- Tuesday
- September 29th, 2026
ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ ಬಳಿ ರಸ್ತೆಗೆ ಬಾಗಿ ಮರವೊಂದು ನಿಂತಿದ್ದು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸಂಚರಿಸುವ ರಸ್ತೆಯಲ್ಲಿರುವ ಮರವನ್ನು ಅಪಾಯ ಸಂಭವಿಸುವ ಮೊದಲು ತೆರವುಗೊಳಿಸಲು ನಾಗರಿಕರು ಒತ್ತಾಯಿಸಿದ್ದಾರೆ.
2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುತ್ತಿಗಾರು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಯಶಸ್ವಿ ಎರ್ದಡ್ಕ ಇವರು ಫಲಿತಾಂಶ ಉತ್ತಮಪಡಿಸುವ ಸಲುವಾಗಿ ಮರು ಪರೀಕ್ಷೆ ಬರೆದಿದ್ದು 21 ಅಂಕ ಹೆಚ್ಚುವರಿ ಪಡೆದುಕೊಂಡಿರುತ್ತಾರೆ. ಮರು ಪರೀಕ್ಷೆಯಲ್ಲಿ 522 ಡಿಸ್ಟಿಂಕ್ಷನ್ ಅಂಕ ಪಡೆದದಿರುತ್ತಾರೆ. ಇವರು ಮಾಧವ ಎರ್ದಡ್ಕ ಹಾಗೂ ರೂಪ ಎರ್ದಡ್ಕ ರವರ...
ಇದೀಗ ಮಳೆಗಾಲ ಪ್ರಾರಂಭವಾಗಿದ್ದು, ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಇನ್ನೇನು ಕೆಲವೇ ದಿನಗಳಲ್ಲಿ ನದಿ-ಜಲಪಾತ, ಹಳ್ಳ-ಕೊಳ್ಳಗಳೆಲ್ಲಾ ತುಂಬಿ ಹರಿಯಲು ಪ್ರಾರಂಭಿಸುತ್ತವೆ.ಮನುಷ್ಯ ಸೇರಿದಂತೆ ಪ್ರಾಣಿ-ಪಕ್ಷಿ, ಜೀವಸಂಕುಲದ ಉಳಿವಿಗೆ ಮಳೆ ಅತ್ಯಗತ್ಯ. ಆದರೆ ಮನುಷ್ಯರಾದ ನಾವುಗಳು ಇಂದು ನಮ್ಮ ಉಳಿವಿಗಾಗಿ ಸುರಿಯುತ್ತಿರುವ ಈ ಮಳೆಯಲ್ಲಿ ಹುಚ್ಚಾಟ ಮಾಡಿ ನಮ್ಮ ಪ್ರಾಣಕ್ಕೆ ನಾವೇ ಕುತ್ತು...
ಸಂಪಾಜೆ ಗ್ರಾಮದ ಗೂನಡ್ಕ ಉಮ್ಮರ್ ಹಾಜಿ ಯವರ ಬಾಡಿಗೆ ಮನೆ ಮೇಲೆ ಸಾಗುವಾನಿ ಮರ ಬಿದ್ದು ಸಂಪೂರ್ಣ ಹಾನಿಯಾಗಿದ್ದು, ಅದರಲ್ಲಿ ವಾಸವಿದ್ದ 3 ಕುಟುಂಬ ಅಪಾಯದಿಂದ ಪಾರಾಗಿದ್ದಾರೆ.ಮನೆಯಲ್ಲಿ ವಾಸವಿದ್ದ 2 ಮಕ್ಕಳು ಹಾಗೂ ತಾಯಿಯ ಮೇಲೆ ಸೀಟು ಬಿದ್ದು ಸಣ್ಣ ಪುಟ್ಟ ಹಾನಿಯಾಗಿದ್ದು ಸುಳ್ಯದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ಅಲ್ಲದೆ 3 ಮನೆಗಳಲ್ಲಿ...
ಬೆಳ್ಳಾರೆ ಗುತ್ತಿಗಾರು 33ಕೆ.ವಿ. ವಿದ್ಯುತ್ ಲೈನ್ ನ ಕಂಬವೊಂದು ಬಾಳಿಲ ಸಮೀಪ ಅಪಾಯಕಾರಿ ಸ್ಥಿತಿಯಲ್ಲಿದ್ದು ರಸ್ತೆಗೆ ಬೀಳುವ ಹಂತದಲ್ಲಿದೆ. ವಿದ್ಯುತ್ ಕಂಬದ ಬಳಿಯೇ ಪೈಪ್ ಲೈನ್ ಕಾಮಗಾರಿ ನಡೆಸಿದ್ದರಿಂದ ಕಂಬ ಬೀಳುವಂತಾಗಿದೆ. ಮಳೆಗಾಲ ಆರಂಭವಾದರೂ ಇನ್ನೂ ಎಲ್ಲಾ ಕಡೆ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಜನತೆ ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಮಳೆಗಾಲ ಕಾಮಗಾರಿ...
ಸುಬ್ರಹ್ಮಣ್ಯ ಮೇ 24: ಬಿಳಿನೆಲೆ ಕೈಕಂಬ ಯುವಕ ಮಂಡಲದ ನೂತನ ಕಟ್ಟಡ ಯುವಸೌಧದ ಉದ್ಘಾಟನೆ ಹಾಗೂ ಸುವರ್ಣ ಮಹೋತ್ಸವ ಸಮಾರಂಭವು ಮೇ 25 ರವಿವಾರದಂದು ಜರಗಲಿರುವುದು. ಬೆಳಿಗ್ಗೆ ನೂತನ ಕಟ್ಟಡದ ಉದ್ಘಾಟನೆಯನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ಲೀಲಾವತಿ ದೇವರಾಜ್ ಮುದ್ದಾಜೆ ವೆಂಕಟಪುರ ಇವರು ನೆರವೇರಿಸಲಿರುವರು. ಸಂಜೆ ಸುವರ್ಣ ಮಹೋತ್ಸವ ಸಭಾ ಕಾರ್ಯಕ್ರಮ ನಡೆಯಲಿದ್ದು ತದನಂತರ ಪುಟಾಣಿ...
ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ನಡೆದ ಕಲಾ ಸ್ಪರ್ಧೆಯಲ್ಲಿ ಸಂಸ್ಕೃತಿಯ ಚಲನೆ ಎನ್ನುವ ಕಲಾ ಕೃತಿಯು ಆಯ್ಕೆಯಾಗಿದ್ದು. 52ನೇ ವಾರ್ಷಿಕ ಬಹುಮಾನಕ್ಕೆ ಸುಳ್ಯ ತಾಲೂಕಿನ ಮರ್ಕಂಜ ಪ್ರಶಾಂತ್ ಕೆ ಅವರು ಭಾಜನರಾಗಿದ್ದಾರೆ. ಇವರು ಉಮೇಶ್ ಹಾಗೂ ಕಾವೇರಿ ದಂಪತಿಗಳ ದ್ವಿತೀಯ ಪುತ್ರ . ಇವರು ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ visual art ಎನ್ನುವ ವಿಚಾರದಲ್ಲಿ ಸ್ನಾತಕೋತ್ತರ ಮುಗಿಸಿರುತ್ತಾರೆ....
ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಸುಳ್ಯದ ಬಂಗ್ಲೆಗುಡ್ಡೆಯಲ್ಲಿ ನಿರ್ಮಿಸಿರುವ ನೂತನ ಕಟ್ಟಡ ಮತ್ತು ಆಧುನಿಕ ಸಂಸ್ಕರಣಾ ಘಟಕ ಹಾಗೂ ಜೇನು ಚಾಕೋಲೆಟ್ ಹನಿ ಬೈಟ್ ನ ಲೋಕಾರ್ಪಣೆ ಮೇ.23 ರಂದು ನಡೆಯಿತು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆಯವರು ನೂತನ ಕಟ್ಟಡ ಹಾಗೂ ಸಂಸ್ಕರಣಾ...
ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘ (Ex Servicemen Association Sullia) ದ ವತಿಯಿಂದ ಪಶು ಸಂಗೋಪನ ಇಲಾಖೆಯ ಸುಳ್ಯ ತಾಲೂಕು ಆಸ್ಪತ್ರೆಗೆ ಎಲೆಕ್ಟ್ರಿಕ್ ಆಟೋಕ್ಲೇವ್ (Electric Autoclave) ಯಂತ್ರವನ್ನು 2024 25 ನೇ ಸಾಲಿನ ಕೊಡುಗೆಯಾಗಿ ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕರಾದ ನಿತಿನ್ ಪ್ರಭು ಕೆ ಇವರಿಗೆ ಹಸ್ತಾಂತರಿಸಿದರು. ಈ ಉಪಕರಣವನ್ನು ದಿನನಿತ್ಯ ನಡೆಯುವ...
✍️ಉಲ್ಲಾಸ್ ಕಜ್ಜೋಡಿ “ನಾವು ಮಾಡಬೇಕೆಂದಿರುವ ಪ್ರತಿಯೊಂದು ಕೆಲಸಗಳಿಗೂ ಕೂಡ ಸಮಯ-ಸಂದರ್ಭಗಳು ಕೂಡಿ ಬರಬೇಕು” ಎನ್ನುವ ಮಾತಿದೆ. ಅದೇ ರೀತಿ ಕಳೆದ ಐದು ವರ್ಷಗಳಿಂದ “ಅಮರ ಸುದ್ದಿ ವಾರಪತ್ರಿಕೆಯಲ್ಲಿ” ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿರುವ ನಾನು ನನ್ನ “ತಂದೆ-ತಾಯಿ” ಹಾಗೂ “ಅಮರ ಸುದ್ದಿ ಪತ್ರಿಕೆಯ ಪ್ರಧಾನ ಸಂಪಾದಕರು” ಹಾಗೂ “ಓದುಗರಾದ ನಿಮ್ಮೆಲ್ಲರ” ಪ್ರೋತ್ಸಾಹದೊಂದಿಗೆ ಹವ್ಯಾಸಿ ಬರಹಗಾರನಾಗಿ ಪುಟ್ಟ ಪುಟ್ಟ ಕವನ...
Loading posts...
All posts loaded
No more posts
