Ad Widget

ಸುಳ್ಯದಲ್ಲೂ ಪ್ರತಿಷ್ಠಿತ ಕಾರ್ಖಾನೆಗಳು ಲಾಕ್ ಡೌನ್ ನಿಯಮ ಮೀರಿ ಕೆಲಸ ಮಾಡುತ್ತಿರುವುದು ನ್ಯಾಯವೇ – ಧರ್ಮಪಾಲ ಕೊಯಿಂಗಾಜೆ ಹೇಳಿಕೆ

ಸರಕಾರವು ಲಾಕ್ ಡೌನ್ ನಿಯಮ ಜಾರಿಗೆ ತಂದಿರುವುದು ಒಳ್ಳೆಯದಾಗಿದೆ . ಆದರೆ ಈ ನಿಯಮ ಸರಿಯಾಗಿ ಜಾರಿಯಾಗುತ್ತಿದೆಯೇ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ . ಖಂಡಿತವಾಗಿಯೂ ತಾಲೂಕು ಆಡಳಿತ , ಮಾನ್ಯ ಶಾಸಕರು ಲಾಕ್ ಡೌನ್ ನಿಯಮ ಪಾಲಿಸುವಲ್ಲಿ ತೆಗೆದುಕೊಂಡಿರುವ ಕ್ರಮ ಯಶಸ್ವಿಯಾಗಿಲ್ಲ . ತಾಲೂಕಿನ ಪ್ರತಿಷ್ಠಿತ ಕಾರ್ಖಾನೆಗಳು ತನ್ನ ರಾಜಕೀಯ ಪ್ರಭಾವ ಬಳಸಿ ಬೆಳಿಗ್ಗೆಯಿಂದ ಸಂಜೆ ತನಕ ಕೆಲಸ ಮಾಡಿಸಿಕೊಂಡು ಬಡವರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ . ಶ್ರೀಮಂತರಿಗೆ ಒಂದು ನ್ಯಾಯ ನಮ್ಮ ತಾಲೂಕಿನಲ್ಲಿ ಇದ್ದು ಇದಕ್ಕೆ ಕಾರಣ ತಾಲೂಕು ಆಡಳಿತ , ಮಾನ್ಯ ಶಾಸಕರು ಆಗಿರುತ್ತಾರೆ . ಕೆಲವು ಕಾರ್ಖಾನೆಗಳು ದಿನವಿಡೀ ಕಾರ್ಯ ಚಟುವಟಿಕೆ ಈ ಲಾಕ್ ಡೌನ್ ಸಂದರ್ಭದಲ್ಲಿ ಮಾಡುತ್ತಿದೆ . ಸಂಬಂದಪಟ್ಟ ಅಧಿಕಾರಿಗಳು ಆಯಾಯ ಗ್ರಾಮಗಳಲ್ಲಿ ಇರುವ ಕಾರ್ಖಾನೆಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ದರೆ ಅಂತವರ ವಿರುದ್ದ ಕ್ರಮ ಜರುಗಿಸಿ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆಯವರು ಮಾನ್ಯ ಶಾಸಕರಿಗೆ , ತಾಲೂಕು ಆಡಳಿತವನ್ನು ಆಗ್ರಹಿಸಿ ಪತ್ರಿಕಾ ಹೇಳಿಕೆ ನೀಡಿರುತ್ತಾರೆ .

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!