ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಯುವಜನ ಸೇವಾ ಸಂಸ್ಥೆಯಲ್ಲಿ ಅನ್ನಪೂರ್ಣ ಕಟ್ಟಡದ ಲೋಕಾರ್ಪಣೆ

ಸುಳ್ಯದ ಯುವಜನ ಸಂಯುಕ್ತ ಮಂಡಳಿ ಹಾಗೂ ಯುವಜನ ಸೇವಾ ಸಂಸ್ಥೆ ಇಲ್ಲಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ರೂ.10 ಲಕ್ಷ ಮೊತ್ತದಲ್ಲಿ ನಿರ್ಮಾಣಗೊಂಡ ಭೋಜನ ಶಾಲೆಯ ವಿಸ್ತೃತ ಕಟ್ಟಡ ಅನ್ನಪೂರ್ಣದ ಲೋಕಾರ್ಪಣಾ ಸಮಾರಂಭ ಆ.22ರಂದು ನಡೆಯಿತು. 

. . . . . . . . .

ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕಿ ಕು.ಭಾಗೀರಥಿ ‌ಮುರುಳ್ಯ ಅನ್ನಪೂರ್ಣದ ಲೋಕಾರ್ಪಣೆಗೈದರು. ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಅಧ್ಯಕ್ಷತೆ‌ ವಹಿಸಿದ್ದರು.

. . . . . . .

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಎಸ್.ಅಂಗಾರ ಉಪಸ್ಥಿತರಿದ್ದರು. ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಗೌರವ ಉಪಸ್ಥಿತರಿದ್ದರು. ಯುವಜನ ಸೇವಾ ಸಂಸ್ಥೆ ಕೋಶಾಧಿಕಾರಿ ಅನಿಲ್ ಪೂಜಾರಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ನಿತೇಶ್ ಎರ್ಮೆಟ್ಟಿ ಪ್ರಾರ್ಥಿಸಿದರು. ಯುವಜನ ಸೇವಾ ಸಂಸ್ಥೆ ಗೌ.ಕಾರ್ಯದರ್ಶಿ ದಯಾನಂದ ಕೇರ್ಪಳ ‌ಸ್ವಾಗತಿಸಿದರು. ಮಂಡಳಿಯ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಪ್ರಸಾದ್ ಕಾಟೂರು – ಗೌರವಾಧ್ಯಕ್ಷ ವಿಜಯ ಕುಮಾರ್ ಉಬರಡ್ಕ ಕಾರ್ಯಕ್ರಮ ‌ನಿರೂಪಿಸಿದರು.ವಿಜೇಶ್ ಹಿರಿಯಡ್ಕ ವಂದಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading