ಮಡಪ್ಪಾಡಿ: ಸ್ವಚ್ಛತಾ ಕಾರ್ಯಕ್ರಮ

ಮಡಪ್ಪಾಡಿ ಗ್ರಾಮ ಪಂಚಾಯತ್ ಮತ್ತು ಅಕ್ಷಯ ಸಂಜೀವಿನಿ ಒಕ್ಕೂಟ ಮಡಪ್ಪಾಡಿ ಇದರ ವತಿಯಿಂದ ಮಡಪ್ಪಾಡಿ ಪೇಟೆಯ ಮುಂಭಾಗ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಒಕ್ಕೂಟದ ಅಧ್ಯಕ್ಷರು ಉಪಸ್ಥಿತರಿದ್ದರು.

ಮಡಪ್ಪಾಡಿ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ, ಮಕ್ಕಳ ಪ್ರತಿಭಾ ದಿನೋತ್ಸವ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ, ಮಕ್ಕಳ ಪ್ರತಿಭಾ ದಿನೋತ್ಸವ, 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಎ.9ರಂದು ನಡೆಯಿತು. ಎಸ್ ಡಿಎಂ ಸಿ ಅಧ್ಯಕ್ಷರಾದ ಮಾಧವ ಶೀರಡ್ಕರವರು ಶಾಲೆಗೆ ದೇವರ ಮಂಟಪವನ್ನು ಕೊಡುಗೆ ನೀಡಿದರು. 7ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಕಡೆಯುವ ಕಲ್ಲು ಕೊಡುಗೆಯಾಗಿ ನೀಡಿದರು.ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ್...
Ad Widget

ಮಡಪ್ಪಾಡಿ : ಸ್ವಚ್ಛತಾ ಕಾರ್ಯಕ್ರಮ

ಮಡಪ್ಪಾಡಿ ಗ್ರಾಮ ಪಂಚಾಯತ್ ಮತ್ತು ಅಕ್ಷಯ ಸಂಜೀವಿನಿ ಒಕ್ಕೂಟ ಮಡಪ್ಪಾಡಿ ಇದರ ವತಿಯಂದ ಮಡಪ್ಪಾಡಿ ಪೇಟೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಒಕ್ಕೂಟದ ಅಧ್ಯಕ್ಷರು,ಸದಸ್ಯರುಉಪಸ್ಥಿತರಿದ್ದರು.

ಕುಕ್ಕೆ ಸುಬ್ರಹ್ಮಣ್ಯ : ನಟ ರಾಕಿಂಗ್ ಸ್ಟಾರ್ ಯಶ್ ಭೇಟಿ

ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ರವರು ಎ.10 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು.ಶೀಘ್ರ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಕೆ.ಜಿ.ಎಫ್-2 ಚಿತ್ರತಂಡದ ಜೊತೆಯಲ್ಲಿ ಯಶ್ ಕ್ಷೇತ್ರಕ್ಕೆ ಬೇಟಿ ನೀಡಿದರು.ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಚಿತ್ರತಂಡಕ್ಕೆ ಸ್ವಾಗತಿಸಿದರು. ನಂತರ ಯಶ್ ಹಾಗೂ ಸಂಗಡಿಗರು ಕ್ಷೇತ್ರದಲ್ಲಿ...

ಕವಿ ಆರೋಕ್ಯಸ್ವಾಮಿಯಿಂದ ಯುವ ಕವಯಿತ್ರಿ ಅನನ್ಯ ಸುಬ್ರಹ್ಮಣ್ಯ ಭೇಟಿ

ಕವನ, ಗೀತೆರಚನೆ, ಸಂಭಾಷಣೆಗಾರರಾದ ಎಸ್ ಅರೋಕ್ಯಸ್ವಾಮಿಯವರನ್ನು ಸುಬ್ರಹ್ಮಣ್ಯದ ಯುವ ಕವಯಿತ್ರಿ ಅನನ್ಯ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ಬರೆದಿರುವ ಪುಸ್ತಕ ಓ ನನ್ನ ಗೆಳತಿ ಎರಡು ಹೃದಯಗಳ ಸಮ್ಮಿಲನ ‌ಪುಸ್ತಕವನ್ನು ನೀಡಿ ಗೌರವಿಸಿದ್ದಾರೆ.ಈ ಸಂದರ್ಭದಲ್ಲಿ ಇವರ ಸಾಹಿತ್ಯ ಬಳಗದವರು ಉಪಸ್ಥಿತರಿದ್ದರು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸುಳ್ಯ ತಾಲೂಕು ಘಟಕಾಧ್ಯಕ್ಷರಾಗಿ ಸದಾಶಿವ ಪೂಜಾರಿ ಬೆಳ್ಳಾರೆ ನೇಮಕ

ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ "ಶೀಲ ಮತ್ತು ಶಿಸ್ತಿ"ನ ತಳಹದಿಯಲ್ಲಿ ಹುಟ್ಟಿಕೊಂಡ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸುಳ್ಯ ತಾಲೂಕು ಘಟಕವು ಸ್ಥಾಪನೆಯಾಗಿದ್ದು ಇದರ ಅಧ್ಯಕ್ಷರಾಗಿ ಬೆಳ್ಳಾರೆ ಹೋಬಳಿಯ ಜನಪ್ರಿಯ ಸಮಾಜಸೇವಕರಾದ ಸದಾಶಿವ ಪೂಜಾರಿಯವರನ್ನು ಆಯ್ಕೆ ಮಾಡಲಾಗಿದೆ. ಇವರನ್ನು ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಮಾನ್ಯ ಸುಬ್ರಹ್ಮಣ್ಯ ಭಟ್ ಬೆಳ್ತಂಗಡಿರವರ ಸೂಚನೆಯಂತೆ ಕರ್ನಾಟಕ ರಾಷ್ಟ್ರ ಸಮಿತಿ...

ಕಳಂಜ ಗ್ರಾಮದ ಪಂಜಿಗಾರು – ಮಣಿಮಜಲು ಸಂಪರ್ಕ ರಸ್ತೆಯ ಸೇತುವೆಯ ಗುದ್ದಲಿ ಪೂಜೆ

ಕಳಂಜ ಗ್ರಾಮದ ಪಂಜಿಗಾರು - ಮಣಿಮಜಲು ಸಂಪರ್ಕ ರಸ್ತೆಯ ಸೇತುವೆಯ ಗುದ್ದಲಿ ಪೂಜೆಯು ಏ.09ರಂದು ನಡೆಯಿತು. ಸಚಿವ ಎಸ್.ಅಂಗಾರರವರು ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಕಳಂಜ ಗ್ರಾಮ ಅಧ್ಯಕ್ಷ ಪ್ರಶಾಂತ್ ಕಿಲಂಗೋಡಿ, ಸದಸ್ಯರಾದ ಬಾಲಕೃಷ್ಣ ಬೇರಿಕೆ, ಪ್ರೇಮಲತಾ ಮಣಿಮಜಲು, ವಿಧಾನಪರಿಷತ್ ಮಾಜಿ ಸದಸ್ಯರಾದ ಅಣ್ಣಾ ವಿನಯಚಂದ್ರ, ಪ್ರಮುಖರಾದ ಹರೀಶ್ ಕಂಜಿಪಿಲಿ, ಶ್ರೀನಾಥ್ ರೈ...

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಧನಂಜಯ ಅಡ್ಪಂಗಾಯ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ 40 ಉಪಾಧ್ಯಕ್ಷರು ಮತ್ತು 109 ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ ಎಂದು ಎಐಸಿಸಿ ಜನರಲ್ ಸೆಕ್ರೆಟರಿಕೆ.ಸಿ.ವೇಣುಗೋಪಾಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌ ಸುಳ್ಯದಿಂದ ಧನಂಜಯ ಅಡ್ಪಂಗಾಯ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.ಧನಂಜಯ ಅಡ್ಪಂಗಾಯ ರವರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿ,...

ಕಳಂಜ ಗ್ರಾಮದ ಪಾಂಡಿಪಾಲ್- ತಂಟೆಪ್ಪಾಡಿ- ಕಿಲಂಗೋಡಿ ರಸ್ತೆಯ 50 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಕಳಂಜ ಗ್ರಾಮದ ಪಾಂಡಿಪಾಲ್- ತಂಟೆಪ್ಪಾಡಿ- ಕೀಲಂಗೋಡಿ ರಸ್ತೆಯ 50 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮವು ಏ.09ರಂದು ನಡೆಯಿತು. ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರು ಹಿರಿಯರಾದ ಅಣ್ಣಾ ವಿನಯಚಂದ್ರ, ಪ್ರಮುಖರಾದ ಹರೀಶ್ ಕಂಜಿಪಿಲಿ,...

ಏಪ್ರಿಲ್ 22 ರಿಂದ 26 ರವರೆಗೆ ಕುಕ್ಕುಜಡ್ಕ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಬಲ್ಲಾಳರು ಆರಾಧನೆ ಮಾಡಿಕೊಂಡು ಬರುತ್ತಿದ್ದ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕುಕ್ಕುಜಡ್ಕದ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು ಸುಮಾರು 1 ವರೆ ಕೋಟಿಗೂ ಮಿಕ್ಕಿದ ಖರ್ಚಿನಲ್ಲಿ ಸಂಪೂರ್ಣ ಕೆಲಸ ಕಾರ್ಯ ನಡೆದು ಏ. 22 ರಿಂದ ಪ್ರಾರಂಭವಾಗಿ ಏ. 26 ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿದೆ ಬ್ರಹ್ಮಕಲಶೋತ್ಸವ...
Loading posts...

All posts loaded

No more posts

error: Content is protected !!