- Tuesday
- September 29th, 2026
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಇದೇ ಹವಾಮಾನ ಪರಿಸ್ಥಿತಿ ಮುಂದುವರಿಯುವ ಸೂಚನೆಯಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ & ಪ್ರೌಢಶಾಲೆಗಳಿಗೆ, ಪದವಿಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ನಾಳೆ(ಜು.25) ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು...
ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ ಸುದೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶಿವರಾಮ.ಕೆ ಕುಚ್ಚಾಲ ಅವರಿಗೆ ಬೀಳ್ಕೊಡುಗೆ ಸಮಾರಂಭ ಇಂದು ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು. ಶಿವರಾಮ.ಕೆ ಅವರನ್ನು ಅಭಿನಂದಿಸಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಜಿ.ಪಂ ಸದಸ್ಯರಾದ ಭರತ್ ಮುಂಡೋಡಿ ಮಾತನಾಡಿ ಅವರ ಕರ್ತವ್ಯ ನಿಷ್ಠೆಯನ್ನು ಸ್ಮರಿಸುತ್ತಾ "ನಿಷ್ಠೆಯಿಂದ ಕೆಲಸ...
ಕಡಬ ತಾಲೂಕು ಏನೆಕಲ್ಲು ಗ್ರಾಮದ ಪದ್ನಡ್ಕ ದಿ.ವಿಜಯಕುಮಾರ್ ಪೂಜಾರಿಯವರ ಪುತ್ರಿ ಅಶ್ವಿನಿ(25) ಅಸೌಖ್ಯದಿಂದ ಜು.21 ರಂದು ನಿಧನರಾದರು. ಅಶ್ವಿನಿ ಅವರಿಗೆ ಒಂದುವರೆ ವರ್ಷಗಳ ಹಿಂದಷ್ಟೇ ಕೊಡಿಂಬಾಳದ ರಂಜಿತ್ ಅವರೊಂದಿಗೆ ವಿವಾಹವಾಗಿತ್ತು. ಅನಾರೋಗ್ಯ ಎಂದು ಚಿಕಿತ್ಸೆಗೆ ಹೋದಾಗ ಬ್ಲಡ್ ಕ್ಯಾನ್ಸರ್ ಎಂದು ಗೊತ್ತಾಗಿ ಅವರು ಮಂಗಳೂರಿನ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತಿ ರಂಜಿತ್, ತಾಯಿ...
ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಪ್ರಥಮ ಬಾರಿಗೆ ಸುಳ್ಯ ತಾಲೂಕು ಪಂಚಾಯತ್ ಗೆ ಭೇಟಿ ನೀಡಿದ ಸಿ.ಇ.ಓ ವಿನಾಯಕ್ ಖರ್ಬಾರಿ ಯವರನ್ನು ಇಂದು ತಾಲೂಕು ಪಂಚಾಯತ್ ಕಚೇರಿಯಲ್ಲಿ ಭೇಟಿ ಮಾಡಿದ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು, ಕೆ.ಪಿ.ಸಿ.ಸಿ ಪ್ರಧಾನ...
ಆಟೋರಿಕ್ಷಾ ಚಾಲಕರ ಸಂಘ ಹರಿಹರಪಲ್ಲತ್ತಡ್ಕ ಇದರ ವತಿಯಿಂದ ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನಾ ದಿನಾಚರಣೆಯನ್ನು ಇಂದು ಆಚರಿಸಲಾಯಿತು.ಸಂಘದ ಹಿರಿಯ ಸದಸ್ಯರಾದ ಪರಮೇಶ್ವರ ರಾಗಿಯಡ್ಕ ದೀಪ ಬೆಳಗಿಸಿ ಭಾರತಾಂಬೆಯ ಭಾವಚಿತ್ರಕ್ಕೆ ಫಲಪುಷ್ಪ ಅರ್ಪಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಧು ಗೋಳ್ಯಾಡಿ, ಕಾರ್ಯದರ್ಶಿ ರಾಕೇಶ್ ಬೆಂಡೋಡಿ, ಕೋಶಾಧಿಕಾರಿ ಭರತ್ ಕೇಮಟಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಅವೈಜ್ಞಾನಿಕ ಕಾಮಗಾರಿಗಳು ಪಶ್ಚಿಮ ಘಟ್ಟಗಳಿಗೆ ಇಂದು ಅಪಾರ ಹಾನಿ ತಂದಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಡಿನ ನಾಶ ಮುಂದಿನ ದಿನಗಳ ಭೀಕರತೆಯನ್ನು ಈಗಲೇ ಸಾರುತ್ತಿದೆ. ಉಳಿದಿರುವ ಕಾಡುಗಳನ್ನಾದರೂ ಉಳಿಸುವ ನಿರ್ಧಾರ ನಾವು ಮಾಡದಿದ್ದರೆ ಪ್ರಪಂಚ ನಾಶವಾಗುವ ದಿನ ದೂರವಿಲ್ಲ. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಅಗತ್ಯದ ಬಗ್ಗೆ ಚಿಂತಿಸಬೇಕು ಎಂದು ಖ್ಯಾತ ಪರಿಸರವಾದಿ ದಿನೇಶ್ ಹೊಳ್ಳ ಹೇಳಿದರು....
ಆಟಿ ಅಮಾವಾಸ್ಯೆ ಪ್ರಯುಕ್ತ ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆ ಜು.24 ರಂದು ಮುಂಜಾನೆ ಶ್ರೀ ದೇವರಿಗೆ ಪೂಜೆ ನಡೆದ ಬಳಿಕ ಮುಂಜಾನೆ ಗಂಟೆ 8 ರಿಂದ ಭಕ್ತರಿಗೆ ವಿಶೇಷ ತೀರ್ಥವಾಗಿ ಹಾಲೆ ಮರದ ಕಷಾಯ ವಿತರಣೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘದ ಸುಬ್ರಹ್ಮಣ್ಯ ಘಟಕದ ವತಿಯಿಂದ ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನಾ ದಿನಾಚರಣೆಯು ಇಂದು ನಡೆಯಿತು.ಭಾರತಾಂಬೆಯ ಭಾವಚಿತ್ರಕ್ಕೆ ಫಲಪುಷ್ಪ ಅರ್ಪಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸುಬ್ಬಪ್ಪ ಕುಲ್ಕುಂದ, ಗೌರವಾಧ್ಯಕ್ಷರಾದ ಗಿರಿಧರ ಹೊಸೊಳಿಕೆ, ಕಾರ್ಯದರ್ಶಿ ಅಜಿತ್ ಕಲ್ಲಾಜೆ, ಸಂಘಟನಾ ಕಾರ್ಯದರ್ಶಿ ದಿವಾಕರ ಪರ್ವತಮುಖಿ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಪ್ರಾಂತದ ಪೂರ್ಣಾವಧಿ ಕಾರ್ಯಕರ್ತರಾಗಿ ಮೈಸೂರು ಮಹಾನಗರ ಸಂಘಟನಾ ಕಾರ್ಯದರ್ಶಿಯಾಗಿ ಮಂದಾರ ಬಾಳುಗೋಡು ಆಯ್ಕೆಯಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ. ಈಗೀಗ ನಮಗೆ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳು, ಬೆಕ್ಕುಗಳು, ಚಿಕ್ಕಚಿಕ್ಕ ಮರಿಗಳು ಹಾಗೂ ಕೆಲವೊಮ್ಮೆ ದನ-ಕರುಗಳು ಕೂಡ ಕಾಣಸಿಗುತ್ತವೆ. ಅದರಲ್ಲಿ ಕೆಲವು ದನ-ಕರುಗಳು ಮೇಯಲು ಬಿಟ್ಟಿದ್ದೂ ಇರಬಹುದು, ಹಾಗೆಂದು ಎಲ್ಲಾ ದನ-ಕರುಗಳನ್ನು ಮೇಯಲು ಬಿಟ್ಟಿದ್ದು ಎಂದು ಹೇಳಲಾಗುವುದಿಲ್ಲ...ಈ ನಾಯಿ, ಬೆಕ್ಕು, ದನ-ಕರುಗಳನ್ನು...
Loading posts...
All posts loaded
No more posts
