- Monday
- August 31st, 2026
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸುದೀರ್ಘ 31 ವರ್ಷಗಳ ಕಾಲ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ಮಾ.12 ರಂದು ಸೇವಾ ನಿವೃತ್ತಿ ಹೊಂದಲಿರುವ ಪ್ರಧಾನ ಅರ್ಚಕಪದ್ಮನಾಭ ಭಟ್ ರವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವು ಮಾ.08 ರಂದು ದೇವಸ್ಥಾನದಲ್ಲಿ ನಡೆಯಿತು.ಪದ್ಮನಾಭ ಭಟ್ ಮತ್ತು ಶ್ರೀಮತಿ ಚಂದ್ರಾವತಿ ಪಿ. ದಂಪತಿಗಳನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.ಸನ್ಮಾನ...
ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಕರಂಗಲ್ಲು ರಸ್ತೆಯ ವಾಲ್ತಾಜೆಯ ಶಿರಾಡಿ ನದಿ ಬಳಿ ಹಾಗೂ ಬಲ್ಕಜೆ ಎಂಬಲ್ಲಿ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್‌ರವರ ರೂ. 7.50 ಲಕ್ಷ ಅನುದಾನದಿಂದ ನಿರ್ಮಿಸುವ ಕಾಂಕ್ರೀಟ್ ರಸ್ತೆಯ ಗುದ್ದಲಿ ಪೂಜೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಗ್ರಾ.ಪಂ.ಸದಸ್ಯ ಭವಾನಿಶಂಕರ ಮುಂಡೋಡಿ,...
ಕಾಸರಗೋಡಿನಲ್ಲಿ ಡೆಂಟಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೈಂಬೆಚ್ಚಾಲ್ ಮೂಲದ ಡಾ.ಮೊಹಮ್ಮದ್ ಡಿ ಎಂ ಎಂಬುವವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅರಂತೋಡು ಅಡ್ಕಬಳೆ ಬಾಜಿನಡ್ಕ ರೆಂಜಾಳ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಇದರಿಂದ ಬೇಸತ್ತ ಈ ಭಾಗದ ಜನತೆ ಮತದಾನ ಬಹಿಷ್ಕಾರಕ್ಕೆ ತೀರ್ಮಾನಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.
ಉಬರಡ್ಕ ಗ್ರಾಮದ ಚೈಪೆ ಸುಂದರಿ ಎಂಬವರ ತೋಟಕ್ಕೆ ಜಯನಗರ ಯೋಗಿಶ ಎಂಬುವವರು ಕೆಲಸಕ್ಕೆ ಹೋಗಿದ್ದು ಅಲ್ಲಿ ಕಾಲು ಜಾರಿ ತೋಟದದಲ್ಲಿದ್ದ ಬಾವಿಗೆ ಬಿದ್ದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಅಲ್ಲದೆ ಯುವಕನ ಮನೆಯವರು ಸ್ಥಳಕ್ಕೆ ಬರುತ್ತಿರುವುದಾಗಿ ತಿಳಿದು ಬಂದಿದೆ.
ಉಬರಡ್ಕ ಗ್ರಾಮದ ಚೈಪೆ ಸುಂದರಿ ಎಂಬವರ ತೋಟಕ್ಕೆ ಜಯನಗರ ಯೋಗಿಶ ಎಂಬುವವರು ಕೆಲಸಕ್ಕೆ ಹೋಗಿದ್ದು ಅಲ್ಲಿ ಕಾಲು ಜಾರಿ ತೋಟದದಲ್ಲಿದ್ದ ಬಾವಿಗೆ ಬಿದ್ದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಅಲ್ಲದೆ ಯುವಕನ ಮನೆಯವರು ಸ್ಥಳಕ್ಕೆ ಬರುತ್ತಿರುವುದಾಗಿ ತಿಳಿದು ಬಂದಿದೆ.
ಅಡ್ಕಾರಿನಲ್ಲಿ ವ್ಯಕ್ತಿ ಓರ್ವ ಕಟ್ಟಡದಿಂದ ಕಾಲುಜಾರಿ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಮಾ.7ರಂದು ವರದಿಯಾಗಿದೆ.ಪೈಟಿಂಗ್ ಕೆಲಸಕ್ಕಾಗಿ ಅಡ್ಕಾರ್ ಜಿ ಅಬ್ದುಲ್ಲಾ ಎಂಬವರ ಮನೆಯಲ್ಲಿ ನೀರು ಹಾಕಿ ತೊಳೆಯುತ್ತಿರುವ ಸಂದರ್ಭದಲ್ಲಿ ಅಡೂರು ಪಳ್ಳಂಗೊಡು ನಿವಾಸಿ ಜಬ್ಬಾರ್ ಎಂಬವರು ಕಾಲುಜಾರಿ ಕಟ್ಟಡದಿಂದ ಕೆಳಗೆ ಬಿದ್ದರು. ಕೂಡಲೇ ಸುಳ್ಯ ಕೆವಿಜಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದು, ತಲೆಗೆ ಗಂಭೀರ...
ಸುಳ್ಯದ ಕೊಯಿಂಗೋಡಿ ದಿ. ನಿವೃತ್ತ ಶಿಕ್ಷಕ ರವೀಂದ್ರನಾಥ ಕೊಯಿಂಗೋಡಿ ಮತ್ತು ನಿವೃತ್ತ ಶಿಕ್ಷಕಿ ಪ್ರೇಮಾರವರ ಪುತ್ರಿ ಶ್ರೀಮತಿ ರಶ್ಮಿ ಕೆ.ಆರ್.ರವರು ಮಂಡಿಸಿದ 'Non-Newtonian Fluid Flow and Mass Transfer in an Annular Region' ಎಂಬ ಪ್ರಬಂಧಕ್ಕೆ ( ವಿ.ಟಿ.ಯು) ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಳಗಾವಿಯ ಯುನಿವರ್ಸಿಟಿಯ ಘಟಿಕೋತ್ಸವದಲ್ಲಿ ...
ಪೆರಾಜೆ,ಆಲೆಟ್ಟಿ, ದೊಡ್ಡಡ್ಕ, ಕಾಪುಮಲೆ, ಕುಂದಲ್ಪಾಡಿ, ಕುಂಬಳಚೇರಿ ಭಾಗದ ವಿವಿಧ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಆ ಭಾಗದ ಗ್ರಮಸ್ಥರು ಮತದಾನ ಬಹಿಷ್ಕಾರಕ್ಕೆ ತೀರ್ಮಾನಿಸಿ ಬ್ಯಾನರ್ ಅಳವಡಿಸಿದ್ದಾರೆ.
Loading posts...
All posts loaded
No more posts
