110 ಕೆ.ವಿ ವಿದ್ಯುತ್ ಲೈನ್ ಕಾಮಗಾರಿ ಕುರಿತ ಪ್ರಗತಿ ಪರಿಶೀಲನಾ ಸಭೆ : ಅಕ್ಟೋಬರ್ 7 ಕ್ಕೆ ಜಂಟಿ ಸರ್ವೆಗೆ ಮುಹೂರ್ತ ; ಮಾರ್ಚ್ ಒಳಗೆ ಪೂರ್ಣಗೊಳಿಸಲು ಶಾಸಕಿ ಭಾಗೀರಥಿ ಮುರುಳ್ಯ ಗಡುವು

. . . . . . . . .


(ಸುದೀಪ್ ರಾಜ್ ಮುಳ್ಯ) ಸುಳ್ಯ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ತಾಲೂಕಿನ ಬಹುನಿರೀಕ್ಷಿತ ೧೧೦ ಕೆ.ವಿ ವಿದ್ಯುತ್ ಲೈನ್ ಕಾಮಗಾರಿಯ ಕಾರಿಡಾರ್ ಸಮಸ್ಯೆಗಳನ್ನು ಬಗೆಹರಿಸಲು ಕಂದಾಯ ಹಾಗೂ ಕೆಪಿಟಿಸಿಎಲ್ ಇಲಾಖೆಗಳ ವತಿಯಿಂದ ಅಕ್ಟೋಬರ್ ೭ರಂದು ಮಹತ್ವದ ಜಂಟಿ ಕಾರಿಡಾರ್ ಸರ್ವೆ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಸಂಪೂರ್ಣ ಕಾಮಗಾರಿಯನ್ನು ಮುಂಬರುವ ಮಾರ್ಚ್ ಒಳಗೆ ಪೂರ್ಣಗೊಳಿಸುವಂತೆ ಶಾಸಕಿ ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

. . . . . . .


ಸುಳ್ಯದ ಶಾಸಕರ ಕಚೇರಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ೧೧೦ ಕೆ.ವಿ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ಯೋಜನೆಯ ಪ್ರಸ್ತುತ ಪ್ರಗತಿಯ ಸಮಗ್ರ ವಿವರ ನೀಡಿ, “ಒಟ್ಟು 89 ಫೌಂಡೇಷನ್‌ಗಳ ಪೈಕಿ 57 ಕಡೆಗಳಲ್ಲಿ ಫೌಂಡೇಷನ್ ಕಾಮಗಾರಿ ಪೂರ್ಣಗೊಂಡಿದೆ ಹಾಗೂ 6 ಕಡೆಗಳಲ್ಲಿ ಟವರ್ ನಿರ್ಮಾಣ ಮುಕ್ತಾಯವಾಗಿದೆ. ಕಾರಿಡಾರ್ ಸರ್ವೆಗೆ ಕನಿಷ್ಠ 3 ತಿಂಗಳುಗಳ ಕಾಲಾವಕಾಶ ಅಗತ್ಯವಿದೆ” ಎಂದು ಅಧಿಕಾರಿಗಳು ತಿಳಿಸಿದರು.ಸರ್ವೆ ನಡೆಯದ ಕಾರಣ ಜಮೀನಿನ ಮಾಲೀಕರು ಯಾರೆಂಬ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಹಿಂದೆ ಎರಡು ಬಾರಿ ಮಾಡಲಾಗಿದ್ದ ಮಾರ್ಕಿಂಗ್ ಅಳಿಸಿಹೋಗಿದ್ದು, ಕಂದಾಯ ಇಲಾಖೆಯೊಂದಿಗೆ ಜಂಟಿ ಕಾರಿಡಾರ್ ಸರ್ವೆ ನಡೆಸಿ ಎಫ್‌ಎಂಬಿ (FMB) ಸ್ಕೆಚ್ ಪಡೆಯಬೇಕಿದೆ. ಈಗಾಗಲೇ ವರದಿಯ ಪ್ರಕಾರ ಲೈನ್ ಹಾದುಹೋಗಿರುವ ಕಡೆಗಳಲ್ಲಿ ಆರ್‌ಟಿಸಿ ಮಾಲೀಕರಿಗೆ ಪರಿಹಾರದ ಮೊತ್ತವನ್ನು ಪಾವತಿಸಲಾಗಿದೆ. ಬಾಕಿ ಉಳಿದಿರುವ ಕಡೆ ಜಂಟಿ ಕಾರಿಡಾರ್ ಸರ್ವೆ ನಡೆಸಿ ಲೈನ್ ಎಳೆಯುವ ಕೆಲಸ ಮುಂದುವರಿಯಬೇಕಿದೆ” ಎಂದು ಅಧಿಕಾರಿಗಳು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಹಲವು ವರ್ಷಗಳಿಂದ ಈ ಯೋಜನೆ ಕುಂಟುತ್ತಾ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಯಾವುದೇ ಕಾರಣಕ್ಕೂ ಇಲಾಖೆಗಳ ಸಮನ್ವಯದ ಕೊರತೆಯಿಂದ ಕೆಲಸ ವಿಳಂಬವಾಗಬಾರದು. ಅಕ್ಟೋಬರ್ 07 ರಂದು ಜಂಟಿ ಕಾರಿಡಾರ್ ಸರ್ವೆ ನಡೆಸಿ ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕು ಹಾಗೂ ಮುಂಬರುವ ಮಾರ್ಚ್ ತಿಂಗಳೊಳಗೆ ಕಾಮಗಾರಿ ಸಂಪೂರ್ಣ ಮುಕ್ತಾಯಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು.

ನ್ಯಾಯಾಲಯ ಹಾಗೂ ಅರಣ್ಯ ಇಲಾಖೆಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, “೧೦ ಲೊಕೇಶನ್‌ಗಳ ವಿವಾದಗಳು ಕೋರ್ಟ್‌ಗೆ ಹೋಗಿ ಈಗಾಗಲೇ ಇತ್ಯರ್ಥಗೊಂಡಿವೆ. ಪ್ರಸ್ತುತ ೧೩ ಪ್ರಕರಣಗಳು ಡಿಸಿ ಕೋರ್ಟ್‌ನಲ್ಲಿ ಹಾಗೂ 2 ಪ್ರಕರಣಗಳು ಸುಳ್ಯ ಸಿವಿಲ್ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿವೆ. ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ 7 ಕಡೆಗಳಲ್ಲಿ ಮರ ತೆರವುಗೊಳಿಸಲು ಬಾಕಿ ಇದೆ. ಅರಣ್ಯ ವ್ಯಾಪ್ತಿಯಲ್ಲಿ ಮರ ಕಡಿಯಲು ಈಗಾಗಲೇ ಹಣ ಪಾವತಿ ಮಾಡಲಾಗಿದ್ದರೂ, ಮರ ಕಡಿಯುವ ಪ್ರಕ್ರಿಯೆ ವಿಳಂಬವಾಗುತ್ತಿದೆ” ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
“
ಸಭೆಯಲ್ಲಿ ಅಧಿಕಾರಿಗಳಾದ ಡಿ.ಎಸ್. ಚೈತನ್ಯ, ಜಯಪ್ರಸಾದ್ ಜೆ., ಸಚಿನ್ ಕುಮಾರ್, ಶ್ರೀನಾಥ್ ಆಚಾರ್ಯ, ವಿಷ್ಣು ನಾಯರ್, ಚಂದ್ರಶೇಖರ ರೆಡ್ಡಿ, ಚನ್ನಪ್ಪ, ನಾಗೇಂದ್ರ ನಾಯ್ಕ್, ಎ.ಡಿ.ಎಲ್.ಆರ್ ಶ್ರೀನಿವಾಸಮೂರ್ತಿ ಜಗದೀಶ್ ಕೆ. ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading