ಚಂದ್ರಶೇಖರ್ ಪೇರಾಲು ರವರಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯಿಂದ “ಆಚಾರ್ಯ ಪುರಸ್ಕಾರ”

ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಪುತ್ತೂರು ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆಯುವ ಜಿ.ಎಲ್ ಆಚಾರ್ಯ ಸಂಸ್ಮರಣೆ ಮತ್ತು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸಮಾಜದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನಿವೃತ್ತ ಸುಳ್ಯ ಕನ್ನಡ ಸಾಹಿಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲು ರವರಿಗೆ “ಆಚಾರ್ಯ ಪುರಸ್ಕಾರ” ಸನ್ಮಾನವನ್ನು ನೀಡಿ ಜಿ.ಎಲ್ ಆಚಾರ್ಯ ಸಭಾಭವನ ಪುತ್ತೂರು ಇಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿ.ಎಲ್ ಆಚಾರ್ಯ ಜುವೆಲ್ಲರ್ಸ್ ಸಂಸ್ಥೆಯ ಪಾಲುಗಾರರಾದ ಲಕ್ಷ್ಮೀನಾರಾಯಣ ಆಚಾರ್ಯ ಇವರು ನೆರವೇರಿಸಿ ಆಚಾರ್ಯ ಪುರಸ್ಕಾರ ಸನ್ಮಾನವನ್ನು ನಡೆಸಿದರು ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾದ ಶ್ರೀ ವಸಂತಕುಮಾರ್ ತಾಳ್ತಜೆ ಇವರು ದಿಕ್ಸೂಚಿ ಭಾಷಣ ಮಾಡಿದರು. ಇವರ ಜೊತೆಗೆ ಗಣ್ಯ ಶಿಕ್ಷಕರಾದ ಶ್ರೀಮತಿ ವತ್ಸಲಾ ರಾಜ್ನಿ, ಮುನಿರಾಜ ರಂಜಾಳ, ಮತ್ತು ಶ್ರೀ ಪದ್ಮನಾಭ ಭಟ್ ಇವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು . ಜಿಎಲ್ ಆಚಾರ್ಯ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು ಕಾರ್ಯಕ್ರಮ ಸಂಚಾಲಕರಾದ ಜಯಾನಂದ ಪೆರಾಜೆ ಮತ್ತು ಡಾಕ್ಟರ್ ಶಾಂತಾ ಪುತ್ತೂರು ಕಾರ್ಯಕ್ರಮವನ್ನು ಸಂಯೋಜಿಸಿದರು ಕಾರ್ಯಕ್ರಮದ ನಂತರ ಕವಿಗೋಷ್ಠಿಯು ಕೂಡ ನಡೆಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading