ದೇವರಕಾನ ಸರ್ಕಾರಿ ಪ್ರಾಥಮಿಕ ಶಾಲೆಯ ಬಡ ವಿದ್ಯಾರ್ಥಿನಿಗೆ ಶಸ್ತ್ರಚಿಕಿತ್ಸೆಗೆ ಭಾರಿ ಮೊತ್ತದ ಹಣದ ಅವಶ್ಯಕತೆ ಇದ್ದು, ಆರ್ಥಿಕವಾಗಿ ಹಿಂದುಳಿದಿದ್ದ ಕುಟುಂಬಕ್ಕೆ ವಿದ್ಯಾರ್ಥಿನಿಯ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗಿರಲಿಲ್ಲ. ವಿಷಯ ತಿಳಿದ ಸುಳ್ಯ ಶಿಕ್ಷಣ ಅಧಿಕಾರಿ ಮಹದೇವ ಮಂಗಳೂರು ಆಸ್ಪತ್ರೆಯ ವೈದ್ಯರುಗಳನ್ನು ಸಂಪರ್ಕಿಸಿ ಸುಮಾರು ಎರಡು ಲಕ್ಷ ರೂಪಾಯಿಗಳ ಅನುದಾನ ಬರುವಲ್ಲಿ ಸಹಕಾರವನ್ನು ಮಾಡಿರುತ್ತಾರೆ. ಮಂಗಳೂರು ಎಜೆ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಚಿಕಿತ್ಸೆಗೆ ಒಳಗಾಗಿದ್ದು ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಶಿಕ್ಷಣ ಅಧಿಕಾರಿ ಮಹದೇವರವರ ಮಾನವೀಯತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಪ್ರಶಂಸೆಗೆ ಕಾರಣವಾಗಿದೆ.
- Thursday
- November 21st, 2024