ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಪದಗ್ರಹಣ ಸಮಾರಂಭ, ಸಾಧಕರಿಗೆ ಸನ್ಮಾನ ಮತ್ತು ಕೊಡುಗೆಗಳ ಹಸ್ತಾಂತರ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ನೂತನ ಅಧ್ಯಕ್ಷ ಆರೀಫ್ ಬಿ.ಎಂ. ನೇತೃತ್ವದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು. 25ರಂದು ಬೆಳ್ಳಾರೆ ಅಮ್ಮು ರೈ ಕಾಂಪ್ಲೆಕ್ಸಿನ ದೇವಿ ಹೈಟ್ಸಿನ ಅನುಗ್ರಹ ಸಭಾಂಗಣದಲ್ಲಿ ಜರುಗಿತು. ಪಾಸ್ಟ್ ಡಿಸ್ಟ್ರಿಖ್ಟ್ ಗವರ್ನರ್ ರೋ. ಎ. ಆರ್. ರವೀಂದ್ರ ಭಟ್ ಪದಗ್ರಹಣ ನಡೆಸಿಕೊಟ್ಟರು.

. . . . . . . . .

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಜು. 31ರಂದು ಸೇವೆಯಿಂದ ನಿವೃತ್ತಿಗೊಳ್ಳಲಿರುವ ಪುಷ್ಪಾವತಿ ಮರಕ್ಕಡ ಇವರನ್ನು ಹಾಗೂ ಹೈನುಗಾರಿಕೆಯಲ್ಲಿ ಸಾಧನೆಯನ್ನು ಮಾಡಿರುವ ಪ್ರವೀಣ್ ಕಾವಿನಮೂಲೆಯವರನ್ನು ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪಿ.ಡಿ.ಜಿ ರೊ ರವೀಂದ್ರ ಭಟ್, ಡಿ.ಜಿ.ಎನ್. ಸೂರ್ಯನಾರಾಯಣ ಕುಕ್ಕಾಡಿಯವರನ್ನು ರೊಟರಿ ವತಿಯಿಂದ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಳಿಕ ವಿವಿಧ ಅಂಗನವಾಡಿ ಮತ್ತು ಶಾಲೆಗಳಿಗೆ ಕೊಡುಗೆಗಳ ಹಸ್ತಾಂತರ ನಡೆಯಿತು. ಬಳಿಕ ರೋಟರಿ ಬುಲೆಟಿನ್ ಬಿಡುಗಡೆ ನಡೆಯಿತು.

. . . . . . .

ರೋಟರಿ ಬೆಳ್ಳಾರೆ ಟೌನ್ ಇದರ ನೂತನ ಅಧ್ಯಕ್ಷರಾಗಿ ಆರೀಫ್ ಬಿ.ಎಂ., ಕಾರ್ಯದರ್ಶಿ ಪ್ರಶಾಂತ್ ತಂಟೆಪ್ಪಾಡಿ, ಕೋಶಾಧಿಕಾರಿ ರೋ ರವೀಂದ್ರ ಮರಕ್ಕಡ, ಉಪಾಧ್ಯಕ್ಷರಾಗಿ ರೋ ಗಣೇಶ್ ಕುಕ್ಕುದಡಿ, ಸಾರ್ಜೆಂಟ್ ಆರ್ಮ್ ರೋ ನವೀನ್ ಕುಮಾರ್ ರೈ ಟಿ., ಕ್ಲಬ್ ಎಡ್ಮಿನಿಸ್ಟ್ರೇಷನ್ ಚೆರ್ಮನ್ ಆಗಿ ರೋ ವಿನಯ್ ಕುಮಾರ್, ರೋ ಫೌಂಡೇಷನ್ ಚೇರ್ಮಾನ್ ಆಗಿ ರೋ ಶಶಿಧರ ಬಿ.ಕೆ., ಮೆಂಬರ್ ಶಿಫ್ ಡೆವಲಪ್ ಮೆಂಟ್ ಚೇರ್ಮಾನ್ ಆಗಿ ರೋ ಎ.ಕೆ. ಮಣಿಯಾಣಿ, ಪಬ್ಲಿಕ್ ರಿಲೇಷನ್ ಶಿಫ್ ಚೇರ್ಮಾನ್ ಆಗಿ ರೋ ಪದ್ಮನಾಭ ಬೀಡು, ಸರ್ವಿಸ್ ಪ್ರೊಜೆಕ್ಟ್ ಚೇರ್ಮಾನ್ ರೋ ಚಂದ್ರಶೇಖರ್ ರೈ, ಕ್ಲಬ್ ಸರ್ವೀಸ್ ನಿರ್ದೇಶಕರಾಗಿ ರೋ ಧನ್ರಾಜ್ ಕುಮಾರ್, ಕಮ್ಯುನಿಟಿ ಸರ್ವೀಸ್ ನಿರ್ದೇಶಕರಾಗಿ ರೋ ಬಾಲಕೃಷ್ಣ ಮಡ್ತಿಲ, ವೃತ್ತಿ ಸೇವೆ ನಿರ್ದೇಶಕರಾಗಿ ರೋ ಹನೀಫ್ ಬೆಳ್ಳಾರೆ, ಇಂಟರ್ ನ್ಯಾಷನಲ್ ಸರ್ವೀಸ್ ನಿರ್ದೇಶಕರಾಗಿ ರೋ ನಟರಾಜನ್, ಯುವಜನ ಸೇವೆ ನಿರ್ದೇಶಕರಾಗಿ ರೋ ವೀರನಾಥ್, ಲರ್ನಿಂಗ್ ಫೆಸಿಲಿಟೇಟರ್ ಆಗಿ ರೋ ಪ್ರಭಾಕರ ಆಳ್ವ ಪದಗ್ರಹಣ ಸ್ವೀಕರಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರೋ ಆನಂದ ಖಂಡಿಗ, ಝೋನಲ್ ಲೆಫ್ಟಿನೇಟರ್ ಚಂದ್ರಶೇಖರ್ ರೈ ಉಪಸ್ಥಿತರಿದ್ದರು‌.
ರೋ ಸತ್ಯನಾರಾಯಣ ಪ್ರಾರ್ಥಿಸಿ, ರೋ ಗಣೇಶ್ ಕುಕ್ಕುದಡಿ ಸ್ವಾಗತಿಸಿ, ರೋ ಪ್ರಭಾಕರ ಆಳ್ವ, ರೋ ಶ್ಯಾಮಸುಂದರ್ ರೈ ಕಾರ್ಯಕ್ರಮ ನಿರೂಪಿಸಿ, ರೋ ಪ್ರಶಾಂತ್ ತಂಟೆಪ್ಪಾಡಿ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading