ದ್ವಾದಶ ರಾಶಿಗಳ ದಿನಭವಿಷ್ಯ ; ದಿನಾಂಕ : 23-11-2026 ; ವಾರ : ಸೋಮವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . . . .

*01,🐏ಮೇಷರಾಶಿ🐏*📃,ಯಾವುದೂ ನಿಮಗೆ ಕಷ್ಟವಲ್ಲ. ಆದರೆ ಯಾಕೋ ತಿಳಿದಷ್ಟು ವೇಗದಿಂದ ಮುಂದೆ ಸಾಗಲಾರದು ಎಂಬ ತಳಮಳ ನಿಮ್ಮನ್ನು ಬಾಧಿಸುವುದು. ಆದರೆ ಪೂರ್ವ ತಯಾರಿ ಸೂಕ್ತವಾಗಿ ಮಾಡಿಕೊಂಡಲ್ಲಿ ನಿಶ್ಚಿತವಾದ ಗುರಿಯನ್ನು ತಲುಪುವಿರಿ. ಆದಾಯ ಖರ್ಚನ್ನು ಸೂಕ್ಷ್ಮವಾಗಿ ಪರಿಶೀಲಿಸಿ,ಗಮನಿಸಿ:- ಕೆಲವು ಘಟನೆಗಳು ನಿಮ್ಮನ್ನಿಂದು ಭಾವಪರವಶರನ್ನಾಗಿಸುವವು,ಪರಿಹಾರ:-ಸಂಜೆ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬನ್ನಿ,

. . . . . . .

*02,🐂ವೃಷಭರಾಶಿ🐂*📃,ಕೋರ್ಟು ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವವು. ತೀರ್ಪು ಕೂಡಾ ನಿಮ್ಮ ಪರವಾಗಿ ಬರುವುದರಿಂದ ಮನಸ್ಸಿಗೆ ಸಂತಸವಾಗುವುದು. ಇದರಿಂದ ಒಳಿತನ್ನು ಕಾಣುವಿರಿ. ಪ್ರಯಾಣದಲ್ಲಿ ಎಚ್ಚರ ಇರಲಿ,ಗಮನಿಸಿ:-ಹಣ್ಣು, ಐಸ್ ಕ್ರೀಮ್, ಹೂವು, ನೀರಿಗೆ ಸಂಬಂಧಿಸಿದ ವ್ಯಾಪಾರಿಗಳಿಗೆ ಇಂದು ವಿಶೇಷ ಲಾಭವಾಗುವುದು,ಪರಿಹಾರ:-ಬಡವರಿಗೆ ಆಹಾರ ನೀಡಿ,

*03,🧜‍♀️ಮಿಥುನರಾಶಿ🧜‍♀️*📃,ಅವಸರದ ಕೆಲಸಗಳು ಅವ್ಯವಸ್ಥೆಯನ್ನು ಉಂಟು ಮಾಡುವುದು.ಯಾವಾಗಲೂ ಕ್ರಮಬದ್ಧವಾಗಿ ಯೋಚಿಸುವ ನೀವು ಇಂದೇಕೋ ತಾಳ್ಮೆಯನ್ನು ಕಳೆದು ಕೊಳ್ಳುವಿರಿ. ತಂದೆಯವರಿಗೆ ಅಗತ್ಯವಿದ್ದಲ್ಲಿ ಸಹಾಯ ಮಾಡಿ,ಗಮನಿಸಿ:-ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಇಂದು ನಿಮ್ಮ ಆಜ್ಞೆಯನ್ನು ತಿರಸ್ಕರಿಸಬಹುದು,ಪರಿಹಾರ:-ಹನುಮಾನ್ ಚಾಲೀಸಾ ಪಠಿಸಿ,

*04,🦀ಕಟಕ ರಾಶಿ🦀*📃,ಎಷ್ಟೆಲ್ಲಾ ಕನಸುಗಳನ್ನು ಕಾಣುವಿರಿ. ಆದರೆ ನನಸಾಗುವ ಘಟ್ಟ ತಲುಪಿದಾಗ ನಿಮಗೆ ನಿರಾಶೆ ಕಾಣುವುದು. ನಿಮಗೆ ಅನುಭವ ಇರುವ ಕೆಲಸವನ್ನು ಹುಡುಕಿ ಮಾಡಿದಲ್ಲಿ ಯಶಸ್ಸನ್ನು ಹೊಂದಲು ಸಹಕಾರಿಯಾಗುವುದು. ಗಟ್ಟಿಯಾದ ಮನೋಸ್ಥಿತಿ ರೂಪಿಸಿಕೊಳ್ಳಿ,ಗಮನಿಸಿ:-ಖರೀದಿ/ಮಾರಾಟ ಮತ್ತು ಸಾಲಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗರೂಕರಾಗಿರಿ,ಪರಿಹಾರ:-ನಿಮ್ಮ ಮನೆದೇವರ ಸ್ಮರಣೆ ಮಾಡಿ,

*05,🦁ಸಿಂಹ ರಾಶಿ🦁*📃,ಕೆಲವು ಅಪರೂಪದ ಶಕ್ತಿ, ಸಾಹಸ, ಪ್ರತಿಭೆಗಳನ್ನು ನೀವು ಹೊಂದಿರುವುದರಿಂದ ಅವೆಲ್ಲವೂ ನಿಮ್ಮ ಉಪಯೋಗಕ್ಕೆ ಬರುತ್ತವೆ, ಇದರಿಂದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗುವಿರಿ. ಮನಸ್ತಾಪ ಮತ್ತು ಜಗಳಗಳಿಗೆ ಈ ದಿನ ಅವಕಾಶ ಕೊಡದಿರಿ, ನಿಮ್ಮ ಮೇಲೆ ಸುಳ್ಳು ಆಪಾದನೆಗಳು ಬರುವ ಸಾಧ್ಯತೆ ಇದೆ,ಗಮನಿಸಿ:-ಆಹಾರ ಸೇವನಾ ಕ್ರಮದತ್ತ ಜಾಗೂರುಕತೆ ವಹಿಸಿ,ಪರಿಹಾರ:-ಶ್ರೀ ಆಂಜನೇಯ ಸ್ವಾಮಿಯ ಮಂತ್ರವನ್ನು ಪಠಿಸಿ,

*06,👩‍🦳ಕನ್ಯಾ ರಾಶಿ👩‍🦳*📃,ಶ್ರಮಪಟ್ಟರೆ ಕೆಲವು ಸಿದ್ಧಿಗಳನ್ನು ಸಂಪಾದಿಸಿಕೊಳ್ಳಲು ಈಗ ನಿಮಗೆ ದೈವಾನುಕೂಲವಿದೆ. ನಿಮ್ಮ ಮಾತುಗಳನ್ನು ನಿಯಂತ್ರಿಸಿಕೊಳ್ಳಿ. ಸಂಕಲ್ಪಿತ ಗುರಿ ಈಡೇರಿಸಿಕೊಳ್ಳುವವರೆಗೂ ನಿಮ್ಮ ಯೋಜನೆಗಳನ್ನು ಅನ್ಯರ ಬಳಿಯಲ್ಲಿ ಬಹಿರಂಗಗೊಳಿಸದಿರಿ,ಗಮನಿಸಿ:-ಬಂಧು ಮಿತ್ರರೊಂದಿಗೆ ಈ ದಿನ ನಿಮ್ಮ ಸಂಬಂಧವೂ ಉತ್ತಮಗೊಳ್ಳುವುದು,ಪರಿಹಾರ:-ಶ್ರೀ ಗುರು ವೀರ ಬ್ರಹ್ಮೇಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡಿ,

*07,⚖️ತುಲಾ ರಾಶಿ⚖️*📃,ಶತ್ರುಗಳು ನಿಮ್ಮ ಯೋಜನೆ ತಿಳಿಯಲು ಪ್ರಯತ್ನಿಸುವರು.ಹಾಗಾಗಿ ನೀವು ನಿಮ್ಮ ಮನೆಯ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವನ್ನು ತಂದುಕೊಳ್ಳದಿರಿ.ಮತ್ತು ಮನೆಯ ಗುಟ್ಟನ್ನು ಹೊರಗೆ ಹಾಕದಿರಿ.ಕೆಲಸ ಮಾಡುವಾಗ ಗಾಯಗೊಳ್ಳುವ ಸಂಭವವಿದೆ,ಗಮನಿಸಿ:-ಹಣ ಕಾಸಿನ ವಿಷಯದಲ್ಲಿ ಜಾಗ್ರತೆ ಅವಶ್ಯ,ಪರಿಹಾರ:- ಶಿವ ಪಂಚಾಕ್ಷರಿ ಮಂತ್ರ ಪಠಿಸಿ,

*08,🦂ವೃಶ್ಚಿಕ ರಾಶಿ🦂*📃,ಮನಸ್ಸನ್ನು ಗೊಂದಲ ಮಾಡಿಕೊಂಡು ಕಾರ್ಯ ಪ್ರವೃತ್ತರಾದಲ್ಲಿ ಯಶಸ್ಸು ದೊರೆಯುವುದು ನಿಧಾನವಾಗುವುದು. ಚಿಕ್ಕ ವಿಷಯಗಳಿಗೆ ಮನೆಯಲ್ಲೇ ಮನಸ್ತಾಪ ಭುಗಿಲೇಳುವ ಸಾಧ್ಯತೆ ಇದೆ. ಆಹಾರ ಸೇವನೆಯ ಕಡೆಗೆ ವಿಶೇಷ ಗಮನ ಅಗತ್ಯ,ಗಮನಿಸಿ:-ಅಜಾಗರೂಕತೆಯಿಂದ ನಿಮ್ಮ ಅರೋಗ್ಯ ಕೆಡಬಹುದು,ಪರಿಹಾರ:-ಕುಲದೇವರ ದರ್ಶನ ಮಾಡಿ,

