ಟ್ರಾಫಿಕ್ ಅವ್ಯವಸ್ಥೆ ಕುರಿತು ವಿನಯ್ ಕುಮಾರ್ ಕಂದಡ್ಕ ಹೇಳಿಕೆಯನ್ನು ಸಮರ್ಥಿಸಿದ ಸುಬೋಧ್ ಶೆಟ್ಟಿ ಮೇನಾಲ

ಸುಳ್ಯ : ಸುಳ್ಯ ತಾಲೂಕು ಮಿಲಾದ್ ಸಮಿತಿಯವರು ವಿನಯ್ ಕುಮಾರ್ ಕಂದಡ್ಕ ಅವರ ಹೇಳಿಕೆಯ ಕುರಿತು ನಡೆಸಿದ ಪತ್ರಿಕಾಗೋಷ್ಠಿಯನ್ನು ಗಮನಿಸಿದಾಗ ಗಲಿಬಿಲಿಯಾಯಿತು. ಕಂದಡ್ಕ ಅವರು ನೀಡಿರುವ ಪತ್ರಿಕಾ ಹೇಳಿಕೆಯನ್ನು ಮೂರು–ನಾಲ್ಕು ಬಾರಿ ಓದಿದರೂ, ಅದರಲ್ಲಿ ಅಸಹಜವಾದ ಅಥವಾ ಕೋಮು ಸೌಹಾರ್ದಕ್ಕೆ ಧಕ್ಕೆ ತಂದು ಅಶಾಂತಿ ಉಂಟುಮಾಡುವಂತಹ ಯಾವುದೇ ಅಂಶ ಕಂಡುಬಂದಿಲ್ಲ ಎಂದು ಬಿಜೆಪಿ ಸುಳ್ಯ ಮಂಡಲದ ಕೋಶಾಧಿಕಾರಿ ಸುಬೋಧ್ ಶೆಟ್ಟಿ ಮೇನಾಲ ಹೇಳಿದ್ದಾರೆ.

. . . . . . . . .

ಮೊನ್ನೆ ಸಂಜೆ 4ರಿಂದ 7 ಗಂಟೆಯವರೆಗೆ ನಗರದ ಟ್ರಾಫಿಕ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಿರುವುದು ಸತ್ಯ. ಕಂದಡ್ಕ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಸಂಚಾರ ನಿರ್ವಹಣೆಯಲ್ಲಿ ಉಂಟಾದ ಲೋಪವನ್ನು ಮಾತ್ರ ಎತ್ತಿಹಿಡಿದಿದ್ದಾರೆ. ಸುಳ್ಯ ಠಾಣೆಯ ಉಪನಿರೀಕ್ಷಕರೂ ಸಂಚಾರ ವ್ಯವಸ್ಥೆಯಲ್ಲಿ ಕೊರತೆಯಾಗಿರುವುದನ್ನು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

. . . . . . .

ಸಾರ್ವಜನಿಕರಿಗೆ ಉಂಟಾದ ತೊಂದರೆಗೆ ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸದೆ, ಇಡೀ ಘಟನೆಯನ್ನು ಕೋಮು ಸೌಹಾರ್ದತೆಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿರುವುದು ವಿಷಾದನೀಯ. ಮಿಲಾದ್ ಸಮಿತಿಯವರು ತಾವು ಸೌಹಾರ್ದತೆಯ ಪ್ರತಿಪಾದಕರಂತೆ ಬಿಂಬಿಸಿಕೊಂಡು, ಕಂದಡ್ಕ ಅವರ ಹೇಳಿಕೆಗೆ ಕೋಮು ಬಣ್ಣ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಸುಬೋಧ್ ಶೆಟ್ಟಿ ಟೀಕಿಸಿದ್ದಾರೆ.ಮಿಲಾದ್ ಸಮಿತಿ, ಎಸ್‌ಡಿಪಿಐ ಹಾಗೂ ಕೆಲವರ ಹೇಳಿಕೆಗಳನ್ನು ಗಮನಿಸಿದಾಗ, ಮೊನ್ನೆ ನಡೆದ ಸಂಚಾರ ಅವ್ಯವಸ್ಥೆ ಆಕಸ್ಮಿಕವಲ್ಲ, ಉದ್ದೇಶಪೂರ್ವಕವಾಗಿತ್ತೇ ಎಂಬ ಅನುಮಾನ ಮೂಡುವಂತಾಗಿದೆ. ಎಲ್ಲರೂ ತಮ್ಮನ್ನು ಸಹಿಸಿಕೊಳ್ಳುತ್ತಾರೆ ಎಂಬ ಮಾನಸಿಕತೆಯಿಂದ ಹೊರಬರುವುದು ಉತ್ತಮ. ಇಂತಹ ವಿಚಾರಗಳನ್ನು ಎದುರಿಸಲು ಹಿಂದೂ ಸಮಾಜವೂ ಸಿದ್ಧವಾಗಿದೆ. ಅಧಿಕಾರಿಗಳು ಕೂಡಾ ಇಂತಹ ಸಂದರ್ಭಗಳಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಿಕೊಳ್ಳುವುದು ಅಗತ್ಯ ಎಂದು ಅವರು ಹೇಳಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading