- Tuesday
- September 29th, 2026
ಸುಳ್ಯದ ನಾಡಹಬ್ಬಗಳ ದಿನಾಚರಣಾ ಸಮಿತಿಯ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮತ್ತು ಮಾಜಿ ಉಪಪ್ರಧಾನಿ ಡಾ| ಬಾಬು ಜಗಜೀವನ್ ರಾಂ ರವರ 115ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಏ.5ರಂದು ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆಯಿತು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಾಜದಲ್ಲಿ ನಾವೆಲ್ಲ ಸಮಾನವಾಗಿ ಬದುಕಬೇಕು ಎಂದು ಶ್ರಮವಹಿಸಿದವರಲ್ಲಿ...
ಪೆರುವಾಜೆ ಸವಣೂರು ಪುತ್ತೂರು ಮಾರ್ಗ ಮಧ್ಯೆ ಚಿನ್ನದ ಬ್ರಾಸ್ ಲೆಟ್ ಇಂದು (ಎ.05) ಕಳೆದುಹೋಗಿರುತ್ತದೆ. ಯಾರಿಗಾದರೂ ಸಿಕ್ಕಲ್ಲಿ 8197763860, 9663065466 ಸಂಖ್ಯೆಗೆ ಕರೆಮಾಡುವಂತೆ ಕಳೆದುಕೊಂಡವರು ವಿನಂತಿಸಿದ್ದಾರೆ.
ನಾಲ್ಕೂರು ಗ್ರಾಮದ ದಂಡಿನಮನೆ ಜಗನ್ಮೋಹನ ದಂಡಿನಮನೆ ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಅವರು ಬಳ್ಳಾರಿ ಥರ್ಮಲ್ ಪವರ್ ಕಾರ್ಪೋರೇಷನ್ ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಹೃದಯಾಘಾತಗೊಂಡ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆಂದು ತಿಳಿದುಬಂದಿದೆ. ಮೃತರು ಪತ್ನಿ , ಓರ್ವ ಪುತ್ರ, ಸಹೋದರ, ಸಹೋದರಿಯರು...
ಅಮರ ಸುಳ್ಯದ ಸ್ವಾತಂತ್ರ್ಯ ಸಮರದ ಸ್ಮಾರಕ ನಿರ್ಮಾಣ ಮತ್ತು ಕೆದಂಬಾಡಿ ಉತ್ಸವದ ಕುರಿತು ಎ.4 ರಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಗೋಪಾಲ ಪೆರಾಜೆ ಅವರು ಉಬರಡ್ಕ ಮಿತ್ತೂರು ಮತ್ತು ಬೆಳ್ಳಾರೆಯಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಮಾಡುವ ವಿಚಾರ, ಮಂಗಳೂರು ವಿ.ವಿಯಲ್ಲಿ ಅಮರ ಸುಳ್ಯ ಸ್ವಾಂತಂತ್ರ್ಯ ಹೋರಾಟ ಅಥವಾ...
ಪುತ್ತೂರು ತಾಲೂಕಿನ ಕುಂಬ್ರ ಪೇಟೆಯ ಮುಖ್ಯರಸ್ತೆಯ ಸಮೀಪ ಇಂದು ಬೆಳಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಸಂಶೋಧನೆ ನಡೆಸುತ್ತಿರುವ ನವೀನ್ ಕುಮಾರ್ ಪೆರುವಾಜೆ ರವರು ಚಲಾಯಿಸುತ್ತಿದ್ದ ಯಮಹಾ ಎಫ್.ಜ಼ೆಡ್ ಬೈಕ್ ಹಾಗೂ ಸುಳ್ಯ ಕಡೆಗೆ ಬರುತ್ತಿದ್ದ ಉಪ್ಪಿನಂಗಡಿಯ ಶಮಂತ್ ಎಂಬವರ ಬುಲೆಟ್ ಬೈಕ್ ಪರಸ್ಪರ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡಿದ್ದು, ಹೆಲ್ಮೆಟ್ ಧರಿಸಿದ್ದ...
ಶ್ರೀ ರಾಜ್ಯ ದೈವ ಪುರುಷ ದೈವ ದೇವಸ್ಥಾನ ತಳೂರು, ಸ್ನೇಹ ಯುವ ಬಳಗ ಮತ್ತು ಸೌರಭ ಯುವತಿ ಮಂಡಲದ ಜಂಟಿ ಆಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟ ಏ.3 ರಂದು ತಳೂರಿನ ಚಾಕಟೆತಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಾಗಪ್ಪ ಗೌಡ ಮೆತ್ತಡ್ಕ ನಡೆಸಿದರು. ವೇದಿಕೆಯಲ್ಲಿ ಊರಿನ ಹಿರಿಯರಾದ ಶಿವಣ್ಣ ಗೌಡ ತಳೂರು, ಸ್ನೇಹ ಯುವ ಬಳಗ ಅಧ್ಯಕ್ಷ ವರ್ಷಿತ್...
ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಮೋನಿಷ್ ತಂಟೆಪ್ಪಾಡಿ ಸಾಧನೆ ಮೆರೆದಿದ್ದಾರೆ. ಬದ್ದ ಪದ್ಮಾಸನ ದಲ್ಲಿ 1ಗಂಟೆ 02 ನಿಮಿಷ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ. ಕಳೆದ ಏಳು ತಿಂಗಳಿಂದ ಯೋಗಾಭ್ಯಾಸವನ್ನು ನಿರಂತರ ಯೋಗ ಕೇಂದ್ರ ಸುಳ್ಯ ಇದರ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಯೋಗ...
ವಳಲಂಬೆ ಸಮೀಪ ಲೇಡಿಸ್ ಪರ್ಸೊಂದು ಇಂದು ಬಿದ್ದು ಸಿಕ್ಕಿರುತ್ತದೆ. ಕಳೆದುಕೊಂಡವರು ಅಮರ ಸುಳ್ಯ ಸುದ್ದಿ ಕಛೇರಿಯನ್ನು ಸಂಪರ್ಕಿಸಬಹುದು. ಮೊ: 9449387044
ಐವರ್ನಾಡಿನ ಬಿರ್ಮುಕಜೆ ತರವಾಡು ಮನೆಯ ಶ್ರೀ ರುದ್ರಚಾಮುಂಡಿ, ಧರ್ಮದೈವ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಎ.13 ರಂದು ಬಿರ್ಮುಕಜೆ ಕುಟುಂಬದ ತರವಾಡು ಮನೆಯಲ್ಲಿ ಜರುಗಲಿದೆ. ಎ.6 ರಂದು ಗೊನೆ ಕಡಿಯುವ ಕಾರ್ಯಕ್ರಮ ನಡೆಯಲಿದೆ. ಎ.13ರ ಬೆಳಿಗ್ಗೆಯಿಂದ ಗಣಹೋಮ, ನಾಗತಂಬಿಲ, ಮುನಿಸ್ವಾಮಿಗೆ ನೈವೇದ್ಯ, ಶ್ರೀ ವೆಂಕಟ್ರಮಣ ದೇವರ ಹರಿಸೇವೆ ನಡೆಯಲಿದೆ....
ಅರಂತೋಡಿನಲ್ಲಿ ಅನಿಲ್ ಕುಮಾರ್ ಬಿಳಿಯಾರು ಅವರ ಮಾಲೀಕತ್ವದಲ್ಲಿ ಖುಷಿ ಬೇಕರಿ ಏ.2 ರಂದು ಶುಭಾರಂಭಗೊಂಡಿತು. ಬೇಕರಿಯನ್ನು ಅರಂತೋಡು ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಉದ್ಘಾಟಿಸಿದರು. ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಯು.ಎಂ., ಅರಂತೋಡು ಮಲ್ಲಿಕಾರ್ಜುನ...
Loading posts...
All posts loaded
No more posts
