ಬಾಳಿಲದಲ್ಲಿ ಸ್ವಸ್ತ್ಯ ಆರೋಗ್ಯ ಕ್ಲಿನಿಕ್ ಉದ್ಘಾಟನೆ

“ರೋಗ ಬಂದಮೇಲೆ ಅದಕ್ಕೆ ಔಷಧಿ ತಗೊಳ್ಳೋದಕ್ಕಿಂತ ಮುಂಚೆ ರೋಗ ಬರದೆ ಹಾಗೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ. ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದರೊಂದಿಗೆ ಸಮೀಪದ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳಿಗೆ ಆರೋಗ್ಯ ಶಿಕ್ಷಣ ಮಾಹಿತಿ ಕೂಡ ನೀಡಬೇಕು. ಈ ನಿಟ್ಟಿನಲ್ಲಿ ನುರಿತ,ಅನುಭವಿ ವೈದ್ಯರಾದ ಡಾ. ಗಾನಶ್ರೀ ಅವರ ಸ್ವಸ್ತಿಯ ಆರೋಗ್ಯ ಕ್ಲಿನಿಕ್ , ಬಾಳಿಲದಂತಹ ಗ್ರಾಮೀಣ ಪ್ರದೇಶದಲ್ಲಿ ತೆರೆದಿರುವುದು ಅತಿ ಅಗತ್ಯವಾಗಿದೆ ಹಾಗೂ ಸಂತಸ ತಂದಿದೆ” ಎಂದು ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್ ನ ಆಡಳಿತ ನಿರ್ದೇಶಕ ಹಾಗೂ ಖ್ಯಾತ ವೈದ್ಯರಾದ ಡಾ. ಸುರೇಶ್ ಪುತ್ತೂರಾಯ ನುಡಿದರು. ಅವರು ಬಾಳಿದ ಸೇವಾ ಸಹಕಾರಿ ಸಂಘದ ಕಟ್ಟಡದ ಪ್ರಥಮ ಮಹಡಿಯಲ್ಲಿ ನೂತನವಾಗಿ ಆರಂಭಿಸಲಾದ ಸ್ವತ್ಯ ಆರೋಗ್ಯ ಕ್ಲಿನಿಕ್ ಅನ್ನು ಉದ್ಘಾಟಿಸಿ ಮಾತನಾಡಿದರು.

. . . . . . . . .

ಮುಖ್ಯ ಅತಿಥಿಗಳಾಗಿ ಬಾಳಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ರಾವ್ ಉಪಸ್ಥಿತರಿದ್ದು, ಶುಭ ಹಾರೈಸಿದರು. ಸೊಸೈಟಿ ಉಪಾಧ್ಯಕ್ಷ ಶ್ರೀಹರ್ಷ, ನಿರ್ದೇಶಕರಾದ ರವೀಂದ್ರ ರೈ, ಪ್ರಭಾಕರ್ ಆಳ್ವ, ಶ್ರೀಮತಿ ಸವಿತಾ, ಮತ್ತು ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . .

ಸುಬ್ರಹ್ಮಣ್ಯದ ಜೀವಶಾಸ್ತ್ರ ಉಪನ್ಯಾಸಕಿ ಶ್ರುತಿ ಅಶ್ವತ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಸ್ವಸ್ತಿಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಾನಶ್ರೀ ಎಲ್ಲರನ್ನೂ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪದ್ಮಯ್ಯ.ಸಿ.ಎಚ್, ಸುಳ್ಯದ ಉದ್ಯಮಿ ಹರಿಶ್ಚಂದ್ರ ಬಾಬ್ಲುಬೆಟ್ಟು, ವಾಣಿ ಬಾಬ್ಲುಬೆಟ್ಟು, ಅಶ್ವಥ್ ಯಳದಾಲು, ವಿಜಯಕುಮಾರ ನಡುತೋಟ, ಗಿರಿಧರ ನಡುತೋಟ, ಮಮತಾ ಮಲಯಾಳ, ಶ್ರೀಮತಿ ಲಲಿತ ಚಿದಾನಂದ ಗೌಡ ಕೊಂಬಾರು, ನಿವೃತ್ತ ನಿವೃತ್ತ ಸೈನ್ಯಾಧಿಕಾರಿ ಗೋಪಾಲ್ ಒಗ್ಗು, ಭಾರತಿ ಗೋಪಾಲ್, ಆನಂದ ಗೌಡ, ಮಲೆಯಾಳ, ನಿತ್ಯಾನಂದ ಗೌಡ ಮಲೆಯಾಳ ವೆಂಕಟರಮಣ ಮಲಯಾಳ, ಪುತ್ತೂರು ನ್ಯಾಯಾಲಯದ ಉದ್ಯೋಗಿ ಶ್ರೀಮತಿ ಸ್ಮಿತಾ, ಕಳಂಜ ಬಾಳಿಲ ಸೇವಾ ಸಹಕಾರಿ ಸಂಘದ ನಿರ್ದೇಶಕರುಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಡಾ.ಸುರೇಶ ಪುತ್ತೂರಾಯ ಹಾಗೂ ಅಜಿತ್ ರಾವ್ ಅವರುಗಳನ್ನ ಸನ್ಮಾನಿಸಲಾಯಿತು. ಡಾ. ಗಾನಶ್ರೀ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading