ತಹಶೀಲ್ದಾರ್ ಗೆ ದೂರು: ಪಂಜಿಗಾರು–ಮಣಿಮಜಲು ರಸ್ತೆ ದುರಸ್ತಿಗೆ ಅಧಿಕಾರಿಗಳ ಭರವಸೆ

ಸುಳ್ಯ: ತಾಲೂಕಿನ ಕಳಂಜ ಗ್ರಾಮದ ಪಂಜಿಗಾರು–ಮಣಿಮಜಲು ಸಂಪರ್ಕ ರಸ್ತೆಯ ದುರವಸ್ಥೆ ಕುರಿತು ಗ್ರಾಮಸ್ಥರು ಸುಳ್ಯ ತಹಶೀಲ್ದಾರರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

. . . . . . . . .

ತೀರಾ ಹದಗೆಟ್ಟಿರುವ ಈ ರಸ್ತೆಯಿಂದ ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ವಾಹನ ಸವಾರರು ಪ್ರತಿನಿತ್ಯ ಸಂಚಾರದ ವೇಳೆ ತೀವ್ರ ತೊಂದರೆ ಅನುಭವಿಸುತ್ತಿದ್ದು, ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ತಹಶೀಲ್ದಾರರಿಗೆ ದೂರು ನೀಡಲಾಗಿತ್ತು.

. . . . . . .

ದೂರಿಗೆ ಸ್ಪಂದಿಸಿದ ಸುಳ್ಯ ಕಂದಾಯ ನಿರೀಕ್ಷಕ ರಂಜನ್ ಕಲ್ಕುದಿ, ಕಳಂಜ ಪಂಚಾಯತ್ ಪಿಡಿಒ ಗೀತಾ ಹಾಗೂ ವಿ.ಎ. ಮಿಥುನ್ ಅವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಪರಿಶೀಲಿಸಿದರು. ಸಮಸ್ಯೆಯ ಗಂಭೀರತೆಯನ್ನು ಮನಗಂಡ ಅಧಿಕಾರಿಗಳು ರಸ್ತೆಯನ್ನು ಶೀಘ್ರದಲ್ಲೇ ದುರಸ್ತಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಅಧಿಕಾರಿಗಳ ಭೇಟಿ ಹಾಗೂ ರಸ್ತೆ ದುರಸ್ತಿಯ ಭರವಸೆಯಿಂದ ಗ್ರಾಮಸ್ಥರಲ್ಲಿ ಆಶಾಭಾವನೆ ಮೂಡಿದ್ದು, ನೀಡಿದ ಭರವಸೆಯನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಜಮಾಲ್ ಮಣಿಮಜಲು, ಮಹೇಶ್ ಭಟ್, ವಸಂತ, ಎಲ್ಯಣ್ಣ, ಫಾರೂಕ್, ಚರಣ್, ಮಹಾ ಚಂದ್ರ, ಶಿವಾಜಿ, ಮುನೀರ್, ಪ್ರಶಾಂತ, ಚಿರಂಜೀವಿ, ನಝೀರ್ ಗ್ಯಾಲಕ್ಸಿ, ಸಂಜೀವ, ತೌಸಿ, ವೇಣು, ನಾರಾಯಣ ಹಾಗೂ ಮೊನಪ್ಪ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading