ಜು.7 ರಂದು ರೆಡ್ ಅಲರ್ಟ್ ಘೋಷಣೆ – ಶಾಲಾ ಕಾಲೇಜುಗಳಿಗೆ ನಾಳೆಯೂ ರಜೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕಳೆದ 24 ತಾಸುಗಳಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿರುತ್ತದೆ. ಇದೇ ಹವಾಮಾನ ಪರಿಸ್ಥಿತಿಯ ಮುಂದುವರಿಯುವ ಸೂಚನೆಯಿದ್ದು ಜಿಲ್ಲೆಯಾದ್ಯಂತ ದಿನಾಂಕ: 7.07.2022 ರಂದು ರೆಡ್ ಅಲರ್ಟ್ ಘೋಷಣೆಯಾಗಿರುವುದರಿಂದ, ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ & ಪ್ರೌಢ ಶಾಲೆ, ಪದವಿ ಪೂರ್ವ, ಪದವಿ,...

ಬಳ್ಪ : ಭೋಗಾಯನ ಕೆರೆಯ ತಡೆಗೋಡೆ ಕುಸಿತ – ಕಳಪೆ ಆರೋಪ

ಬಳ್ಪದಲ್ಲಿ ಸಂಸದ ನಳಿನ್ ಕುಮಾರ್ ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಇತಿಹಾಸ ಪ್ರಸಿದ್ಧ ಭೋಗಾಯನ ಕೆರೆ ಅಭಿವೃದ್ಧಿಪಡಿಸಿದ್ದರು. ಇದೀಗ ವ್ಯಾಪಕ ಮಳೆಗೆ ಕೆರೆಯ ಕಟ್ಟೆ ಕುಸಿದುಬಿದ್ದಿದೆ. ಈ ಬಗ್ಗೆ ಕಳಪೆ ಕಾಮಗಾರಿಯ ಆರೋಪ ಕೇಳಿ ಬಂದಿದೆ.
Ad Widget

ಉಬರಡ್ಕ : ಶ್ರೀ ನಿಧಿ ಕ್ಲಿನಿಕ್ ಶುಭಾರಂಭ

ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ನೆಯ್ಯೋಣಿ ಕಟ್ಟಡದಲ್ಲಿ ಕೆ.ಎಸ್.ಆರ್.ಟಿ.ಸಿ. ಯ ನಿವೃತ ಸಂಚಾರ ನಿಯಂತ್ರಕರಾದ ಹರಿಶ್ಚಂದ್ರ ಮೇಲಡ್ತಲೆ ಅವರ ಪುತ್ರಿ ಡಾ. ಶ್ರೀನಿಧಿ ಎಂ.ಎಚ್ ಮಾಲಕತ್ವದ ಶ್ರೀನಿಧಿ ಕ್ಲಿನಿಕ್ ಜು.6 ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಮಾಲಕರ ತಂದೆ ಹರಿಶ್ಚಂದ್ರ ಮೇಲಡ್ತಲೆ, ತಾಯಿ ಶ್ರೀಮತಿ ಜಲಜಾ, ಶಿವಣ್ಣ ಗೌಡ, ಶ್ರೀಮತಿ ವೆಂಕಮ್ಮ, ಕಟ್ಟಡದ ಮಾಲಕರಾದ...

ಜು. 7 ; ಭೂಕಂಪನ ಪೀಡಿತ ಪ್ರದೇಶಗಳಿಗೆ ಸಚಿವ ಆರ್.ಅಶೋಕ್ ಹಾಗೂ ಸುನಿಲ್ ಕುಮಾರ್ ಭೇಟಿ

ಕಂದಾಯ ಸಚಿವ ಆರ್.ಅಶೋಕ್‌ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ಕುಮಾ‌ರ್ ಭೂಕಂಪನ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಳೆಹಾನಿ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಅರಂತೋಡು : ಬಕ್ರೀದ್ ಹಬ್ಬದ ವಿಶೇಷಾಂಕ ಬಿಡುಗಡೆ

ಅರಂತೋಡು:ಸಮಸ್ತ ಕೇರಳ ಸುನ್ನಿ ಬಾಲ ವೇದಿ ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ವತಿಯಿಂದ ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕ ಸಹದ್ ಫೈಝಿ ಸಂಪಾದಕತ್ವದ ಅನ್ನುಜೂಂ ಬಕ್ರೀದ್ ಹಬ್ಬದ ವಿಶೇಷಾಂಕ ವನ್ನು ಜು.6ರಂದು ಅರಂತೋಡು ತೆಕ್ಕಿಲ್ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷರಾದ ಟಿ.ಎಮ್.ಶಹೀದ್ ತೆಕ್ಕಿಲ್ ಬಿಡುಗಡೆಗೊಳಿಸಿದರು. ಜುಮ್ಮಾ ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ...

ಬಾಳುಗೋಡು :- ಜು.07 ರಂದು ವನಮಹೋತ್ಸವ ಕಾರ್ಯಕ್ರಮ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಕರ್ನಾಟಕ ಅರಣ್ಯ ಇಲಾಖೆ, ಸುಬ್ರಹ್ಮಣ್ಯ ವಲಯ, ಸುಳ್ಯ ತಾಲೂಕು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸ.ಹಿ.ಪ್ರಾ ಶಾಲೆ ಬಾಳುಗೋಡು ಇವರ ಜಂಟಿ ಆಶ್ರಯದಲ್ಲಿ ಜು. 07 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳುಗೋಡಿನಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರವೀಣ್...

ಹರಿಹರಪಲ್ಲತ್ತಡ್ಕ : ವ್ಯಾಪಕ ಮಳೆಗೆ ಅಯ್ಯಪ್ಪ ದೇವಸ್ಥಾನ ಆವರಣ ಮುಳುಗಡೆ

ಬಾಳುಗೋಡು ಕೊಲ್ಲಮೊಗ್ರ ಕಲ್ಮಕಾರು ಭಾಗದಲ್ಲಿ ಸುರಿದ ವ್ಯಾಪಕ ಮಳೆಗೆ ಹರಿಹರಪಲ್ಲತ್ತಡ್ಕದ ಸಂಗಮಕ್ಷೇತ್ರ ಅಯ್ಯಪ್ಪ ದೇವಸ್ಥಾನದ ಆವರಣ ಮುಳುಗಡೆಯಾಗಿದೆ.

ಮನೆಯೊಂದರಿಂದ 10 ಗೋಣಿ ಕಾಳುಮೆಣಸು ಕದ್ದು ಸಾಗಿಸುತ್ತಿದ್ದ ಐದು ಆರೋಪಿಗಳ ಬಂಧನ

ಕಳ್ಳರು ಮನೆಯೊಂದರಿಂದ ಕದ್ದಿದ್ದ 10 ಗೋಣಿ ಕಾಳುಮೆಣಸನ್ನು ಸಾಗಿಸುತ್ತಿದ್ದ ವೇಳೆ ಬೆಳ್ಳಾರೆ ಠಾಣಾ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ. ಬಂಧಿತ ಆರೋಪಿಗಳನ್ನು ಸುಳ್ಯ ತಾಲೂಕಿನ ಕಳಂಜ ನಿವಾಸಿ ಮಂಜು, ಕೊಡಿಯಲ ಬೈಲು ನಿವಾಸಿ ಪ್ರವೀಣ, ಜಾಲ್ಸೂರು ಗ್ರಾಮದ ಬೆರ್ಪಡ್ಕ ನಿವಾಸಿ ಪವನ್ ಕುಮಾರ್ ಹಾಗೂ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಅಬ್ದುಲ್ ಬಾಶೀತ್ ಎಂದು...

ಅರಂತೋಡು : ನಿರಂತರ ವಿದ್ಯುತ್ ವ್ಯತ್ಯಯ ಬಗ್ಗೆ ಸಚಿವರಿಗೆ ದೂರು – ಪರ್ಯಾಯ ವ್ಯವಸ್ಥೆಗಳ ಬಗ್ಗೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ

ಮಳೆಗಾಲ ಆರಂಭ ದಿನಗಳಿಂದ ಆರಂತೋಡು, ತೊಡಿಕಾನ ಸಂಪಾಜೆ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಜನಪ್ರತಿನಿಧಿಗಳು ಸಚಿವ ಎಸ್. ಅಂಗಾರರಿಗೆ ಮನವಿ ಮಾಡಿದ್ದರು.ಇದಕ್ಕೆ ಸ್ಪಂದಿಸಿದ ಸಚಿವರು ಮೆಸ್ಕಾಂ ನ ಸಹಾಯಕ ತಾಂತ್ರಿಕ ಅಧಿಕಾರಿ ಸುಪ್ರಿತ್ ಅವರನ್ನು ಕಛೇರಿಗೆ ಕರೆಸಿ ನಿರಂತರ ವಿದ್ಯುತ್ ನೀಡಲು ಆಗಬೇಕಾಗಿರುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲು ಆದೇಶಿಸಿದರು....

ಬಳ್ಪ : ರಸ್ತೆ ಬದಿ ಬರೆ ಕುಸಿತ, ಸಂಚಾರಕ್ಕೆ ಅಡಚಣೆ

ಬಳ್ಪ ಗ್ರಾಮದ ಆಲ್ಕಬೆ ಎಂಬಲ್ಲಿ ಗುಡ್ಡ ಕುಸಿತ ಜು.4 ರಂದು ಗುಡ್ಡ ಕುಸಿದಿದ್ದು ಸಂಚಾರಕ್ಕೆ ತಡೆಯುಂಟಾಗಿದೆ.ರಸ್ತೆಯಲ್ಲಿ ಘನ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಸಂಪೂರ್ಣವಾಗಿ ಕೆಸರುಮಯವಾಗಿ ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿದೆ ಮಳೆ ಇದೇ ರೀತಿ ಮುಂದುವರಿದರೆ ಗುಡ್ಡ ಇನ್ನಷ್ಟೂ ಕುಸಿಯುವ ಭೀತಿಯಲ್ಲಿದೆ. ಪಂಚಾಯಿತಿಗೆ ಮನವಿ ಮಾಡಿದ್ದರು ಯಾವ ಕ್ರಮ ಇನ್ನು ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವರದಿ...
Loading posts...

All posts loaded

No more posts

error: Content is protected !!