ಬೆಳ್ಳಾರೆಯಲ್ಲಿ ಎಸ್ಎಸ್ಎಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ – ಬೆಳ್ಳಾರೆ ಸೆಕ್ಟರ್ ಪ್ರಥಮ,ಅಜ್ಜಾವರ ಸೆಕ್ಟರ್ ದ್ವಿತೀಯ

ಬೆಳ್ಳಾರೆಯ ದಾರುಲ್ ಹಿಖ್ಮಾ ವಿದ್ಯಾಸಂಸ್ಥೆಯಲ್ಲಿ ಎಸ್ಎಸ್ಎಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವವು ಜು 26 ರಂದು ಜರುಗಿತು.ಅಂದು ಬೆಳಿಗ್ಗೆ 8 ಘಂಟೆಗೆ ಸಯ್ಯಿದ್ ಮುಸ್ತಫಾ ಮಿಸ್ಬಾಹಿ ತಂಙಲ್ ಮುಂದಾಳತ್ವದಲ್ಲಿ ಬೆಳ್ಳಾರೆ ಮಖಾಂ ಝಿಯಾರತ್ ನಡೆಯಿತು.8-30 ಕ್ಕೆ ಧ್ವಜಾರೋಹಣ ನೆರವೇರಿತು.8-45ಕ್ಕೆ ನೋಂದಣಿ ಆರಂಭವಾಯಿತು.ಬೆಳಿಗ್ಗೆ ಘಂಟೆ 9 ಕ್ಕೆ ಸಾಹಿತ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು. ಎಸ್ಎಸ್ಎಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ ರಿಯಾನ್ ಸಅದಿ ಅಧ್ಯಕ್ಷತೆಯಲ್ಲಿ ಸಯ್ಯಿದ್ ಕುಂಞಕೋಯ ಸಅದಿ ತಂಙಲ್
ಸುಳ್ಯ ಉದ್ಘಾಟನೆ ನೆರವೇರಿಸಿದರು.ಬೆಳ್ಳಾರೆ ವಲಯ ಸುನ್ನೀ ಜಂಇಯತುಲ್ ಉಲಮಾ ಅಧ್ಯಕ್ಷರಾದ ಡಾ ಸಿ.ಎಂ.ಹನೀಫ್ ಅಮ್ಜದಿ,ಸುಳ್ಯ ತಾಲೂಕು ಎಸ್ಎಸ್ಎಫ್ ಮಾಜಿ ಅಧ್ಯಕ್ಷರಾದ ಹಸನ್ ಸಖಾಫಿ ಬೆಳ್ಳಾರೆ ಭಾಷಣ ಮಾಡಿದರು.ಅತಿಥಿಗಳಾಗಿ ಹಾಫಿಲ್ ಹಮೀದ್ ಮಲ್ಹರಿ, ಮಹಮೂದ್ ಹಾಜಿ, ಕಲಂದರ್ ಗೋವಾ, ಹನೀಫ್ ಸಖಾಫಿ ಉಪಸ್ಥಿತರಿದ್ದರು.ಬೆಳಿಗ್ಗೆ 9-30 ಕ್ಕೆ ಕಲಾ ಸಾಹಿತ್ಯೋತ್ಸವ ಕಾರ್ಯಕ್ರಮ ಆರಂಭವಾಯಿತು.ಖುಷಿ,ಸಂತೋಷದ ಈ ಕಲಾ ರಣರಂಗದಲ್ಲಿ ಬೆಳ್ಳಾರೆ ಸೆಖ್ಟರ್ ಪ್ರಥಮ ಸ್ಥಾನಿಯಾಯಿತು. ಅಜ್ಜಾವರ ಸೆಖ್ಟರ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿತು.ಸ

. . . . . . . . .

ಸಂಜೆ 7-30 ಕ್ಕೆ ಸಮಾರೋಪ ಸಮಾರಂಭ ಆರಂಭವಾಯಿತು.ಉದ್ಘಾಟನೆಯನ್ನು
ಸಯ್ಯಿದ್ ಮುಹ್ಸಿನ್ ಸಯ್ಯದಲವಿ ಕೋಯ ಅಲ್-ಬುಖಾರಿ ತಂಙಲ್ ನೆರವೇರಿಸಿದರು. ಸುಳ್ಯ ಡಿವಿಷನ್ ಸಾಹಿತ್ಯೋತ್ಸವದ ಅಧ್ಯಕ್ಷ ಶಾಕಿರ್ ಬೆಳ್ಳಾರೆ ಅಧ್ಯಕ್ಷತೆ ವಹಿಸಿದ್ದರು.ಎಸ್ಎಸ್ಎಫ್ ಸುಳ್ಯ ಡಿವಿಷನ್ ಅಧ್ಯಕ್ಷ ರಿಯಾನ್ ಸಅದಿ ಹಾಗೂ ಸಾಹಿತ್ಯೋತ್ಸವ ಕಾರ್ಯಕ್ರಮದ
ಉಪಾಧ್ಯಕ್ಷ ಮುಹಮ್ಮದ್ ಹನೀಫ್ ಮುಸ್ಲಿಯಾರ್ ಪೆರುವಾಜೆ ಭಾಷಣಗೈದರು.ಅತಿಥಿಗಳಾಗಿ ಬೆಳ್ಳಾರೆ ದಾರುಲ್ ಹಿಖ್ಮಾದ ಪ್ರಧಾನ ಕಾರ್ಯದರ್ಶಿ ದಾವೂದ್ ಸಅದಿ, ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಝಂ, ಝಂ, ಸಾಹಿತ್ಯೋತ್ಸದ ಸಮಿತಿಯ ಪ್ರಥಮ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಸಖಾಫಿ, ಕಾರ್ಯಕ್ರಮ ಸಮಿತಿಯ ಸಂಚಾಲಕ ಮಖ್ಬೂಲ್ ಬೆಳ್ಳಾರೆ ಉಪಸ್ಥಿತರಿದ್ದರು. ಸುಳ್ಯ ಡಿವಿಷನ್ ಸಾಹಿತ್ಯೋತ್ಸವ ಸಂಚಾಲಕ ಶಮ್ಮಾಸ್ ಸಅದಿ ಪೆರುವಾಜೆ ಸ್ವಾಗತಿಸಿ, ಎಸ್ಎಸ್ಎಫ್ ದ. ಕ ಪೂರ್ವ ಕ್ಯಾಂಪಸ್ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ವಂದಿಸಿದರು.

. . . . . . .

ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading