- Tuesday
- September 29th, 2026
61 ದಿನ ಪೂರೈಸಿದ "ಭಾವ ತೀರ ಯಾನ" ಸಿನಿಮಾ ಎ.22 ರಂದು ಕೊನೆಯ ಪ್ರದರ್ಶನ ನೀಡುವುದೆಂದು ಚಿತ್ರದ ನಿರ್ದೇಶಕರು ತೀರ್ಮಾನಿಸಿದ್ದರು. ಆದರೇ ಎ.22 ರಂದು ಪ್ರೇಕ್ಷಕರ ಭಾರಿ ಬೆಂಬಲದ ಹಿನ್ನೆಲೆಯಲ್ಲಿ ಪುತ್ತೂರಿನ ಭಾರತ್ ಸಿನೇಮಾಸ್ ನವರು ಚಿತ್ರಪ್ರದರ್ಶನ ನಿಲ್ಲಿಸುವುದು ಬೇಡ ಮುಂದುವರೆಸೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದುದರಿಂದ ಎ.23 ಬುಧವಾರ ಸಂಜೆ 4.45ಕ್ಕೆ ಚಿತ್ರದ ಪ್ರದರ್ಶನಗೊಳ್ಳಲಿದೆ. ಈ ಚಿತ್ರಕ್ಕೆ...
ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಕಾರಿನ ಬಾಳೆಬೈಲು ಎಂಬಲ್ಲಿನ ನಾಗರಿಕರು ರಸ್ತೆ ದುರವಸ್ಥೆಯ ಹಿನ್ನೆಲೆಯಲ್ಲಿ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರ ಮಾಡುವುದಾಗಿ ನಿರ್ಧರಿಸಿ ಏ.20 ರಂದು ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಮಾಡಿರುವುದಾಗಿ ತಿಳಿದುಬಂದಿದೆ.ಕಲ್ಮಕಾರು ಶಕ್ತಿನಗರದಿಂದ ಬಾಳೆಬೈಲು ಭಾಗಕ್ಕೆ ತೆರಳುವ ರಸ್ತೆಯು ತೀರಾ ಹದಗೆಟ್ಟು ವಾಹನ ಸಂಚಾರಕ್ಕೆ ಕಷ್ಟಕರವಾಗಿದ್ದು, ಈ ಭಾಗದ ಸಾರ್ವಜನಿಕರು...
ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಸುಳ್ಯ, ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ಎ. 18ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡ ಮಾಡುವ ಚಂದನ ಪ್ರತಿಭಾರತ್ನ ಪ್ರಶಸ್ತಿ 2024 ನ್ನು ಸುಳ್ಯದ ಗಾಯಕರಾದ ವಿಜಯ್ ಕುಮಾರ್ ಸುಳ್ಯ ನೀಡಿ ಗೌರವಿಸಿರುತ್ತಾರೆ. ಟಿ.ಎ.ಪಿ.ಸಿ.ಎಂ.ಎಸ್...
ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ (ರಿ) ಆಶ್ರಯದಲ್ಲಿ ಎ. 11 ರಿಂದ ಎ. 20ರವರೆಗೆ ನಡೆದ ವಾಲಿಬಾಲ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಪ್ರಯುಕ್ತ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಎ. 20 ರಂದು ಹೊನಲು ಬೆಳಕಿನಲ್ಲಿ ನಡೆಯಿತು. ಸುಳ್ಯ ತಾಲೂಕಿನ 18 ಗ್ರಾಮಗಳ 18 ತಂಡಗಳು ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದವು....
ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನದೊಂದಿಗೆ 9ನೇ ವಾರದಲ್ಲಿ ಮುನ್ನಡೆಯುತ್ತಿದ್ದು, 60 ನೇ ದಿನಕ್ಕೆ ಕಾಲಿರಿಸಿದೆ. ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಎ.21, ಸೋಮವಾರ ಬೆಳಿಗ್ಗೆ 11 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ.
ಜಾಲ್ಸೂರು ಗ್ರಾಮದ ಅಡ್ಕಾರು ದಿ. ತೇಜಕುಮಾರ್ ರವರ ಪುತ್ರ ಗ್ರಾ.ಪಂ.ಮಾಜಿ ಸದಸ್ಯ ಸನತ್ ಅಡ್ಕಾರು ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 46 ವರ್ಷ ವಯಸ್ಸಾಗಿತ್ರು. ಮೃತರು ತಾಯಿ, ಪತ್ನಿ, ಪುತ್ರ, ಸಹೋದರ ಶರತ್ ಅಡ್ಕಾರ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಶ್ರೀ ಅಯ್ಯಪ್ಪ ಭಜನಾ ಮಂಡಳಿ ಕೊಲ್ಲಮೊಗ್ರು ಇದರ ನೇತೃತ್ವದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಬ್ರಹ್ಮಣ್ಯ ವಲಯ ಹಾಗೂ ಊರಿನವರ ಸಹಕಾರದೊಂದಿಗೆ ಏಳು ದಿನಗಳ ಕಾಲ ಕೊಲ್ಲಮೊಗ್ರು ಮಯೂರ ಕಲಾಮಂದಿರದಲ್ಲಿ ನಡೆದ “ಮಕ್ಕಳ ಸಂಸ್ಕಾರ ಮತ್ತು ಭಜನಾ ತರಬೇತಿ ಶಿಬಿರ” ದ ಸಮಾರೋಪ ಸಮಾರಂಭವು ಏ.17 ರಂದು ನಡೆಯಿತು. ತಂಬಿನಡ್ಕ ದಿಂದ ಮಕ್ಕಳ ಕುಣಿತ ಭಜನೆಯೊಂದಿಗೆ...
ಕೊಲ್ಲಮೊಗ್ರ ಗ್ರಾಮದ ಕಟ್ಟ ಗೋವಿಂದನಗರ ನಿವಾಸಿ ಈಶ್ವರ ಗೌಡ (ಬಾಬು) ರವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃದಲ್ಲಿ ಎ.18 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗಾಯತ್ರಿ , ಪುತ್ರಿ ವನಿತಾ ತೀರ್ಥರಾಮ, ಪುತ್ರ ನವೀನ್ ಕುಮಾರ್, ಸಹೋದರರಾದ ಮಂಜಪ್ಪ ಗೌಡ , ಶೇಷಪ್ಪ ಗೌಡ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಮೆಸ್ಕಾಂನ ಬೆಳ್ಳಾರೆ, ಗುತ್ತಿಗಾರು ಹಾಗೂ ಪಂಜ ಶಾಖಾ ಕಛೇರಿ ಮಟ್ಟದ ಗ್ರಾಹಕ ಸಲಹಾ ಸಮಿತಿಯ ಸದಸ್ಯರುಗಳ ನೇಮಕ ಮಾಡಿ ಸರಕಾರ ಆದೇಶಿಸಿದೆ. ಬೆಳ್ಳಾರೆ ಶಾಖೆಯ ಸದಸ್ಯರಾಗಿ ಕರುಣಾಕರ ಆಳ್ವ ಕೊಡಿಯಾಲ, ಉಷಾ ಗಂಗಾಧರ ಇಂದಿರಾನಗರ ಬೆಳ್ಳಾರೆ, ನಳಿನಿ ಪುರಂದರ ಕುಲಾಲ್ ಬೆಳ್ಳಾರೆ, ಇಬ್ರಾಹಿಂ ಅಂಬಟೆಗುಡ್ಡೆ ಪೆರುವಾಜೆ, ಅಬೂಬಕ್ಕರ್ ಅರಾಫ ಬಾಳಿಲ ಇವರನ್ನು ಸರಕಾರ ನೇಮಕ ಮಾಡಿ...
33/11ಕೆ.ವಿ. ಮಾಡಾವು -ಸುಳ್ಯ, 33/11ಕೆ.ವಿ. ಪುತ್ತೂರು ಕ್ಯಾಂಪ್ಕೋ ಕಾವು ಮತ್ತು 33/11ಕೆ.ವಿ. ಪುತ್ತೂರು ಕುಂಬ್ರ ವಿದ್ಯುತ್ ಮಾರ್ಗಗಳಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಎ. 18 (ಶುಕ್ರವಾರ) ಪೂರ್ವಾಹ್ನ 9.30 ರಿಂದ ಸಾಯಂಕಾಲ 5.30 ಗಂಟೆಯವರೆಗೆ ಸುಳ್ಯ, ಕಾವು ಮತ್ತು ಕುಂಬ್ರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು...
Loading posts...
All posts loaded
No more posts
