ಪಂಜ : ಸ್ಕೌಟ್ ಗೈಡ್ ವಾರ್ಷಿಕ ಮಹಾಸಭೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವಾರ್ಷಿಕ ಮಹಾಸಭೆ ಮತ್ತು ಸ್ಕೌಟ್ ಗೈಡ್ ಶಿಕ್ಷಕರ ಮಾಹಿತಿ ಕಾರ್ಯಗಾರವು ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ.ಕೆ ಅವರ ಅಧ್ಯಕ್ಷತೆಯಲ್ಲಿ 8 ಆಗಸ್ಟ್ 2026 ಶನಿವಾರದಂದು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಸಭಾಂಗಣದಲ್ಲಿ ಜರುಗಿತು.

. . . . . . . . .

ಜಿಲ್ಲಾ ಗೈಡ್ ಆಯುಕ್ತೆ ವಿಮಲ ರಂಗಯ್ಯ ಅವರು ಮಾತನಾಡಿ, “ಸ್ಕೌಟ್ ಗೈಡ್ ಚಟುವಟಿಕೆಗಳಲ್ಲಿ ಸ್ವಯಂ ಸ್ಪೂರ್ತಿಯಿಂದ ಭಾಗವಹಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ನವ ನವೀನ ಪ್ರಾವೀಣ್ಯತೆ ಪಡೆಯುವಂತೆ ಶಿಕ್ಷಕರು ಅನುಕೂಲಿಸಬೇಕು” ಎಂದು ಮಾರ್ಗದರ್ಶನ ನೀಡಿದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ಇವರು ಸ್ಥಳೀಯ ಸಂಸ್ಥೆಯ ದಳಗಳ ಚಾರ್ಟರ್ ನಂಬರ್, ಶಿಕ್ಷಕರ ವಾರೆಂಟ್ ಹಾಗೂ ಜಿಲ್ಲಾ – ರಾಜ್ಯ ಸ್ಕೌಟ್ ಗೈಡ್ ಯೋಜಿತ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸುಳ್ಯ ತಾಲೂಕಿನ ಸ್ಕೌಟ್ ಗೈಡ್ ಸಂಘಟನೆಯಲ್ಲಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯನ್ನು ಬಯಸಿದ ವಾಸುದೇವ ನಡ್ಕ ಅವರನ್ನು ಸನ್ಮಾನಿಸಲಾಯಿತು.
2025-26 ಲೆಕ್ಕಪತ್ರವನ್ನು ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ವಾಸುದೇವ ನಡ್ಕ ಮಂಡಿಸಿ, ಅನುಮೋದನೆ ಪಡೆದುಕೊಳ್ಳಲಾಯಿತು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಯಂತ.ಕೆ ಭಾಗವಹಿಸಿ ಸ್ಕೌಟ್-ಗೈಡ್ ಚಟುವಟಿಕೆಗಳಲ್ಲಿ ಜೀವಂತಿಕೆಯಿದೆ, ಈ ಚಟುವಟಿಕೆಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಇಲಾಖೆಯು ಸರ್ವ ರೀತಿಯ ಸಹಕಾರವನ್ನು ನೀಡುತ್ತದೆ ಎಂದರು.
2027-28ರ ವರೆಗಿನ ನೂತನ ಕೋಶಾಧಿಕಾರಿಯಾಗಿ ಸೋಮಶೇಖರ ನೇರಳ ಹಾಗೂ ಉಪಾಧ್ಯಕ್ಷರಾಗಿ ಯೋಗೀಶ್ ಪಂಜ ಇವರ ಪದಗ್ರಹಣ ಮಾಡಲಾಯಿತು. ಜಿಲ್ಲಾ ಸ್ಕೌಟ್ ಸಹಾಯಕ ಆಯುಕ್ತರಾದ ದೇವಿಪ್ರಸಾದ್ ಜಾಕೆ ಶುಭ ಹಾರೈಸಿದರು.

. . . . . . .

ಕಳೆದ ಶೈಕ್ಷಣಿಕ ಸಾಲಿನಲ್ಲಿ ನಡೆದ ದ್ವಿತೀಯ ಸೋಪಾನ ಪರೀಕ್ಷೆಯ ಉತ್ತೀರ್ಣರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ಪಟ್ಟಿಯನ್ನು ಸ್ಕೌಟರ್ ಅರವಿಂದ ಕೆ. ಜಿ ವಾಚಿಸಿದರು. ನೂತನ ಕೋಶಾಧಿಕಾರಿ ಸೋಮಶೇಖರ ನೇರಳ ಸ್ವಾಗತಿಸಿ, 2026 -27ರ ಆಯವ್ಯಯ ಮುಂಗಡಪತ್ರವನ್ನು ಸಭೆಯ ಮುಂದಿಟ್ಟು ಅನುಮೋದನೆ ಪಡೆದುಕೊಂಡರು.

2025-26ರ ವಾರ್ಷಿಕ ವರದಿಯನ್ನು ಮತ್ತು 2026-27ರ ವಾರ್ಷಿಕ ಯೋಜಿತ ಕಾರ್ಯಕ್ರಮಗಳ ಪಟ್ಟಿಯನ್ನು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ್ ರೈ ಎಸ್ ಬಾಳಿಲ ಸಭೆಗೆ ತಿಳಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪಾಧ್ಯಕ್ಷ ದಾಮೋದರ ನೇರಳ ವಂದಿಸಿದರು. ಪಂಜ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಪ್ರಾಥಮಿಕ, ಪ್ರೌಢಶಾಲೆಗಳ ಸ್ಕೌಟ್ ಗೈಡ್ ಶಿಕ್ಷಕರು ಹಾಗೂ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ರೋವರ್ ರೇಂಜರ್ ಉಪನ್ಯಾಸಕರು, ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading