ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ವತಿಯಿಂದ ಸ್ವಚ್ಛತಾ ಆಂದೋಲನ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ – “ಅನ್ಸಾರ್ ಸಂಸ್ಥೆಯಿಂದ ಮಾದರಿ ಕಾರ್ಯ” : ಸುಧಾಕರ್ ರೈ

“ಕಳೆದ 59 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರ ದಲ್ಲಿ ನಿರಂತರ ಸೇವೆ ಸಲ್ಲಿಸಿ ವಜ್ರ ಮಹೋತ್ಸವದ ಹೊಸ್ತಿಲಲ್ಲಿರುವ, ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರ ದೊಂದಿಗೆ ಬೃಹತ್ ಸ್ವಚ್ಛತಾ ಆಂದೋಲನ ಮತ್ತು ತಿಂಗಳು ಪೂರ್ತಿ ವಿವಿಧ ಸ್ವಚ್ಛತೆಯ ಅಂಗವಾಗಿ ಆಯ್ದ ಸ್ಥಳಗಳಲ್ಲಿ ಪೋಸ್ಟರ್ ಅಳವಡಿಕೆ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಉಪನ್ಯಾಸ, ಕರ ಪತ್ರ ಹಂಚಿಕೆ, ಬಾಟಲ್, ಪ್ಲಾಸ್ಟಿಕ್ ಬೂತ್ ಅಳವಡಿಕೆ ಮೊದಲಾದ ನಾನಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

. . . . . . . . .

ಗಾಂಧಿನಗರ ಮುಖ್ಯ ರಸ್ತೆ, ಮಸೀದಿ, ಮದ್ರಸ ಪರಿಸರ, ಮುಖ್ಯ ಓಣಿಗಳಲ್ಲಿ ಇಂದು 170ಕ್ಕೂ ಮಿಕ್ಕಿ ಸ್ವಯಂ ಸೇವಕರು ಭಾಗವಹಿ ಸ್ವಚ್ಛತಾ ಕಾರ್ಯ ಕೈಗೊಂಡರು.

. . . . . . .

ಕಾರ್ಯಕ್ರಮವನ್ನು ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕದ ಸಭಾಪತಿ ಪಿ. ಬಿ. ಸುಧಾಕರ್ ರೈ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೆ.ಬಿ ಇಬ್ರಾಹಿಂ ವಹಿಸಿದ್ದರು. ನಂತರ ಮಾತನಾಡಿದ ಅವರು ಇದು ಸಮಾಜದಲ್ಲಿ ಸ್ವಾಸ್ತ್ಯ ಕಾಪಾಡುವ ಮಾದರಿ ಸಾಮಾಜಿಕ ಕಾರ್ಯ ಎಂದರು. ಕಾರ್ಯಕ್ರಮದಲ್ಲಿ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ಗಾಂಧೀನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್, ಅನ್ಸಾರಿಯಾ ಅಧ್ಯಕ್ಷ ಹಾಜಿ ಕೆ ಎಂ ಅಬ್ದುಲ್ ಮಜೀದ್, ಆದo ಹಾಜಿ ಕಮ್ಮಾಡಿ, ಸಾಂದೀಪನಿ ವಿಶೇಷ ಮಕ್ಕಳ ಶಾಲೆ ಸಂಚಾಲಕ ಎಂ. ಬಿ ಸದಾಶಿವ, ಕೆಫೆಕ್ ನಿಗಮದ ಮಾಜಿ ನಿರ್ದೇಶಕ ಪಿ. ಎ. ಮಹಮ್ಮದ್ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಂದೋಲನದ ಸಂಚಾಲಕ ಯಾಕೂಬ್ ಎಸ್ ಟಿ ಸ್ವಾಗತಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading