ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗೌರವಾರ್ಪಣೆ

ಶಿಕ್ಷಕ ದಿನಾಚರಣೆ ಪ್ರಯುಕ್ತ ಸೆ.05ರಂದು ಇಬ್ಬರು ನಿವೃತ್ತ ಶಿಕ್ಷಕ ಸಾಹಿತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.

. . . . . . . . .

ಪೂರ್ವಾಹ್ನ ಪೈಲಾರಿನಲ್ಲಿ ವಾಸವಾಗಿರುವ ನಿವೃತ್ತ ಶಿಕ್ಷಕ ಎಂ.ಟಿ ಶಾಂತಿಮೂಲೆ ಇವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪುಸ್ತಕಗಳನ್ನು ಖರೀದಿ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಇವರು ಕನ್ನಡ ಶಾಲು ಹಾರ ಹಾಕಿ ಹಣ್ಣು ಹಂಪಲು ಮತ್ತು ಸನ್ಮಾನ ಪತ್ರ ನೀಡಿ ಗೌರವಿಸಿ ಮಾತನಾಡಿದರು. ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ ಮತ್ತು ಶ್ರೀಮತಿ ಚಂದ್ರಮತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಸಂಜೀವ ಕುದ್ಪಾಜೆ, ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಚರಿಷ್ಮಾ ಕಡಪಳ ಮತ್ತು ಯಾದವೇಂದ್ರ ಕಡಪಳ ಸಂಕೀರ್ಣ ಚೊಕ್ಕಾಡಿ ರೂಪವಾಣಿ ಮತ್ತು ಶಾಂತಿಮೂಲೆಯವರ ಕುಟುಂಬಸ್ಥರು ಉಪಸ್ಥಿತರಿದ್ದರು.

. . . . . . .

ಸಾಯಂಕಾಲ ಖ್ಯಾತ ಸಾಹಿತಿ ಪ್ರಭಾಕರ ಶಿಶಿಲ ಅವರನ್ನು ಅವರ ಸ್ವಗೃಹ ಕಾವ್ಯ ಕಾಂತಮಂಗಲದಲ್ಲಿ ಕನ್ನಡದ ಶಾಲು ಹಾರ ಸನ್ಮಾನ ಪತ್ರ ಮತ್ತು ಹಣ್ಣು ಹಂಪಲು ನೀಡಿ ಗೌರವಿಸಲಾಯಿತು, ಹಾಗೂ ಅವರ ಕೃತಿಗಳನ್ನು ಖರೀದಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಇವರು ಸನ್ಮಾನಿಸಿ ಮಾತನಾಡಿದರು.ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ ಮತ್ತು ಶ್ರೀಮತಿ ಚಂದ್ರಮತಿ ಹಾಗೂ ಕೋಶಾಧಿಕಾರಿಗಳಾದ ದಯಾನಂದ ಆಳ್ವ ಸದಸ್ಯರಾದ ಸಂಕಿರ್ಣ ಚೊಕ್ಕಾಡಿ ಕೇಶವ ಇವರು ಉಪಸ್ಥಿತರಿದ್ದರು. ಸುಮಾರು ನಾಲ್ಕು ವರ್ಷಗಳಿಂದ ನಿರಂತರವಾಗಿ ಸಾಹಿತ್ಯ ಪರಿಷತ್ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading