ಗ್ರಾಮ ಆಡಳಿತ ಅಧಿಕಾರಿ (VAO) ಪರೀಕ್ಷೆ: ಆಗಸ್ಟ್ 9ಕ್ಕೆ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯಿಂದ ಉಚಿತ ತರಬೇತಿ ಕಾರ್ಯಾಗಾರ

ಪುತ್ತೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪ್ರಸ್ತುತ 572 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಅಭ್ಯರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕರಾವಳಿ ಭಾಗದ ಪ್ರತಿಷ್ಠಿತ ತರಬೇತಿ ಸಂಸ್ಥೆ ‘ವಿದ್ಯಾಮಾತಾ ಅಕಾಡೆಮಿ’ ಆಯೋಜನೆಯಲ್ಲಿ ಆ. 9ರಿಂದ ಬೆಳಿಗ್ಗೆ 10:00ರಿಂದ ಸಂಜೆ 4:00 ರವರೆಗೆ ಉಚಿತ ಪೂರ್ವ ಸಿದ್ಧತಾ ತರಬೇತಿ ಕಾರ್ಯಾಗಾರ ನಡೆಯಲಿದೆ.

. . . . . . . . .

ತರಬೇತಿ ಕಾರ್ಯಾಗಾರದ ವೈಶಿಷ್ಟ್ಯಗಳು:
ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿ ಸಭಾಂಗಣದಲ್ಲಿ ನಡೆಯಲಿರುವ ಈ ಉಚಿತ ಕಾರ್ಯಾಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸರಳ ವಿಧಾನಗಳು, ಪಠ್ಯಕ್ರಮದ ಸಮಗ್ರ ವಿಶ್ಲೇಷಣೆ, ಸಮಯ ನಿರ್ವಹಣೆ ಹಾಗೂ ಯಶಸ್ಸಿನ ತಂತ್ರಗಳ ಕುರಿತು ವಿಷಯ ತಜ್ಞರು ನೇರ ಮಾರ್ಗದರ್ಶನ ನೀಡಲಿದ್ದಾರೆ.

. . . . . . .

ಕರಾವಳಿಯಲ್ಲಿ ಉದ್ಯೋಗ ಜಾಗೃತಿಯ ಕ್ರಾಂತಿ – ವಿದ್ಯಾಮಾತಾ ಅಕಾಡೆಮಿಯ ಹೆಜ್ಜೆಯ ಗುರುತು:
ಕರಾವಳಿ ಭಾಗದ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಜನತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ವಿದ್ಯಾಮಾತಾ ಅಕಾಡೆಮಿ ವಹಿಸಿದ ಪಾತ್ರ ಅನನ್ಯ. ಕೇವಲ ತರಬೇತಿ ನೀಡುವುದಕ್ಕಷ್ಟೇ ಸೀಮಿತವಾಗದೆ, ಸರ್ಕಾರಿ ಉದ್ಯೋಗ ಕನಸು ಕಾಣುವ ಪ್ರತಿಯೊಬ್ಬ ಅಭ್ಯರ್ಥಿಗೂ ಸರಿಯಾದ ಹಾದಿ ತೋರಿಸುವ ಉದ್ಯೋಗ ಜಾಗೃತಿ ಅಭಿಯಾನಗಳನ್ನು ಸಂಸ್ಥೆಯು ನಿರಂತರವಾಗಿ ನಡೆಸಿಕೊಂಡು ಬಂದಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ಜೊತೆಗೆ ಯುವಜನರ ಉದ್ಯೋಗಾರ್ಹತೆ ಹೆಚ್ಚಿಸಲು ‘ಖಾಸಗಿ ಉದ್ಯೋಗ ಕೌಶಲ್ಯ ತರಬೇತಿ’ ಯನ್ನು ಸಂಯೋಜಿಸಿ, ಕರಾವಳಿ ಭಾಗದಲ್ಲಿ ಅತ್ಯಂತ ವಿಭಿನ್ನ ಹಾಗೂ ಮಾದರಿ ಶೈಲಿಯಲ್ಲಿ ಬೆಳೆದು ಬಂದಿರುವ ಹೆಗ್ಗಳಿಕೆ ವಿದ್ಯಾಮಾತಾ ಅಕಾಡೆಮಿಯದ್ದಾಗಿದೆ.

ಸಾಧನೆಯ ಹಾದಿ:
ಕಳೆದ ಹಲವು ವರ್ಷಗಳಿಂದ ಬ್ಯಾಂಕಿಂಗ್, ಕೆಪಿಎಸ್‌ಸಿ, ಪೊಲೀಸ್, ರೈಲ್ವೇ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾಮಾತಾ ಅಕಾಡೆಮಿಯ ನೂರಾರು ವಿದ್ಯಾರ್ಥಿಗಳು ತರಬೇತಿ ಪಡೆದು ಸರ್ಕಾರಿ ಹಾಗೂ ಪ್ರತಿಷ್ಠಿತ ಖಾಸಗಿ ವಲಯಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಮೂಲಕ ಸಂಸ್ಥೆಯು ಅಭೂತಪೂರ್ವ ಯಶಸ್ಸು ಕಂಡಿದೆ. ಗುಣಮಟ್ಟದ ಬೋಧನೆ, ನುರಿತ ಮಾರ್ಗದರ್ಶಕರು ಹಾಗೂ ನಿರಂತರ ಮಾದರಿ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವುದು ಸಂಸ್ಥೆಯ ಪ್ರಮುಖ ಆದ್ಯತೆಯಾಗಿದೆ.

ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಯ ನಿರೀಕ್ಷೆಯಲ್ಲಿರುವ ಹಾಗೂ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳು ಈ ಉಚಿತ ತರಬೇತಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.ನೋಂದಣಿ ಮಾಡುವವರು ಎಪಿಎಂಸಿ ರಸ್ತೆ, ಪುತ್ತೂರು ಇಲ್ಲಿರುವ ವಿದ್ಯಾಮಾತಾ ಅಕಾಡೆಮಿಯ ಕಚೇರಿ ಅಥವಾ
ದೂರವಾಣಿ ಸಂಖ್ಯೆ: 8590773486 / 9448527606 ಕ್ಕೆ ಕರೆಮಾಡಿ ನೋಂದಣಿ ಮಾಡಬೇಕು ಎಂದು ಪ್ರಕಟಣೆ ತಿಳಿಸಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading