ಉಜಿರೆ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಶ್ರೀಪೂರ್ಣ ಗೆ 9 ನೇ ರ‌್ಯಾಂಕ್

ಉಜಿರೆ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಶ್ರೀಪೂರ್ಣ 588 (98%) ಅಂಕ ಪಡೆದು ರಾಜ್ಯಕ್ಕೆ 9 ನೇ ರ‌್ಯಾಂಕ್ ಪಡೆದಿದ್ದಾರೆ. ಈಕೆ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಹಾಗೂ ಅಯ್ಯಸ್ ಹೋಮ್ ಪ್ರಾಡಕ್ಟ್ಸ್ ಆಡಳಿತ ಪಾಲುದಾರೆ ಶ್ರೀಮತಿ ಕುಮುದ ದಂಪತಿಗಳ ಪುತ್ರಿ.‌

ದ್ವಿತೀಯ ಪಿಯುಸಿ ಫಲಿತಾಂಶ : ರೋಟರಿ ಪಿ.ಯು ಕಾಲೇಜಿನ ಯಶಸ್ವಿ.ಪಿ ಭಟ್ ಗೆ ಡಿಸ್ಟಿಂಕ್ಷನ್

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯದ ರೋಟರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿ.ಪಿ ಭಟ್ ರವರು 579(ಶೇ.96.5) ಅಂಕ ಗಳಿಸಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.ಇವರು ಸುಳ್ಯದ ದೇವಶ್ಯ  ನಿವಾಸಿ ಎಮ್.ಪ್ರಶಾಂತ್ ಭಟ್ ಹಾಗೂ ಪ್ರೇಮಾ ಪ್ರಶಾಂತ್ ದಂಪತಿಗಳ ಪುತ್ರಿ.
Ad Widget

ದ್ವಿತೀಯ ಪಿಯುಸಿ ಫಲಿತಾಂಶ : ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ಅವಿನ್ ಪಿ. ಡಿಸ್ಟಿಂಕ್ಷನ್

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರಿನ ಸೈಂಟ್ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಅವಿನ್ ಪಿ. 562 (ಶೇ.93.66) ಅಂಕದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.ಇವರು ಸುಳ್ಯದ ಅಮರ ಪಡ್ನೂರು ಗ್ರಾಮದ ಚೊಕ್ಕಡಿ ಪಡ್ಪು ಮನೆ ಪದ್ಮನಾಭ ಹಾಗೂ ಉಷಾಲತಾ ದಂಪತಿಗಳ ಪುತ್ರ.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಶೇ.95 ಫಲಿತಾಂಶ ದಾಖಲಿಸಿದ ಅರಂತೋಡಿನ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಅರಂತೋಡಿನ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಶೇ.95.24 ಫಲಿತಾಂಶ ದಾಖಲಿಸಿದೆ. ಒಟ್ಟು 189 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 180 ವಿದ್ಯಾರ್ಥಿಗಳು ಉತ್ತೀರ್ಣರಾಗಿ 38 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 118 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 23 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಒಟ್ಟು 71 ವಿದ್ಯಾರ್ಥಿಗಳು...

ಕುಚುಪುಡಿ ನೃತ್ಯದಲ್ಲಿ ಗೋಲ್ಡನ್ ಬುಕ್ ಆಪ್ ವಲ್ಡ್ ರೆಕಾರ್ಡ್ ಸಾಧನೆಗಾಗಿ ಗೆಜ್ಜೆ ಕಟ್ಟಿದ ಸುಳ್ಯದ ವಿದ್ಯಾರ್ಥಿ – ನಿರಂತರ 24 ಗಂಟೆಗಳ ನೃತ್ಯ ಆರಂಭಿಸಿದ ಅಭಿಷೇಕ್ ಕಣೆಮರಡ್ಕ

ಕುಚುಪುಡಿ ನೃತ್ಯದ ಮುಖಾಂತರ ಗೋಲ್ಡನ್ ಬುಕ್ ಆಪ್ ವಲ್ಡ್ ರೆಕಾರ್ಡ್ ನಲ್ಲಿ ಮಿಂಚಬೇಕೆಂಬ ಕನಸನ್ನು ನನಸು ಮಾಡಲು ಮಂಡೆಕೋಲಿನ ಬಿಎಸ್ಸಿ ವಿದ್ಯಾರ್ಥಿ ಸಜ್ಜಾಗಿದ್ದಾನೆ. ನಿರಂತರ ಅಭ್ಯಾಸದ ಮೂಲಕ ಸಾಧನೆಯ ಮೆಟ್ಟಿಲೇರಲು ಇಂದು ಗೆಜ್ಜೆ ಕಟ್ಟಿದ್ದಾರೆ. ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿಯಾಗಿರುವ ಅಭಿಷೇಕ್ ಕಣೆಮರಡ್ಕ ಏ.11 ರಂದು ಸಂಜೆ 6.30 ರಿಂದ ಏ.12...

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಜೀವಿತಾ.ಎಂ.ಎಸ್ ಅವರಿಗೆ ಶೇ.96.5

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮುಲ್ಕಿ ತಾಲೂಕು ಕಿನ್ನಿಗೋಳಿ ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು.ಜೀವಿತಾ.ಎಂ.ಎಸ್ ಅವರು ವಿಜ್ಞಾನ ವಿಭಾಗದಲ್ಲಿ 579(96.5%) ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.ಇವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೋಟ್ನೂರು ಶಿವಪ್ರಕಾಶ್ ಹಾಗೂ ಗುತ್ತಿಗಾರು ಗ್ರಾಮ ಪಂಚಾಯತ್ ಅರಿವು ಕೇಂದ್ರದ ಮೇಲ್ವಿಚಾರಕರಾದ ಶ್ರೀಮತಿ ಅಭಿಲಾಷಾ.ಎಸ್.ಎಂ ದಂಪತಿಗಳ...

ಮೂಡಬಿದಿರೆಯಲ್ಲಿ ಇಂದು ದಕ್ಷಿಣಕನ್ನಡ ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ 2026 –  ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ನ ಎರಡು ತಂಡಗಳು ಭಾಗಿ

ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೆಶನ್ (ರಿ) ಮಂಗಳೂರು ಮತ್ತು ಮೂಡಬಿದಿರೆ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಜಂಟಿ ಆಶ್ರಯದಲ್ಲಿ ಇಂದು ಮೂಡಬಿದಿರೆ ಸ್ವರಾಜ್ ಮೈದಾನದಲ್ಲಿ ನಡೆಯಲಿರುವ ದ ಕ ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ 2026 ಪಂದ್ಯಾವಳಿಗೆ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ (ರಿ) ಇದರ ಪುರುಷರ ಒಂದು ತಂಡ ಮತ್ತು ಮಹಿಳೆಯರ ಒಂದು ತಂಡ...

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಹಿತ ಗೋಳ್ಯಾಡಿ ಅವರಿಗೆ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 10ನೇ ರ‍್ಯಾಂಕ್

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರಿನ ಕೆನರಾ ವಿಕಾಸ್ ಕಾಲೇಜಿನ ವಿದ್ಯಾರ್ಥಿನಿ ಹಿತ ಗೋಳ್ಯಾಡಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600 ರಲ್ಲಿ 590 ಅಂಕ ಪಡೆದು ರಾಜ್ಯದಲ್ಲಿ ಹತ್ತನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.ಇವರು ಮಡಪ್ಪಾಡಿ ಗ್ರಾಮದ ಗೋಳ್ಯಾಡಿ ದಿನೇಶ್ ಮತ್ತು ಶಿಕ್ಷಕಿ ವಸಂತಮಾಲ ದಂಪತಿಗಳ ಪುತ್ರಿ. ಗುತ್ತಿಗಾರಿನ ಬ್ಲೆಸ್ಡ್ ಕುರಿಯಕೋಸ್ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ...

ಯಕ್ಷಗಾನ ಕಲಾವಿದ, ಧಾರ್ಮಿಕ ಮುಖಂಡ, ಕೊಡುಗೈ ದಾನಿ ಯುವರಾಜ ಜೈನ್ ನಿಧನ

ಹಿರಿಯ ಯಕ್ಷಗಾನ ಕಲಾವಿದ , ಧಾರ್ಮಿಕ ಮುಖಂಡ, ಕೊಡುಗೈ ದಾನಿ ಮರ್ಕಂಜ ಗ್ರಾಮದ ಬಲ್ನಾಡು ಪೇಟೆ ಯುವರಾಜ ಜೈನ್ (80) ಏ.10 ರಂದು ನಿಧನರಾದರು. ಮರ್ಕಂಜ ಬಲ್ನಾಡು ಪೇಟೆ ಬಸದಿಯ ಆಡಳಿತ ಮೊಕ್ತಸರರಾಗಿ, ನೆಲ್ಲೂರು ಕೆಮ್ರಾಜೆ ಮತ್ತು ಮರ್ಕಂಜ ಗ್ರಾಮಗಳ ಪಂಚಸ್ಥಾಪನೆಗಳ ಜೀರ್ಣೋದ್ಧಾರದ ಹರಿಕಾರರಾಗಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾಗಿ, ಹಿರಿಯ ಯಕ್ಷಗಾನ ಕಲಾವಿದರಾಗಿ ಅದ್ವಿತೀಯ...
error: Content is protected !!