ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ದುಬೈನಲ್ಲಿ ಅಂತರಾಷ್ಟ್ರೀಯ ಹ್ಯಾಕಥಾನ್

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಸ್ಪಿಯರ್ ಹೈವ್ ಕ್ಲಬ್ ವತಿಯಿಂದ ಅಂತರಾಷ್ಟ್ರೀಯ ಹ್ಯಾಕಥಾನ್ “NOVA” ದುಬೈನ ಬಿಟ್ಸ್ ಪಿಲಾನಿ ಕ್ಯಾಂಪಸ್‌ನಲ್ಲಿ ನ. 12, 13ರಂದು ಮೈಕ್ರೋಸಾಪ್ಟ್ಟೆಕ್ ಕ್ಲಬ್ ಬಿಟ್ಸ್ ಪಿಲಾನಿಯ ಸಹಯೋಗದೊಂದಿಗೆ ನಡೆಯಿತು.

. . . . . . . . .

ಕೆ.ವಿ.ಜಿ.ಸಿ.ಇ.ಯ ಒಂದು ತಂಡವೂ ಸೇರಿದಂತೆ ವಿವಿಧ ದೇಶಗಳಲ್ಲಿ ನಡೆಸಿದ ಪ್ರಿಲಿಮಿನರಿ ರೌಂಡ್‌ನಲ್ಲಿ ಫೈನಲ್‌ಗೆ ಒಟ್ಟು 24 ತಂಡಗಳನ್ನು ಆರಿಸಲಾಗಿತ್ತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ ಉದ್ಘಾಟಿಸಿದರು. ಬಿಟ್ಸ್ ಪಿಲಾನಿ ದುಬೈನ ಡೀನ್ ಡಾ. ರಾಮಲಿಂಗೇಶ್ವರಂ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಯೋಜಕರಾಗಿ, ಅರ್ಷದ್ ಆರ್.ಎ., ಮೊಹಮ್ಮದ್ ರಾಹಿಲ್, ಮಾನ್ಯ ಎ. ತನ್ವಿತ್ ಬಿ., ನೂಮ ಸಂಶುದ್ದೀನ್, ಫಿದಾಯೂ ಸುಫ್, ಪ್ರತೀಕ್ಷಾ ಭಾಗವಹಿಸಿದ್ದರು. ದುಬೈನಲ್ಲಿ ಸಕ್ರಿಯವಾಗಿರುವ ಕೆ.ವಿ.ಜಿ.ಸಿ.ಇ.ಯ ಹಳೆ ವಿದ್ಯಾರ್ಥಿ ಸಂಘ ‘ಸುಳ್ಯ ಇಂಜಿನಿರ‍್ಸ್ ಅಸೋಸಿಯೇಷನ್’ ಪ್ರಾಯೋಜಕತ್ವವನ್ನು ನೀಡಿ ಸಹಕರಿಸಿದ್ದರು. ಪ್ರಥಮ ಸ್ಥಾನವನ್ನು ಟೀಮ್ Enigma Bits Pilani, ದ್ವಿತೀಯ ಸ್ಥಾನವನ್ನು ಟೀಮ್ Devs, Amity University, Dubai, ಹಾಗೂ ತೃತೀಯ ಸ್ಥಾನವನ್ನು ಟೀಮ್ ಸೈಫರ್‌ಓಪ್ಸ್ – ಬರ್ನಿಂಗ್ ಹ್ಯಾಮ್ ಪಡೆದುಕೊಂಡಿತು. ನ. 14ರಂದು ದುಬೈನಲ್ಲಿ ನೆಲೆಸಿರುವ ಕಾಲೇಜಿನ ಎಲ್ಲ ಹಳೆ ವಿದ್ಯಾರ್ಥಿಗಳ ಸಮಾಗಮ ನಡೆಯಿತು. ಪ್ರಾಂಶುಪಾಲ ಡಾ. ಸುರೇಶ ವಿ. ಯವರು ಅಧ್ಯಕ್ಷತೆಯನ್ನು ವಹಿಸಿ ಕಾಲೇಜಿನ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಕೆ.ವಿ.ಜಿ.ಸಿ.ಇ.ಯ ವಿದ್ಯಾರ್ಥಿಗಳಿಗೆ ದುಬೈನಲ್ಲಿತರಬೇತಿ ಮತ್ತು ಉದ್ಯೋಗಾವಕಾಶವನ್ನು ಒದಗಿಸುವ ಕಾರ್ಯದಲ್ಲಿ ಸಹಕರಿಸುವುದಾಗಿ ಸಂಘದ ಅಧ್ಯಕ್ಷ ರತೀಶ್ ರವೀಂದ್ರನ್ ಹಾಗೂ ಎಲ್ಲ ಪದಾಧಿಕಾರಿಗಳು ಭರವಸೆ ನೀಡಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ), ಕಮಿಟಿ ‘ಬಿ’ ಇದರ ಅಧ್ಯಕ್ಷ ಡಾ| ರೇಣುಕಾಪ್ರಸಾದ್ ಕೆ.ವಿ. ಹಾಗೂ ಸೆಕ್ರೆಟರಿ, ಎ.ಒ.ಎಲ್.ಇ (ರಿ) ಕಮಿಟಿ ‘ಬಿ’ ಡಾ. ಜ್ಯೋತಿ ಆರ್. ಪ್ರಸಾದ್ ಅವರು ಆಯೋಜಕ ತಂಡವನ್ನು ಅಭಿನಂದಿಸಿ ಅನುದಾನವನ್ನು ಒದಗಿಸಿಕೊಟ್ಟಿದ್ದರು. ಸುದ್ದಿ ಮಾಧ್ಯಮತಂಡವು ಮಾಧ್ಯಮ ಪ್ರಚಾರಕರಾಗಿ ಸಹಕರಿಸಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading