Ad Widget

ಮನವೇ….

ಮನವೇ ಯೋಚಿಸದಿರು ಈಗ ನಿನ್ನ ಸಮಯ ಕೆಟ್ಟಿದೆ ಎಂದು…
ಮನವೇ ಚಿಂತಿಸದಿರು ನಿನ್ನ ಮುಂದೆ ಹಲವಾರು ನೋವುಗಳಿದೆ ಎಂದು…

. . . . . . . . .

ಮನವೇ ಹೆದರದಿರು ನಿನ್ನ ಮುಂದೆ ವಿಭಿನ್ನ ಸಮಸ್ಯೆಗಳಿದೆ ಎಂದು…
ಮನವೇ ಕಿವಿಗೊಡದಿರು ಸಮಾಜದ ನಕಾರಾತ್ಮಕ ಮಾತುಗಳಿಗೆ ಎಂದೆಂದು…

. . . . . . .

ಮನವೇ ಮರುಗದಿರು ಮೋಸದ ಮಾತುಗಳಿಗೆ ಎಂದೆಂದು…
ಮನವೇ ಕುಗ್ಗದಿರು ನಿನ್ನಲ್ಲಿ ಶಕ್ತಿ ಸಾಮರ್ಥ್ಯ ಇಲ್ಲ ಎಂದು…

ಮನವೇ ಆತ್ಮಸ್ಥೈರ್ಯ ಕಳೆದುಕೊಳ್ಳದಿರು ನಿನಗಾದ ಅವಮಾನಗಳ ನೆನಪಿಸಿಕೊಂಡು ಎಂದೂ…
ಮನವೇ ಆಸಕ್ತಿಯ ಕಳೆದುಕೊಳ್ಳದಿರು ನಿನ್ನ ಪ್ರಯತ್ನಕ್ಕೆ ಫಲ ಸಿಗಲಿಲ್ಲ ಎಂದು…

ಮನವೇ ಹಿಂಜರಿಯದಿರು ನಿನ್ನ ಮುಂದೆ ವಿಭಿನ್ನ ಸಾವಾಲುಗಳಿದೆ ಎಂದು…
ಮನವೇ ಅಲೋಚಿಸದಿರು ಕಳೆದು ಹೋದ ಕೆಟ್ಟ ಘಟನೆಗಳನ್ನು…

ಮನವೇ ದುಃಖಿಸದಿರು ನಿನ್ನ ಮುಂದೆ ಹಲವಾರು ಕಷ್ಟಗಳಿದೆ ಎಂದು…
ಮನವೇ ನಿರಿಕ್ಷೆ ಕಳೆದುಕೊಳ್ಳದಿರು ನೀ ಯೋಚಿಸಿದಂತೆ ನಡೆದಿಲ್ಲ ಎಂದು…

ಮನವೇ ಅರಿತುಕೋ ನಿನ್ನಲ್ಲಿರುವ ಅದ್ಭುತ ಶಕ್ತಿ ಸಾಮರ್ಥ್ಯಗಳನ್ನು…
ಮನವೇ ಮರೆಯದಿರು ನಿನ್ನ ಎಲ್ಲಾ ಕನಸುಗಳನ್ನು…

ಮನವೇ ನೆನಪಿಸಿಕೋ ನಿನ್ನ ಜೀವನದ ಮೌಲ್ಯಗಳನ್ನು…
ಮನವೇ ತಿಳಿದಿರು ಈ ಭೂಮಿಯಲ್ಲಿ ಯಾವುದು ಶಾಶ್ವತವಲ್ಲ ಎಂದು…

✍🏻 ಸೌಮ್ಯ.ಸಿ.ಡಿ.ಎಲಿಮಲೆ
ಕೆ.ಎಸ್.ಎಸ್.ಕಾಲೇಜು ಸುಬ್ರಹ್ಮಣ್ಯ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading