ಆ.9ರಂದು ಜೈ ತುಲುನಾಡ್ ಬೆಂಗಳೂರು ವತಿಯಿಂದ ತುಳುನಾಡ ಆಟಿ ಸಂಭ್ರಮ

ಬೆಂಗಳೂರು:2021 ನೇ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ “ವಿಶೇಷ ಸಂಘಟನಾ ಪುರಸ್ಕಾರ” ಪ್ರಶಸ್ತಿ ಪುರಸ್ಕೃತ ಜೈ ತುಲುನಾಡ್ ಬೆಂಗಳೂರು (ರಿ.) ವತಿಯಿಂದ ಆಗಸ್ಟ್ 9, 2026 (ಭಾನುವಾರ) ರಂದು ತುಳುನಾಡ ಆಟಿ ಸಂಭ್ರಮ ಬೆಂಗಳೂರಿನ ಬಿಳೇಕಹಳ್ಳಿಯ ವಿಜಯ ಬ್ಯಾಂಕ್ ಲೇಔಟ್‌ನ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

. . . . . . . . .

ಅಂದು ಬೆಳಿಗ್ಗೆ 7.15ಕ್ಕೆ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆಯೊಂದಿಗೆ ಆರಂಭವಾಗಲಿದ್ದು, 7.30ಕ್ಕೆ ಮೆರವಣಿಗೆ, 8.15ಕ್ಕೆ ಉದ್ಘಾಟನೆ ಹಾಗೂ 8.45ಕ್ಕೆ ಕುಣಿತ ಭಜನೆ ನಡೆಯಲಿದೆ.

. . . . . . .

ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೆ ತುಳು ಮಿನದನ, ಭರತನಾಟ್ಯ, ತುಳು ಜಾನಪದ ನೃತ್ಯ, ತುಳು ಸಂಗೀತ ರಸಮಂಜರಿ, ಕೋಟಿ ಚೆನ್ನಯ ಯಕ್ಷಗಾನ, ಯಶಸ್ವಿ ಡ್ಯಾನ್ಸ್ ಗ್ರೂಪ್ ಕುಡ್ಲದಿಂದ ತುಳು ಜಾನಪದ ನೃತ್ಯ, ತುಳುನಾಡಿನ ಆಟಿ ಕಳಂಜ ನೃತ್ಯ, ಆಟಿ ತಿಂಗಳ ಮಹತ್ವದ ಕುರಿತು ಅರಿವು ಕಾರ್ಯಕ್ರಮ, ಯುವವಾಹಿನಿ ಬೆಂಗಳೂರು ಘಟಕದ ಜಾನಪದ ನೃತ್ಯ, ತುಳು ಭಾಷೆಯ ಕುರಿತು ವಿಶೇಷ ವಿಮರ್ಶೆ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ವಿಶೇಷ ಆಕರ್ಷಣೆಯಾಗಿ ಚೆಂಡೆ ನೃತ್ಯ, ಕೋಟಿ-ಚೆನ್ನಯ ಕುರಿತ ತುಳು ಯಕ್ಷಗಾನವನ್ನು ಯಕ್ಷತರಂಗ ಬೆಂಗಳೂರು (ರಿ.) ಮಕ್ಕಳ ತಂಡ ಪ್ರದರ್ಶಿಸಲಿದೆ. ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಹಾಗೂ ದಂಪತಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ.
ಸಂಜೆ 4.30ಕ್ಕೆ ಸನ್ಮಾನ ಸಮಾರಂಭ, ಪ್ರಮಾಣಪತ್ರ ಹಾಗೂ ಬಹುಮಾನ ವಿತರಣೆ, ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಸಂಜೆ 7 ಗಂಟೆಯಿಂದ ತೆಲಿಕೆ-ನಲಿಕೆ, ತುಳು ಕಾಮಿಡಿ ಶೋ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆಟಿಯ ವಿಶೇಷ ಊಟದ ವ್ಯವಸ್ಥೆಯನ್ನೂ ಆಯೋಜಕರು ಕಲ್ಪಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ತುಳು ಅಭಿಮಾನಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷ ವಿನಯ್ ಮಣಿಯಾನ, ಕಾರ್ಯದರ್ಶಿ ಅಕ್ಷಯ್ ಆಚಾರ್ಯ, ಖಜಾಂಜಿ ರಂಜನ್ ಎಸ್.ವೈ. ಗೌರವ ಸಲಹೆಗಾರ ನಿಧೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading