ಇರುವ ಭಕ್ತಾದಿಗಳಿಗೆ ಕಾಣಿಕೆಯನ್ನ ಸಲ್ಲಿಸಲು ಅನುಕೂಲವಾಗುವಂತೆ ಸ್ಕ್ಯಾನರ್...
Loading posts...

All posts loaded

No more posts

error: Content is protected !!