ಸಂಪಾಜೆ : ಕಾಡುಕೋಣ ಹತ್ಯೆ ಪ್ರಕರಣ – ಆರೋಪಿಗಳಿಗೆ ಜಾಮೀನು

ಕಾಡುಕೋಣ ಹತ್ಯೆ ಮಾಡಿ ಮಾಂಸ ಮಾರಾಟ ಮಾಡಿದ ಆರೋಪಕ್ಕೊಳಗಾಗಿ ಬಂಧಿತರಾಗಿದ್ದ ಇಬ್ಬರಿಗೆ ಸುಳ್ಯ ನ್ಯಾಯಾಲಯ ಜಾಮೀನು ನೀಡಿದೆ

. . . . . . . . .

ಕಾಡುಕೋಣ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಮೇಲೆ ಸಂಪಾಜೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆ. 5 ರಂದು ದಾಳಿ ಮಾಡಿ ಪೆರಾಜೆ ಗ್ರಾಮದ ಶರತ್‌ ಮತ್ತು ಗೌತಮ್ ಅವರನ್ನು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದರು. ನಂತರ ಅವರನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರಿ ಪಡಿಸಲಾಗಿತ್ತು.

. . . . . . .

ಅಲ್ಲಿಯ ನ್ಯಾಯಾಧೀಶರು ಕಾಡು ಕೋಣ ಹತ್ಯೆ ಮಾಡಿದ ಸ್ಥಳ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕಾಡುಪಂಜ ಸ್ಥಳ ಸುಳ್ಯ ತಾಲೂಕಿಗೆ ಸೇರಿದ ಸ್ಥಳವಾಗಿರುವ ಕಾರಣ ಕೇಸ್ ನ್ನು ಸ್ವೀಕಾರ ಮಾಡದೆ ಸುಳ್ಯ ಅರಣ್ಯ ಇಲಾಖೆ ಮತ್ತು ಸುಳ್ಯ ನ್ಯಾಯಾಲಯಕ್ಕೆ ಒಪ್ಪಿಸಲು ಸೂಚಿಸಿದ್ದರು. ನಂತರ ಸಂಪಾಜೆ ಅರಣ್ಯ ಇಲಾಖೆ ಆರೋಪಿಗಳನ್ನು ಸುಳ್ಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದರು.

ಸುಳ್ಯ ಅರಣ್ಯ ಇಲಾಖೆಯು ಆರೋಪಿಗಳನ್ನು ಆ.6 ರಂದು ರಾತ್ರಿ ಸುಳ್ಯ ನ್ಯಾಯಧೀಶರ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿದರು

ಆರೋಪಿಗಳ ಪರವಾಗಿ ನ್ಯಾಯವಾದಿ ಕೆ. ಎಲ್. ಪ್ರದೀಪ್ ಕುಮಾ‌ರ್ ಹಾಗೂ ಚರಣ್ ಕಾಯರ ವಾದಿಸಿದ್ದರು


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading