Ad Widget

ರಾಷ್ಟ್ರಪತಿ ಭೇಟಿ ಮಾಡುವ ಭಾಗ್ಯ ಪಡೆದ ಕೊಲ್ಲಮೊಗ್ರದ ಮೀನಾಕ್ಷಿ ಹಾಗೂ ವನಿತಾ

ಕೊಲ್ಲಮೊಗ್ರದ ಇಬ್ಬರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಆದಿವಾಸಿ ಮಹಿಳೆಯರಿಗೆ ರಾಷ್ಟ್ರಪತಿ ಭೇಟಿ ಮಾಡುವ ಭಾಗ್ಯ ಒದಗಿಬಂದಿದ್ದು ವಿಮಾನವೇರುವ ಸಂಭ್ರಮದಲ್ಲಿದ್ದಾರೆ.

. . . . . . .

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ “ಸಂಜೀವಿನೀ”ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿದೆ. ಮಾ.1 ರಂದು ರಾಷ್ಟ್ರಪತಿಗಳ ಭೇಟಿ ಹಾಗೂ ಅಮೃತ್ ಉದ್ಯಾನವನಕ್ಕೆ ಭೇಟಿ ನೀಡಲು ಇವರಿಗೆ ಅವಕಾಶ ದೊರೆತಿದ್ದು ದೆಹಲಿ ವಿಮಾನವೇರುವ ಭಾಗ್ಯ ಒದಗಿ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ನಾಲ್ವರು ಕೊರಗ ಸಮುದಾಯದ ಮಹಿಳೆಯರು ಸೇರಿದಂತೆ ಕರ್ನಾಟಕ ರಾಜ್ಯದಉಡುಪಿ, ಉತ್ತರಕನ್ನಡ, ಚಾಮರಾಜನಗರದಿಂದ ಒಟ್ಟು 35 ಮಂದಿ ದೆಹಲಿಗೆ ತೆರಳಲಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರ ಗ್ರಾಮದ ಮೀನಾಕ್ಷಿ, ವನಿತಾ, ಬೆಳ್ತಂಗಡಿ ತಾಲೂಕಿನ ಲಕ್ಷ್ಮಿ, ಬಂಟ್ವಾಳ ತಾಲೂಕಿನ ಸುಂದರಿ ದೆಹಲಿ ಪ್ರವಾಸ ಭಾಗ್ಯ ಪಡೆದವರು.

ಕೊಲ್ಲಮೊಗ್ರ ಗ್ರಾಮದ ಬೆಂಡೋಡಿ ಮೀನಾಕ್ಷಿ ಆದಿಲಕ್ಷ್ಮೀ ಸಂಜೀವಿನೀ ಸ್ವಸಹಾಯ ಗುಂಪಿನ ಸದಸ್ಯೆಯಾಗಿದ್ದು, ಕೀರ್ತಿ ಸಂಜೀವಿನೀ ಒಕ್ಕೂಟದ ಸದಸ್ಯರಾಗಿದ್ದಾರೆ. ಕೃಷಿ ಉದ್ಯೋಗ ಸಖಿಯೂ ಆಗಿರುವ ಮೀನಾಕ್ಷಿ ಅವರು ಸ್ಥಳೀಯವಾಗಿ ಸಂಘಟನಾ ಚತುರರಾಗಿ ಗುರುತಿಸಿಕೊಂಡವರು, ಬಳ್ಳಿಯಿಂದ ಬುಟ್ಟಿ ಸಹಿತ ಇನ್ನಿತ ಕರಕುಶಲ ವಸ್ತುಗಳನ್ನು ತಯಾರಿಸುವುದರಲ್ಲಿ ಇವರು ಪಳಗಿದವರು. ಇನ್ನೋರ್ವೆ ವನಿತಾ ಬೆಂಡೋಡಿ ಯವರು ಆದಿಲಕ್ಷ್ಮಿ ಸ್ವಸಹಾಯಯ ಗುಂಪಿನ ಸದಸ್ಯೆಯಾಗಿದ್ದು, ಬಡತನದ ಹಿನ್ನೆಲೆಯಲ್ಲಿ ಬೆಳೆದು ಬಂದವರು. ಬಳ್ಳಿಯಿಂದ ಬುಟ್ಟಿ ಸಹಿತ ಅನೇಕ ಕರಕುಶಲ ವಸ್ತುಗಳನ್ನು ತಯಾರಿಸುವುದರಲ್ಲಿ ನಿಪುಣರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!