*09,🏹ಧನುಸ್ಸುರಾಶಿ🏹*📃,ಮಕ್ಕಳ ವಿಚಾರಧಾರೆಗಳು ನಿಮ್ಮ ಮನಸಿಗೆ ಘಾಸಿ ಮಾಡುವ ಸಂಭವವಿದೆ. ಅವರಿಗೆ ಗುರು ಹಿರಿಯರ ಮೂಲಕ ಬುದ್ಧಿಮಾತನ್ನು ಹೇಳಿಸಿ. ಸಾಲ, ಆರ್ಥಿಕ ಬಂಡವಾಳ ಹೂಡಿಕೆ ಮತ್ತು ಖರೀದಿ/ ಮಾರಾಟ ವ್ಯವಹಾರಗಳನ್ನು ಈ ದಿನ ಮಾಡದಿರಿ,ಗಮನಿಸಿ:-ವಾಹನ ಚಾಲನೆ ಮಾಡುವಾಗ ಜಾಗ್ರತೆ ವಹಿಸಿ,ಪರಿಹಾರ:-ಸಾಧ್ಯವಾದರೆ ಶಿವಾಲಯದಲ್ಲಿ ರುದ್ರಾಭಿಷೇಕ ಮಾಡಿಸಿ,

*10,🐊ಮಕರ ರಾಶಿ🐊*📃,ಕಾರಣವಿಲ್ಲದೆ ಶತ್ರುಗಳ ಸಂಖ್ಯೆ ಜಾಸ್ತಿಯಾಗುವ ಸಂಭವವಿದೆ. ಆದರೆ ಅವರನ್ನು ನಿಗ್ರಹಿಸುವುದು ನಿಮ್ಮ ಕೈಯಲ್ಲಿಲ್ಲ ಎನ್ನುವ ಸತ್ಯವನ್ನು ಅರಿಯುವಿರಿ. ನಿಮಗೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದು ದೊಡ್ಡ ಸಮಸ್ಯೆಯಾಗಿ ಈ ದಿನ ಕಾಡಬಹುದು,ಗಮನಿಸಿ:-ಈ ದಿನ ಶುಭ ವಾರ್ತೆಯೊಂದನ್ನು ಕೇಳುವಿರಿ,ಪರಿಹಾರ:-ಶ್ರೀ ದುರ್ಗಾ ದೇವಿಯನ್ನು ಪ್ರಾರ್ಥಿಸಿ,

*11,⚱️ಕುಂಭ ರಾಶಿ⚱️*📃,ಗ್ರಹಗತಿಗಳು ವಿಮುಖವಾಗಿರುವಾಗ ಸಣ್ಣ ಕೆಲಸವು ದೀರ್ಘಾವಧಿಯನ್ನು ತೆಗೆದುಕೊಳ್ಳುವುದು. ಇದಕ್ಕಾಗಿ ಆತಂಕ ಪಡದೆ ಕೆಲಸ ಆಗುವವರೆಗೂ ತಾಳ್ಮೆಯಿಂದ ಇರುವುದು ಒಳ್ಳೆಯದು,ಗಮನಿಸಿ:-ಈ ದಿನ ಒಂದು ಅನಿರೀಕ್ಷಿತ ಸಂತೋಷಕರ ಘಟನೆ ನಿಮ್ಮ ಜೀವನದಲ್ಲಿ ನಡೆಯಬಹುದು,ಪರಿಹಾರ:-ಗುರು ಮತ್ತು ಶನಿಯ ಸ್ತೋತ್ರ ಪಠಿಸಿ,

*12,🐬ಮೀನ ರಾಶಿ🐬*📃,ನಿಮಗೆ ಒದಗಿದ ಅನೇಕ ಬಿಕ್ಕಟ್ಟುಗಳು ದೈವಕೃಪೆಯಿಂದ ಸಡಿಲಗೊಳ್ಳುವುವು. ಮತ್ತು ನಿಮ್ಮ ಬಹುದಿನದ ಬಯಕೆಗಳು ಗರಿಕೆದರಿ ಕುಣಿದಾಡುವುವು. ಸದ್ಯದರಲ್ಲೇ ಇನ್ನು ಹೆಚ್ಚು ಸಂತಸ ನೀಡುವ ವಾರ್ತೆಯನ್ನು ಕೇಳುವಿರಿ,ಗಮನಿಸಿ:-ನಿಮ್ಮ ಜ್ಞಾನವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿ ಕೊಂಡಲ್ಲಿ ಸಫಲತೆ ನಿಮ್ಮದಾಗುವುದು,ಪರಿಹಾರ:-ಗಣಪತಿಯ ಪ್ರಾರ್ಥನೆ ಮಾಡಿ,


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading