ಏ.20 ರಂದು ಈಶ್ವರಮಂಗಲದಲ್ಲಿ ಪವರ್ ಸೊಲ್ಯೂಷನ್ ಸಂಸ್ಥೆಯ ಎರಡನೇ ಮಳಿಗೆ ಉದ್ಘಾಟನೆ

ಅಲ್ತಾಫ್ ಬೆಳ್ಳಾರೆ ಮಾಲಕತ್ವದ ಪವರ್ ಸೊಲ್ಯೂಷನ್ ಸಂಸ್ಥೆಯ ಎರಡನೇ ಮಳಿಗೆ ಈಶ್ವರಮಂಗಲದಲ್ಲಿ ಏ.20ರಂದು ಶುಭಾರಂಭಗೊಳ್ಳಲಿದ್ದು, ಈಶ್ವರಮಂಗಲದ ಗ್ರಾಮ ಪಂಚಾಯತ್ ಕಾರ್ಯಾಲಯದ ಹತ್ತಿರ ಇರುವ ಇಂದುಮೂಲೆ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿರುವ ಈ ಮಳಿಗೆಯಲ್ಲಿ ವಿವಿಧ ಕಂಪೆನಿಗಳ ಸಿ.ಸಿ ಟಿವಿ, ಇನ್ವರ್ಟರ್, ಸೋಲಾರ್, ಸೋಲಾರ್ ವಾಟರ್ ಹೀಟರ್ ಗಳ ಮಾರಾಟ, ಸೇವೆ ಮತ್ತು ಈ ಮಳಿಗೆಯ ಉದ್ಘಾಟನೆ ಪ್ರಯುಕ್ತ ಸ್ಟೇಟಸ್...

ಸುಳ್ಯ ನಗರ ನದಿಗೆ ಸೇರುವ ತ್ಯಾಜ್ಯಗಳನ್ನು ಐ&ಡಿ ತಂತ್ರಜ್ಞಾನದ ಮೂಲಕ ಸಂಸ್ಕರಿಸಲು ಅನುದಾನ ಒದಗಿಸಿ ಅನುಷ್ಠಾನಗೊಳಿಸುವಂತೆ ನಗರಾಭಿವೃದ್ಧಿ ಸಚಿವರಿಗೆ ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ ಮನವಿ

ಸುಳ್ಯ ನಗರವು ಏತ್ತರ, ತಗ್ಗುಗಳಿಂದ ಕೂಡಿದ ಪ್ರದೇಶವಾಗಿದ್ದು, ನಗರ ವ್ಯಾಪ್ತಿಯುದ್ಧಕ್ಕೂ ಪಯಸ್ವಿನಿ ನದಿ, ಕಂಡಡ್ಕ ಹೊಳೆ, ಕನಿಕರ ಪಳ್ಳ ಹಳ್ಳ ಹರಿದು ಹೋಗುವ ವಿಶಿಷ್ಟ ಭೋಗೋಳಿಕ ಹಿನ್ನಲೆಯ ಪ್ರದೇಶವಾಗಿರುತ್ತದೆ. ಚರಂಡಿ, ಕಾಲುವೆಗಳಲ್ಲಿ ಹರಿಯುವ ಮಲಿನ ನೀರುಗಳು ಅಲ್ಲಲ್ಲಿ ಹೊಳೆಗೆ ಸೇರುತ್ತಿದ್ದು, ಸದ್ರಿ ತ್ಯಾಜ್ಯಗಳು ನದಿಗೆ ಸೇರುವ ನಾಲ್ಕೈದು ಕಡೆಗಳಲ್ಲಿ ಐ&ಡಿ ತಂತ್ರಜ್ಞಾನದಲ್ಲಿ ಸ್ವಚ್ಛ ಭಾರತ್ ಮಿಷನ್...
Ad Widget

ಮಂಡೆಕೋಲು : ವಿಶ್ವದಾಖಲೆ ನಿರ್ಮಿಸಿದ ಅಭಿಷೇಕ್ ಗೆ ಏ.20 ರಂದು ಹುಟ್ಟೂರ ಸನ್ಮಾನ

ನಿರಂತರ 24 ಘಂಟೆಗಳ ಕಾಲ ಕೂಚುಪುಡಿ ನೃತ್ಯ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಅಭಿಷೇಕ್ ಕಣಿಮರಡ್ಕಇವರಿಗೆ ಹುಟ್ಟೂರ ಸನ್ಮಾನ ಸಮಾರಂಭ ಏ.20 ರಂದು ಮಂಡೆಕೋಲಿನ ಅಮೃತ ಸಹಕಾರ ಸದನದಲ್ಲಿ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ಕು. ಭಾಗೀರಥಿ ಮುರುಳ್ಯ ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ....

ಸುಬ್ರಹ್ಮಣ್ಯ : ಅಂತರ್ ಕಾಲೇಜು ಪುರುಷರು ಮತ್ತು ಮಹಿಳಾ ವಿಭಾಗದ ಹಗ್ಗಜಗ್ಗಾಟ ; “ಹಗ್ಗಜಗ್ಗಾಟ ಸ್ಪರ್ಧೆಗೆ ಶಕ್ತಿ ಪ್ರಧಾನ ಅಲ್ಲ, ಯುಕ್ತಿ ಸೇರಿದರಷ್ಟೇ ಇಲ್ಲಿ ಗೆಲುವು ಸಾಧ್ಯ” : ನಿತ್ಯಾನಂದ ಮುಂಡೋಡಿ

ಸುಬ್ರಹ್ಮಣ್ಯ : “ಹಗ್ಗಜಗ್ಗಾಟ ಸ್ಪರ್ಧೆಗೆ ಶಕ್ತಿ ಪ್ರಧಾನ ಅಲ್ಲ. ಯುಕ್ತಿ ಸೇರಿದರಷ್ಟೇ ಇಲ್ಲಿ ಗೆಲುವು ಸಾಧ್ಯವಿದೆ. ಶಕ್ತಿ ಮತ್ತು ಯುಕ್ತಿ ಮಿಳಿತವಾಗುವ ಸ್ಪರ್ಧೆಯನ್ನು ಅತ್ಯಂತ ಯಶಸ್ವಿ ರೀತಿಯಲ್ಲಿ ಇಲ್ಲಿ ಆಯೋಜಿಸಿದ ಸಂಘಟಕರ ಪ್ರಯತ್ನ ಶ್ಲಾಘನೀಯವಾದದು” ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಹೇಳಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ...

ಪೆರುವಾಜೆ : ಮಕ್ಕಳ ಬೇಸಿಗೆ ಶಿಬಿರ ಸಮಾರೋಪ

ಪೆರುವಾಜೆ ಗ್ರಾಮ ಪಂಚಾಯತ್, ಗ್ರಂಥಾಲಯ ಪೆರುವಾಜೆ ಹಾಗೂ ಜೇಸಿಐ ಬೆಳ್ಳಾರೆ ಇದರ ನೇತೃತ್ವದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಪೆರುವಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಎ.18ರಂದು ನಡೆಯಿತು.ಸಮಾರೋಪ‌ ಸಮಾರಂಭದಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಫಯಾಝ್ ಅಹಮ್ಮದ್, ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ‌ ಅಧಿಕಾರಿಯಾದ ಜಯಮಾಲಾ, ಪೆರುವಾಜೆ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ...

ಸುಬ್ರಹ್ಮಣ್ಯದಲ್ಲಿ 24×7 ತುರ್ತು ಚಿಕಿತ್ಸಾ ಘಟಕಕ್ಕಾಗಿ ಆರೋಗ್ಯ ಸಚಿವರಿಗೆ ಮನವಿಯೊಂದಿಗೆ ಒತ್ತಾಯ

ಸುಬ್ರಹ್ಮಣ್ಯ ಏಪ್ರಿಲ್ 19 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ದಕ್ಷಿಣ ಭಾರತದ ನಾಗರಾಧನೆಯ ಪವಿತ್ರ ಪುಣ್ಯಕ್ಷೇತ್ರವಾಗಿದೆ. ಇಲ್ಲಿಗೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದು ಇಲ್ಲಿಯ ಅತ್ಯುನ್ನತ ಸೇವೆಗಳಾದ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ, ಆಶ್ಲೇಷ ಬಲಿ ಮುಂತಾದ ಸೇವೆಗಳನ್ನು ಪೂರೈಸಿ ತೆರಳುತ್ತಾರೆ. ಆದರೆ ಇಲ್ಲಿ ಅನಾರೋಗ್ಯಕ್ಕೆ ತುತ್ತಾದ ಭಕ್ತರಿಗೆ...

ಸುಳ್ಯ : ರಸ್ತೆ ಇಕ್ಕೆಲಗಳನ್ನು ಅಗೆದು ಸರಿಪಡಿಸದೇ ಅಪಘಾತಕ್ಕೆ ಆಹ್ವಾನ – ವಾರದೊಳಗೆ ಸರಿಪಡಿಸಲು ಡಿ.ಎಂ.ಶಾರೀಖ್ ಒತ್ತಾಯ

ಅಮೃತ್ 2.0 ಯೋಜನೆ ಪ್ರಕಾರ ‌ಕುಡಿಯುವ ನೀರಿನ ಪೈಪ್ ಅಳವಡಿಸಲು ರಾಷ್ಟ್ರೀಯ ಹೆದ್ದಾರಿ 275 ರ ಇಕ್ಕೆಲಗಳಲ್ಲಿ ಅಗೆದಿದ್ದು, ಜನ, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.‌ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಆದುದರಿಂದ ಕೂಡಲೇ ಸಂಬಂಧಪಟ್ಟ ಇಲಾಖೆ(KUWS) ನವರು ಒಂದು ವಾರದೊಳಗೆ ಡಾಮರೀಕರಣಗೊಳಿಸಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ದೂರು ದಾಖಲಿಸಲಾಗುವುದು ಎಂಬುದಾಗಿ...

ಬಲ್ಕಜೆ : ಶಿಕ್ಷಕ ಬೆಳ್ಯಪ್ಪ ಗೌಡರಿಗೆ ಬೀಳ್ಕೊಡುಗೆ

ಮಡಪ್ಪಾಡಿ ಗ್ರಾಮದ ಬಲ್ಕಜೆ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ 26 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ, ಇದೀಗ ವರ್ಗಾವಣೆ ಗೊಳ್ಳುತ್ತಿರುವ ಬೆಳ್ಯಪ್ಪ ಗೌಡ.ಜೆ‌ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಏ.19ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಇಂದ್ರಪ್ರಸಾದ್ ಕೇವಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಮಡಪ್ಪಾಡಿ...

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಫಾತಿಮಾತ್ ಶಹ್ಲಾ ರನ್ನು ಸನ್ಮಾನಿಸಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವರು

ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2026ನೇ ಸಾಲಿನ ದ್ವಿತೀಯ ಪಿಯುಸಿ ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಾಪರ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ಫಾತಿಮಾತ್ ಶಹ್ಲಾ ರನ್ನು ಕರ್ನಾಟಕ ರಾಜ್ಯದ...

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಗುತ್ತಿಗಾರಿನಲ್ಲಿ ವ್ಯಕ್ತಿಯೊಬ್ಬರು ಅಳವಡಿಸಿದ ಬ್ಯಾನರ್

ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಕಮಿಲ-ಬಳ್ಪ ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬರು ಅಳವಡಿಸಿದ ಬ್ಯಾನರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, “ಎಲೆಕ್ಷನ್ ಮತ್ತು ಕಲೆಕ್ಷನ್ ನವರಿಗೆ ಕಡ್ಡಾಯವಾಗಿ ಒಳಗೆ ಪ್ರವೇಶವಿಲ್ಲ. ಕಚ್ಚುವ ನಾಯಿಗಳಿವೆ ಜಾಗ್ರತೆ!” ಎಂದು ಈ ಬ್ಯಾನರ್ ನಲ್ಲಿ ಬರೆಯಲಾಗಿದೆ. ಗುತ್ತಿಗಾರಿನ ಲಕ್ಷ್ಮಣ ದೇವಶ್ಯ ಎಂಬುವವರು ತಮ್ಮ ಮನೆಯ ಸಮೀಪ ಈ ಬ್ಯಾನರ್ ಅನ್ನು...
Loading posts...

All posts loaded

No more posts

error: Content is protected !!