- Saturday
- September 26th, 2026
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ – ರಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾಗಿ ಪೆರುವಾಜೆಯ ಉಮೇಶ್ ಕೆ. ಎಂ. ಬಿ ಮತ್ತು ಉಪಾಧ್ಯಕ್ಷೆಯಾಗಿ ಶ್ರೀಮತಿ ಜ್ಞಾನೇಶ್ವರಿಯವರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ ಮತ್ತು ಪೋಷಕರು ಶಿಕ್ಷಕ- ರಕ್ಷಕ ಸಂಘದ...
ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸಿಬ್ಬಂದಿಗಳಾಗಿ ಹೊರಗಿನ ಜನರನ್ನು ನೇಮಕ ಮಾಡುತ್ತಿದ್ದು ಅದರಿಂದ ಸ್ಥಳೀಯ ವಿದ್ಯಾವಂತರು ನಿರುದ್ಯೋಗಕ್ಕೆ ಒಳಗಾಗಿದ್ದಾರೆ. ಇದನ್ನು ಸರಿಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಪರಶುರಾಮ ಚಿಲ್ತಡ್ಕ ಒತ್ತಾಯಿಸಿದ್ದಾರೆ.ಅವರು ನ.20ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ದೇವಸ್ಥಾನದ ವಿವಿಧ ಹುದ್ದೆಗಳಿಗೆ ಸ್ಥಳಿಯರು ಅರ್ಜಿ ಹಾಕಿದ್ದರೂ ನೇಮಕಾತಿ ಮಾತ್ರ ಹೊರಗಿನ ಜನರಿಗೆ ಆಗುತ್ತಿದ್ದು ಇಲ್ಲಿಯವರಿಗೆ ತೊಂದರೆಯಾಗುತ್ತಿದೆ. ಸರ್ಪ ಸಂಸ್ಕಾರಕ್ಕೆ...
ತಾಲೂಕಿನ ಮಂಡೆಕೋಲು ಗ್ರಾಮದ ಕಣೆಮರಡ್ಕದಲ್ಲಿ ಸುಮಾರು ಐದು ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ನವೀಕರಣ ಕೆಲಸ ನಡೆಯುತ್ತಿದ್ದು ಜೀರ್ಣೋದ್ದಾರ ಕಾರ್ಯಗಳನ್ನು ಪೂರ್ತಿಗೊಳಿಸಿ ಮಂದಿರದ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮವು ಮುಂಬರುವ 2022ನೇ ಜನವರಿ 3 ರಿಂದ ಜನವರಿ 5 ರ ತನಕ ನಡೆಯಲಿದೆ. ಈ ಮಂದಿರವನ್ನು ಹಿರಿಯ ಅಯ್ಯಪ್ಪ ಮಾಲಾಧಾರಿ ಶ್ರೀ ಯಂ.ಕೆ...
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ‘ಕಾಂಗ್ರೆಸ್ ಸದಸ್ಯತ್ವ’ ಅಭಿಯಾನಕ್ಕೆ ಚಾಲನೆ ಹಾಗೂ ದಿ. ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ್ ರವರ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನರು ಕುರಿತ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯನ್ನು ಮಂಗಳೂರಿನ ನೆಹರೂ ಯುವ ಕೇಂದ್ರ ಹಾಗೂ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ನವೆಂಬರ್19 ರಂದು ಹಮ್ಮಿಕೊಳ್ಳಲಾಯಿತು. ಮುಂಬರುವ ಗಣರಾಜ್ಯೋತ್ಸವ ಹಾಗೂ ಸಂವಿಧಾನ ದಿನಾಚರಣೆ ಪ್ರಯುಕ್ತ ದೇಶ ಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ...
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನ.29ರಿಂದ ಡಿ.4ರವರೆಗೆ ಲಕ್ಷ ದೀಪೋತ್ಸವ ನಡೆಯಲಿದೆ. ಡಿ.3ರಂದು ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಡಿ.2ರಂದು ಸಂಜೆ 5ಕ್ಕೆ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದು, ಬೆಂಗಳೂರಿನ ಎಸ್.ವ್ಯಾಸಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ರಾಮಚಂದ್ರ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ನ.3ರಂದು ಸಾಹಿತ್ಯ...
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಟಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಎಳೆಯುವ ರಥಗಳಿಗೆ ಗೂಟ ಪೂಜಾ ಮಹೂರ್ತ ನ.19ರ ಶುಕ್ರವಾರದಂದು ನೆರವೇರಿತು. ಶ್ರೀ ದೇಗುಲದಲ್ಲಿ ಪೂಜೆ ನೆರವೇರಿದ ಬಳಿಕ ಜಾತ್ರಾ ಸಮಯದಲ್ಲಿ ಎಳೆಯುವ ಬ್ರಹ್ಮರಥ ಮತ್ತು ಪಂಚಮಿ ರಥಗಳನ್ನು ನಿರ್ಮಿಸಲು ಕಾರ್ತಿಕ ಹುಣ್ಣಿಮೆಯ ದಿನವಾದ ಶುಕ್ರವಾರ ಗೂಟ ಪೂಜಾ ಮಹೂರ್ತವನ್ನು ವಿವಿಧ ವೈದಿಕ...
ಜಾತ್ರಾ ಮಹೋತ್ಸವವನ್ನು ಸುಸೂತ್ರವಾಗಿ ನಡೆಸಲು ಸರ್ವ ಭಕ್ತರ ಸಹಕಾರ ಅತ್ಯಗತ್ಯ. ಸೂಕ್ತ ಯೋಜಿತ ಚಿಂತನೆ ಮೂಲಕ ಶ್ರೀ ದೇವತಾ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಭಕ್ತರು ಮತ್ತು ಇಲಾಖಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು. ಜಾತ್ರಾ ಸಮಯದಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು.ಈ ಹಿಂದಿನಂತೆ ಯಾವುದೇ ಗೊಂದಲವಿಲ್ಲದೆ ಜಾತ್ರೆ ನೆರವೇರಲು ಸರ್ವರೂ...
ಇತಿಹಾಸ ಪ್ರಸಿದ್ಧ ಕುಲ್ಕುಂದ ಜಾನುವಾರು ಜಾತ್ರೆ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಐತಿಹಾಸಿಕ ಕುಲ್ಕುಂದದ ಬಸವನಮೂಲೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೋಪೂಜೆ ನಡೆಯಿತು. ಕಾರ್ತಿಕ ಹುಣ್ಣಿಮೆಯ ದಿನವಾದ ನ.19ರ ಶುಕ್ರವಾರದಂದು ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಗೋವುಗಳಿಗೆ ಪುಷ್ಪಾಲಂಕಾರ ಮಾಡಿ ಕರೆತರಲಾಯಿತು. ಬಳಿಕ ಈ ಮೊದಲು ಶ್ರೀ ಬಸವೇಶ್ವರ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ...
ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ ಹಾಗೂ ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನಡೆಯುತ್ತಿದ್ದು ಇಂದು ಕಾರ್ತಿಕ ಪೌರ್ಣಮಿ, ಲಕ್ಷದೀಪ ಉತ್ಸವ ನಡೆಯಿತು. ರಾತ್ರಿ ದೇವಸ್ಥಾನದಲ್ಲಿ ಶ್ರೀದೇವರ ಪೂಜೆ ನಡೆದು ಬಳಿಕ ಅಚಲಾಪುರ ಕಟ್ಟೆಯವರೆಗೆ ದೇವಸ್ಥಾನದ ವತಿಯಿಂದ ನಿರ್ಮಿಸಲಾದ ನೂತನ ಲಾಲ್ಕಿಯಲ್ಲಿ ಶ್ರೀ ದೇವರ ವೈಭವದ ಉತ್ಸವ ಮೆರವಣಿಗೆ ನಡೆಯಿತು. ಬಳಿಕ ಅಚಲಾಪುರ ಕಟ್ಟೆಯಲ್ಲಿ...
Loading posts...
All posts loaded
No more posts
