ಸುಬ್ರಹ್ಮಣ್ಯ : ಮೆಸ್ಕಾಂ ಮೆಕ್ಯಾನಿಕ್ ಪಾಲಾಕ್ಷರವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ

ಸುಬ್ರಹ್ಮಣ್ಯ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿ, ಸುಬ್ರಹ್ಮಣ್ಯ ಉಪ ವಿಭಾಗ ಹಾಗೂ ಶಾಖೆಯ ಹಿರಿಯ ಮೆಕ್ಯಾನಿಕ್ ಪಾಲಾಕ್ಷರವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವು ಜು.31 ಶುಕ್ರವಾರ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ಜರಗಿತು.

. . . . . . . . .

ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ ಸಪಲ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ವಿಭಾಗದ ಹಿರಿಯ ಲೆಕ್ಕಾಧಿಕಾರಿ ನಾರಾಯಣ ಶನಿ ಉಪಸ್ಥಿತರಿದ್ದರು. ಪಾಲಾಕ್ಷರವರ ಮೆಸ್ಕಾಂ ಸೇವೆಯ ಬಗ್ಗೆ ಗುತ್ತಿಗಾರು ಶಾಖಾಧಿಕಾರಿ ಲೊಕೇಶ ಎಣ್ಣೆಮಜಲು, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಶ್ ಎನ್.ಎಸ್, ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ, ಪ್ರಗತಿಪರ ಕೃಷಿಕ ಮಾದವ ಗೌಡ 

. . . . . . .

 ಕತ್ಲಡ್ಕ, ಯೇನೇಕಲ್ಲು ಸೊಸೈಟಿ ಅಧ್ಯಕ್ಷ ಭವಾನಿ ಶಂಕರ ಪೂಂಬಾಡಿ, ಸುಬ್ರಹ್ಮಣ್ಯದ ಅಚ್ಯುತ ಗೌಡ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಸೇರಿದಂತೆ ಮುಂತಾದವರು ಪಾಲಾಕ್ಷರವರ ಸೇವೆಯ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ನೌಕರರ ಸಂಘದ ಸ್ಥಳೀಯ ಸಮಿತಿ ಪುತ್ತೂರಿನ ಜಯರಾಜ್, ಸುಬ್ರಹ್ಮಣ್ಯ ಶಾಖಾ ಸಹಾಯಕ ಇಂಜಿನಿಯರ್ ಚಿದಾನಂದ, ನಿವೃತ್ತ ಶಾಖಾಧಿಕಾರಿ ಬೋರಯ್ಯ, ದ.ಕ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಗುತ್ತಿಗೆದಾರರ ಕಾರ್ಯಕಾರಿ ಸಮಿತಿ ಸದಸ್ಯ ಮೈಲಪ್ಪ ಸಂಕೇಶ ಉಪಸ್ಥಿತರಿದ್ದರು.

ಪಾಲಾಕ್ಷಯ್ಯ ದಂಪತಿ ಅವರನ್ನು ಸುಬ್ರಹ್ಮಣ್ಯ ಮೆಸ್ಕಾ ಉಪ ವಿಭಾಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಗುತ್ತಿಗಾರು, ಯೇನೆಕಲ್ಲು, ಪಂಜ, ಹರಿಹರ, ಬಳ್ಪ ಮುಂತಾದ ಕಡೆಗಳಿಂದ ಬಂದ ಸಾರ್ವಜನಿಕರು ಗೌರವಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾಲಾಕ್ಷಯ್ಯ ಅವರು “ನಾನು ಮೆಸ್ಕಾಂನಲ್ಲಿ ಸಲ್ಲಿಸಿದ್ದ ಸೇವೆ ಎಲ್ಲ ನಾಗರಿಕರ, ವಿದ್ಯುತ್ ಬಳಕೆದಾರರ, ಇಲಖಾಧಿಕಾರಿಗಳ ಹಾಗೂ ಸಿಬ್ಬಂದಿಗಳ ಸರ್ವ ಸಹಕಾರ ಹಾಗೂ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಹಾಗೆ ನಿವೃತ್ತಿ ಜೀವನಕ್ಕೆ ಶುಭವನ್ನು ಕೋರಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು. ಸುಬ್ರಹ್ಮಣ್ಯ ಉಪ ವಿಭಾಗದ ಹಿರಿಯ ಸಹಾಯಕ ಪ್ರಭಾಕರ್ ಕಳಿಗೆ ಸ್ವಾಗತಿಸಿದರು. ಏ.ಇ.ಟಿ ಹರಿಕೃಷ್ಣ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading