- Wednesday
- August 12th, 2026
ಬೊಳುಬೈಲು ನವಚೇತನ ಯುವಕ ಮಂಡಲದ ನೂತನ ಆಡಳಿತ ಮಂಡಳಿಯ ಪದಗ್ರಹಣ ಮತ್ತು ವಾರ್ಷಿಕ ಮಹಾಸಭೆ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. Ganesh Katur Padmanabha Nekraje ಅಧ್ಯಕ್ಷರಾಗಿ ಸುಧೀರ್ ನೆಕ್ರಾಜೆ,ಉಪಾಧ್ಯಕ್ಷರಾಗಿ ಪ್ರಸಾದ್ ಕುಂಭರಚೋಡು, ಕಾರ್ಯದರ್ಶಿಯಾಗಿ ಗಣೇಶ್ ಕಾಟೂರು, ಜತೆ ಕಾರ್ಯದರ್ಶಿಯಾಗಿ ಸುಧೀರ್ ರೈ ಕುಕ್ಕಂದೂರು, ಕೋಶಾಧಿಕಾರಿಯಾಗಿ ಪದ್ಮನಾಭ ನೆಕ್ರಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಲಕ್ಷ್ಮೀನಾರಾಯಣ ಕುಂಭರಚೋಡು ,ಸಾಂಸ್ಕೃತಿಕ...
ಅಮರಪಡ್ನೂರು ಗ್ರಾಮದ ಶೇಣಿ ಹೊಸಮಜಲು ರಸ್ತೆ ಕಾಂಕ್ರೀಟಿಕರಣದ ಸಲುವಾಗಿ ಫೆ.7 ರಂದು ಗುದ್ದಲಿ ಪೂಜೆಯು ನೆರವೇರಿತು. ಮೀನುಗಾರಿಕಾ ಮತ್ತು ಬಂದರು ಸಚಿವರಾದ ಎಸ್. ಅಂಗಾರ ರವರು ಗುದ್ದಲಿಪೂಜೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ, ತಾ.ಪಂ.ಸದಸ್ಯ ರಾಧಾಕೃಷ್ಣ ಬೊಳ್ಳೂರು, ಪಂ.ಸದಸ್ಯರಾದ ಸೀತಾ ಹೆಚ್., ರತಿನ್ ಚೂಂತಾರು, ಮಾಜಿ ಗ್ರಾಂ.ಪಂ.ಸದಸ್ಯ ನಾರಾಯಣ ಆಚಾರ್ಯ ಶೇಣಿ, ಧರ್ಮಪಾಲ ಶೇಣಿ,...
ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಿರಿಯೂರು ಚಿತ್ರದುರ್ಗ ಹಾಗೂ ಬೆಳಕು ಟಿವಿ ಸಹಯೋಗದಲ್ಲಿ ನೀಡುತ್ತಿರುವ ರಾಜ್ಯ ಮಟ್ಟದ ಜಾನ್ಸಿರಾಣಿ ಲಕ್ಷ್ಮೀ ಬಾಯಿ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರಿಗೆ ಫೆ.7 ರಂದು ಬೆಂಗಳೂರಿನ ಕನ್ಯಾಕುಮಾರಿ ವಿದ್ಯಾಲಯದಲ್ಲಿ ಗಣ್ಯರ ಸಮ್ಮುಖದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗುತ್ತಿಗಾರು ಗ್ರಾಮದ ಪೈಕ ಶ್ರೀ ಉಳ್ಳಾಕುಲು ಮತ್ತು ಮಲೆ ದೈವಗಳ ಹಾಗೂ ಅಜ್ಜಿ ದೈವಗಳ ದೈವಸ್ಥಾನದಲ್ಲಿ ನೇಮೋತ್ಸವ ನಡೆಯಿತು. ಫೆ. 06 ರಾತ್ರಿ ಭಂಡಾರ ಹಿಡಿದು. ಫೆ.7 ರಂದು ಪ್ರಾತಃಕಾಲ ಶ್ರೀ ಉಳ್ಳಾಕುಲು ದೈವದ ನೇಮ, ಬೆಳಿಗ್ಗೆ ನಾಗನ ಚಾಮುಂಡಿ ದೈವ, ಪುರುಷ ದೈವದ ನೇಮ ನಂತರ ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ ವಲ್ಪಾರೆ ಚಾಮುಂಡಿ...
ಅಮರಮುಡ್ನೂರು ಗ್ರಾಮದ ಪಿಲಿಕಜೆ ಸೀತಾರಾಮ ಗೌಡರ ಪುತ್ರ ಪ್ರವೀಣ್ ರ ವಿವಾಹ ನಿಶ್ಚಿತಾರ್ಥವು ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಗಣೇಶ್ ಗೌಡರ ಪುತ್ರಿ ಚೈತ್ರರೊಂದಿಗೆ ಫೆ.7 ರಂದು ಬೊಳ್ಳಾಜೆಯ ವಧುವಿನ ಮನೆಯಲ್ಲಿ ನಡೆಯಿತು.
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಕರ್ನಾಟಕ ಇದರ ಸುಳ್ಯ ತಾಲೂಕು ಅಧ್ಯಕ್ಷರಾಗಿ ಅಜ್ಜಾವರ ಗ್ರಾಮ ಮುಳ್ಯ ಅಟ್ಲೂರಿನ ಸತ್ಯನಾರಾಯಣ ಚಿಮ್ಟಿಕಲ್ ಆಯ್ಕೆಯಾಗಿದ್ದಾರೆ.
ಕಾಲಿಗೆ ಗಾಯಗೊಂಡು ನಡೆದಾಡಲು ಕಷ್ಟವಾಗಿದ್ದ ಹೋರಿಯೊಂದಕ್ಕೆ ಮೆಸ್ಕಾಂ ಸಿಬ್ಬಂದಿಗಳು, ಸ್ಥಳೀಯರು ಚಿಕಿತ್ಸೆ ನೀಡಿ ವಿಶ್ವ ಹಿಂದೂ ಪರಿಷದ್ ನೇತೃತ್ವದಲ್ಲಿ ಗೋಶಾಲೆಗೆ ತಲುಪಿಸಿದ್ದಾರೆ. ಸುಳ್ಯದ ಮೆಸ್ಕಾಂ ಆವರಣದಲ್ಲಿ ಕಾಲಿನ ಪಾದದ ಭಾಗ ತುಂಡಾಗಿ ನಡೆದಾಡಲು ಸಂಕಟ ಪಡುತ್ತಿದ್ದ ಹೋರಿಗೆ ಮೆಸ್ಕಾಂ ನ ಕೆಲವು ಸಿಬ್ಬಂದಿಗಳು ಮತ್ತು ಸ್ಥಳೀಯ ನಾಗರಿಕರು ಸೇರಿ ಪಶು ವೈದ್ಯರ ಮೂಲಕ ಚಿಕಿತ್ಸೆ ನೀಡಿ,...
ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ ರೋಜ್ ಗಾರ್ ದಿನಾಚರಣೆ ಮತ್ತು ಮಹಿಳಾ ಕಾಯಕೋತ್ಸವ ಸಮೀಕ್ಷೆದಾರರ ಪೂರ್ವಭಾವಿ ಸಭೆ ಫೆ. 6 ರಂದು ನಡೆಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಶೈಲೇಶ್ ಅಂಬೆಕಲ್ಲು, ರಮೇಶ್ ಪಡ್ಪು, ದುರ್ಗದಾಸ್ ಮೆತ್ತಡ್ಕ, ರಾಜೇಶ್ವರಿ ಮಾವಿನಕಟ್ಟೆ, ಸೀತಮ್ಮ ಕರಂಗಲ್ಲು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ಬಿ ಸ್ವಾಗತಿಸಿ,ವಂದಿಸಿದರು.
ಕೊಲ್ಲಮೊಗ್ರ ಗ್ರಾಮದ ಮುಳ್ಳುಬಾಗಿಲು ಮತ್ತು ದೇವಚಳ್ಳ ಗ್ರಾಮದ ಕರಂಗಲ್ಲು ಆಸುಪಾಸಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ.ಫೆ.4 ರಂದು ರಾತ್ರಿ ವೆಂಕಟ್ರಮಣ ಮಾವಾಜಿ ಎಂಬುವವರ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಒಂದು ತಿಂಗಳ ಹಿಂದೆ ಆನಂದ ಮುಳ್ಳುಬಾಗಿಲು ಎಂಬುವವರ ಎರಡು ನಾಯಿ ಹಾಗೂ ಜಗದೀಶ್ ಕಿಲಾರ್ ಕಜೆ ಯವರ ಒಂದು ನಾಯಿಯನ್ನು ಹೊತ್ತೊಯ್ದಿದೆ ಎಂದು ತಿಳಿದುಬಂದಿದೆ. ಹಾಗಾಗಿ ಮುಳ್ಳುಬಾಗಿಲು ಹಾಗೂ...
Loading posts...
All posts loaded
No more posts
