- Sunday
- September 27th, 2026
ದೂರ ಇನ್ನು ದೂರ ಹೊರಟೆ ನಾನು ಎಲ್ಲ ತೊರೆದು…ಭಾರ ಬದುಕು ಭಾರ ವಿಧಿಯ ಆಟ ತುಂಬಾ ಕ್ರೂರ…ಸಾವು - ನೋವ ನಡುವೆ ಬದುಕು ತುಂಬಾ ಘೋರ…ಮನದ ಒಳಗೆ ಸುಟ್ಟು ಹೋದ ನೆನಪೇ ಭಾರ, ಆ ನೆನಪೇ ಭಾರ… ಕಳೆದು ಹೋದ ಖುಷಿಯ ಕ್ಷಣವು ಮರಳಿ ಎಂದೂ ಬಾರದು, ನನ್ನ ನೋವನೆಂದೂ ಮರೆಸದು…ಬೀಸಿ ಬರುವ ಅಲೆಯ ಎದುರು...
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಜ.16 ರಂದು ಆರಂಭಗೊಂಡಿದ್ದು ಜ.21 ಶುಕ್ರವಾರದ ತನಕ ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ದೇವಸ್ಥಾನದಲ್ಲಿ ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಉಳ್ಳಾಕುಲು ದೈವದ ಭಂಡಾರ ಬರುವುದು, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 12.00ಕ್ಕೆ ಶ್ರೀ ದೇವರಿಗೆ...
ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇದರ 5ನೇ ವಾರ್ಷಿಕೋತ್ಸವದ ಅಂಗವಾಗಿ ರಾಮಾಯಣ ಸಪ್ತಾಹ ಕಾರ್ಯಕ್ರಮ ಜ. 17ರಂದು ಉದ್ಘಾಟನೆಯಾಯಿತು. ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡು ದೀಪ ಬೆಳಗಿಸಿ ಸಪ್ತಾಹವನ್ನು ಉದ್ಘಾಟಿಸಿದರು. ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ ಮುಪ್ಪೇರ್ಯ ಇದರ ಗೌರವಾಧ್ಯಕ್ಷ ಯು. ರಾಧಾಕೃಷ್ಣ ರಾವ್ ಉಡುವೆಕೋಡಿಯವರು ಅಧ್ಯಕ್ಷತೆ...
ಯುವ ವಕೀಲರಾದಪ್ರದೀಪ್ ಕುಮಾರ್ ಕೆ ಎಲ್ ರವರ ಕಾನೂನು ಸಲಹಾ ಕಛೇರಿ ಇಂದು ಗುತ್ತಿಗಾರಿನ ಪ್ರಶಾಂತ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.ಆಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಚಿದಾನಂದ ಕೆ ವಿ ಉದ್ಘಾಟಿಸಿದರು. ಗುತ್ತಿಗಾರು ರಬ್ಬರ್ ಬೆಳೆಗಾರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗುತ್ತಿಗಾರು ಪ್ರಾ.ಕೃ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕೊಲ್ಲಮೊಗ್ರು ಗ್ರಾ.ಪಂ ಅಧ್ಯಕ್ಷ...
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿ ಹೊಂದಿರುವ ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಚಂದ್ರ ಕೋಲ್ಚಾರ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜ.16ರಂದು ಸಂಘದ ಸಭಾಂಗಣದಲ್ಲಿ ನಡೆದ ನಿರ್ದೇಶಕರ...
ನಾಲ್ಕೂರು ಗ್ರಾಮದ ಕಲ್ಲಾಜೆ ಹಲ್ಗುಜಿಯಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಶಿರಾಡಿ ದೈವ ಮತ್ತು ಅಗ್ನಿ ಗುಳಿಗ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ ಜ.15 ರಂದು ಹಾಗೂ ಜ.16 ರಂದು ದೈವಗಳ ನೇಮೋತ್ಸವ ನಡೆಯಿತು. ಬ್ರಹ್ಮರ್ಷಿ ಶ್ರೀ ವೇದಮೂರ್ತಿ ನೀಲೇಶ್ವರ ದಾಮೋದರ ತಂತ್ರಿ, ದೈವಜ್ಞರಾದ ಶಶಿಧರನ್ ಮಾಂಗಾಡ್ ಮತ್ತು ಕೆ.ರಾಜೇಶ್ ಎರಿಯ ಹಾಗೂ ವಾಸ್ತು ಶಿಲ್ಪಿ...
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಜ.16 ಆದಿತ್ಯವಾರದಂದು ಆರಂಭಗೊಂಡಿದ್ದು ಪೂರ್ವಾಹ್ನ ದೇವತಾ ಪ್ರಾರ್ಥನೆ ನಡೆದು, ಉಗ್ರಾಣ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪಿ. ಪದ್ಮನಾಭ ಶೆಟ್ಟಿ, ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ ಕುಮಾರಮಂಗಲ ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್, ಪಿ.ವೆಂಕಟಕೃಷ್ಣ ರಾವ್, ಜಯಪ್ರಕಾಶ್...
ಮಡಪ್ಪಾಡಿಯ ಮಹಾತ್ಮಾ ಗಾಂಧಿ ಗ್ರಾಮ ಸೇವಾ ತಂಡದ 231ನೇ ಶ್ರಮದಾನ ಇಂದು ನಡೆಸಲಾಯ್ತು. ಮಡಪ್ಪಾಡಿ ಸೊಸೈಟಿ ಬಳಿ ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದ ಮಳೆಗಾಲದಲ್ಲಿ ತೊಳೆದುಕೊಂಡು ಬಂದು ಶೇಖರಣೆ ಆಗಿದ್ದ ಹೊಯಿಗೆ ಮಣ್ಣನ್ನು ತೆಗೆದು ಸ್ವಚ್ಛಗೊಳಿಸಲಾಯ್ತು.
ಹಣ ಹಾಗೂ ಅಮೂಲ್ಯ ದಾಖಲೆಗಳನ್ನು ಒಳಗೊಂಡ ಪರ್ಸ್ ಒಂದು ಪೆರುವಾಜೆಯಲ್ಲಿ ಲಕ್ಷ್ಮೀನಾರಾಯಣ ಭಟ್ ರವರಿಗೆ ಬಿದ್ದು ಸಿಕ್ಕಿತ್ತು. ತಕ್ಷಣ ಅವರು ವಾರಸುದಾರರನ್ನು ಪತ್ತೆ ಮಾಡಿ ಅವರಿಗೆ ಪರ್ಸ್ ಅನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
Loading posts...
All posts loaded
No more posts
