- Wednesday
- August 12th, 2026
ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಮಂಡಳಿಯ ನಿರ್ದೇಶಕರು ಹಾಗೂ ಗೌರವ ಸಲಹೆಗಾರರಿಗೆ ಅಭಿನಂದನಾ ಕಾರ್ಯಕ್ರಮ ನಡೆಸಲಾಯಿತು. ಮಂಡಳಿಯ ಅಧ್ಯಕ್ಷರಾದ ಶ್ರೀ ಅನಿಲ್ ಪೂಜಾರಿಮನೆ ಸಭಾಧ್ಯಕ್ಷತೆ ವಹಿಸಿದ್ದರು.ಯುವಜನ ಸಂಯುಕ್ತ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀ ಹಮೀದ್ ಇಡ್ನೂರು ಮತ್ತು ಶ್ರೀ ದಿನೇಶ್ ಮಡಪ್ಪಾಡಿ ಅಭಿನಂದನಾ ಮಾತುಗಳನ್ನಾಡಿದರು.ಗ್ರಾಮ ಪಂಚಾಯತ್ ಚುನಾವಣೆಯಲ್ಲಿ...
ಕಳಂಜ ಗ್ರಾಮ ಪಂಚಾಯತ್ ನ 2020-21ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ, ಪೋಷಣ ಅಭಿಯಾನ ಮಾಸಾಚರಣೆಯಡಿಯಲ್ಲಿ ಸುಪೋಷಣ್ ದಿನಾಚರಣೆಯು ಫೆ.5 ರಂದು ಅಯ್ಯನಕಟ್ಟೆಯ ಪಂಡಿತ್ ದೀನ್ ದಯಾಳ್ ಸಮುದಾಯ ಭವನ ಇಲ್ಲಿ ನಡೆಯಿತು. ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆಯನ್ನು ಕೋಟೆಮುಂಡುಗಾರು ಶಾಲಾ ವಿದ್ಯಾರ್ಥಿ ಕು. ಅಶ್ವಿನಿ ಎಂ ಹೆಚ್ ವಹಿಸಿದ್ದರು. ಸದ್ರಿ ಗ್ರಾಮ ಸಭೆಯಲ್ಲಿ ಮಹಿಳೆಯರು...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ ಸಂಪಾಜೆ ವಲಯ ಇವರಿಂದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮತ್ಸ್ಯಗುಂಡಿಯ ಕಿಂಡಿ ಅಣೆಕಟ್ಟಿಗೆ ಮಣ್ಣು ತುಂಬುವ ಕಾರ್ಯವನ್ನು ಶ್ರಮ ಸೇವೆಯ ಮೂಲಕ ಯಶಸ್ವಿಯಾಗಿ ನಡೆಸಿಕೊಟ್ಟರು.
ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯುತ್ತಿದೆ. ಇಂದು (ಫೆ.5) ರಂದು ಪೂರ್ವಾಹ್ನ ಶ್ರೀ ದೇವರ ಬಲಿಹೊರಟು ದರ್ಶನ ಬಲಿ, ಬಟ್ಟಲು ಕಾಣಿಕೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪದ್ಮನಾಭ ರೈ ಅಗೋಳಿ ಬೈಲುಗುತ್ತು, ದೇವಳದ ಮಾಜಿ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು,...
ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಸುಳ್ಯದ ಚಂದನ ಸಾಹಿತ್ಯ ವೇದಿಕೆ ಜಂಟಿಯಾಗಿ ನನ್ನ ಹಾಡು ನನ್ನದು ಸಂಗೀತ ಸ್ಪರ್ಧೆ ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಇತ್ತೀಚಿಗೆ ಜರುಗಿತು . ಚಂದನ ಸಾಹಿತ್ಯ ವೇದಿಕೆಯ ದಶಮಾನೋತ್ಸವ ಮತ್ತು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಂಗೀತ...
ಎಲಿಮಲೆ ಅಂಗನವಾಡಿ ಕೇಂದ್ರದಲ್ಲಿ ಮಹಾಲಕ್ಷ್ಮಿ ಸ್ತ್ರೀಶಕ್ತಿ ಸ್ವ ಸಹಾಯ ಸಂಘದ ಸದಸರಿಂದ ಶ್ರಮದಾನ ನಡೆಯಿತು. ಊಟದ ವ್ಯವಸ್ಥೆಯನ್ನು ಅಂಗನವಾಡಿ ಕೇಂದ್ರ ಹಾಗೂ ಉತ್ಸವ ಜನರಲ್ ಸ್ಟೋರ್ ಮಾಲಕರಾದ ಸವಿತಾ ಕೇಶವ ಕಾಯರ ನೀಡಿ ಸಹಕರಿಸಿದರು.
ಆಲೆಟ್ಟಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾದ ನೂತನ ಗ್ರಾಮ ಪಂಚಾಯತ್ ಸದಸ್ಯರು ಫೆ.5 ರಂದು ಕಾಂಗ್ರೆಸ್ ನಾಯಕ ಹಾಗು ಮಾಜಿ ಸಚಿವ ಬಿ ರಮಾನಾಥ ರೈ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದರು . ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮುತ್ತಪ್ಪ ಪೂಜಾರಿ ಆಲೆಟ್ಟಿ , ಸತ್ಯಕುಮಾರ್ ಆಡಿಂಜ ,...
ಶಿಕಾರಿಗೆಂದು ಹೋದ ಯುವಕರ ಯಡವಟ್ಟಿನಿಂದಾಗಿ ಒಬ್ಬನಿಗೆ ಗುಂಡು ತಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ವರದಿಯಾಗಿದೆ. ಅರಂತೋಡಿನ ನಾಲ್ವರು ಯುವಕರು ನಿನ್ನೆ ರಾತ್ರಿ ಶಿಕಾರಿಗೆ ಪೂಮಲೆ ಕಾಡಿಗೆ ಹೋಗಿದ್ದರು. ಬೇರೆ ಬೇರೆ ಕಡೆ ಕುಳಿತು ಕಾಡುಪ್ರಾಣಿಗಳ ನಿರೀಕ್ಷೆಯಲ್ಲಿದ್ದಾಗ ಶಬ್ದ ಬಂದತ್ತ ಒಬ್ಬ ಗುಂಡು ಹಾರಿಸಿದ. ಅದು ಆ ಕಡೆ ಕುಳಿತಿದ್ದ ಸತ್ಯಮೂರ್ತಿ ಎಂಬ ಯುವಕನಿಗೆ ತಾಗಿತೆಂದು...
ಸುಬ್ರಹ್ಮಣ್ಯ ಮಠದಲ್ಲಿ ಪೂಜೆ ಮಾಡುತ್ತಿರುವ ಕಳಂಜ ಗ್ರಾಮದ ಶ್ರೀಕೃಷ್ಣ ರಾವ್ ಅವರ ತಂದೆ ವೆಂಕಟರಮಣಯ್ಯ ಇವರಿಗೆ ಭಕ್ತರೋರ್ವರ ಮೊಬೈಲ್ ದೊರೆತಿದ್ದು ಅದನ್ನು ಶ್ರೀಕೃಷ್ಣ ರಾವ್ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತಲುಪಿಸಿ ಪ್ರಾಮಾಣಿಕ ಮೆರೆದಿರುತ್ತಾರೆ. ಸಂಬಂಧಪಟ್ಟವರು ಪೋಲೀಸ್ ಠಾಣೆಯಿಂದ ಸೂಕ್ತ ದಾಖಲೆ ನೀಡಿ ಪಡೆದುಕೊಳ್ಳಲು ಸೂಚಿಸಿದ್ದಾರೆ.
Loading posts...
All posts loaded
No more posts
