ಜೇಸಿಐ ಸುಳ್ಯ ಪಯಸ್ವಿನಿ ಪೂರ್ವ ವಲಯಾಧ್ಯಕ್ಷರ ಸಮ್ಮೀಲನ ಹಾಗೂ ಜೇಎಸಿ ಚೇರ್ಮನ್ ಭೇಟಿ

ಜೇಸಿಐ ಸುಳ್ಯ ಪಯಸ್ವಿನಿ ಘಟಕದಲ್ಲಿ ಬಂಧನ ಅಧೀಕೃತ ಭೇಟಿ ಕಾರ್ಯಕ್ರಮವನ್ನು ಎ.25ರಂದು ಸಂಚಯ ನಿವಾಸ ಚೂಂತಾರು ಇಲ್ಲಿ ಹಮ್ಮಿಕೊಳ್ಳಲಾಯಿತು. ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಜೇಸಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಜೇಎಸಿ ಚೇರ್ಮನ್ ಜೇಸಿಐ ಸೆನೆಟರ್ ಅಬ್ದುಲ್ ಜಬ್ಬಾರ್‌ವರು “ಜೇಸಿಐ ಸುಳ್ಯ ಪಯಸ್ವಿನಿಯ ಘಟಕದ ಕಾರ್ಯ ಚಟುವಟಿಕೆಗಳು ಮೂಲಕ ವಲಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಹೇಳುತ್ತಾ, ಶುಭ ಹಾರೈಸಿದರು. ಜೇಸಿಐ ವಲಯ 15ರ ವಲಯಾಧ್ಯಕ್ಷರಾದ ಜೆ.ಎಪ್.ಎಪ್ ಸಂತೋಷ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಜೇಸಿಐ ಭಾರತ ವಲಯ 15ರ ಪೂರ್ವ ಕಾರ್ಯ ನಿರ್ವಾಹಕ ಉಪಾಧ್ಯಕ್ಷರಾದ ಜೆ.ಎಫ್.ಎಂ ಪುರಂದರ ರೈ, ಪಿ.ಡಿ.ಎಂ ಮುರಳಿ ಶ್ಯಾಮ್ ಉಪಸ್ಥಿತರಿದ್ದು ಶುಭಹಾರೈಸಿದರು.
ಈ ಸಂದರ್ಭದಲ್ಲಿ 2026ನೇ ಸಾಲಿನ ಜೇಎಸಿ ಚೇರ್ಮನ್ ಜೇಸಿಐ ಸೆನೆಟರ್ ಅಬ್ದುಲ್ ಜಬ್ಬಾರ್ ಅವರನ್ನು ಸನ್ಮಾನಿಸಲಾಯಿತು‌. 
ಈ ಸಂದರ್ಭದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರುಗಳು, ಜೇಸಿಐ ಭಾರತ ವಲಯ 15ರ ಪೂರ್ವ ವಲಯಾಧ್ಯಕ್ಷರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜೇಸಿ ವಿನೋದ್ ಮೂಡಗದ್ದೆ ಸನ್ಮಾನ ಪತ್ರವನ್ನು ವಾಚಿಸಿದರು. ಜೇಸಿಐ ಸುಳ್ಯ ಪಯಸ್ವಿನಿಯ ಕಾರ್ಯದರ್ಶಿ ಜೇಸಿ ತಾರಾ ಮಾದವ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading