ದಿನಾಂಕ ೨೩/೧೨/೨೦೨೩ ಶನಿವಾರ ಸ.ಕಿ. ಪ್ರಾ ಶಾಲೆ ಪೈಕ ಇಲ್ಲಿ ಶಾಲಾ ಹಿರಿಯ ವಿದ್ಯಾರ್ಥಿಗಳು ಹಾಗೂ ಊರ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ಶಾಲಾ ವಠಾರದಲ್ಲಿ ಕ್ರೀಡೋತ್ಸವ, ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮವನ್ನು ನಡೆಯಿತು.
ಕ್ರೀಡೋತ್ಸವದ ಧ್ವಜರೋಹಣವನ್ನು
ಚಿನ್ನಪ್ಪ ಗೌಡ ಮುಚ್ಚಾರ ನೆರವೇರಿದರು. ಶಾಲಾ ವಿದ್ಯಾರ್ಥಿಯರು ಪ್ರಾರ್ಥನೆಯನ್ನು ಮಾಡಿದರು. ಮುಖ್ಯ ಶಿಕ್ಷಕಿ ಸ್ನೇಹಲತಾರವರು ಸರ್ವರನ್ನು ಸ್ವಾಗತಿಸಿದರು. ಡಿ. ಎಂ ರಾಮಣ್ಣ ಗೌಡ ಸ್ಥಳ ದಾನಿಗಳು ದೀಪ ಬೆಳಗಿಸುವುದರೊಂದಿಗೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ. ಎಂ. ಸಿ ಅಧ್ಯಕ್ಷ ಮಂಜುನಾಥ ಕೆ. ವಹಿಸಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಯಾನಂದ ಕನ್ನಡ್ಕರವರು ವಂದಿಸಿದರು.
ಕಿದು ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಸಿ.ಪಿ.ಸಿ. ಆರ್.ಐ ಸರಕಾರಿ ಸೇವೆಯಲ್ಲಿ ವೃಂದಾ ಬಿ.ಎ, ವಲಯ ಆರಣ್ಯಾಧಿಕಾರಿ ಲೀಲಾವತಿ ಆಚಾರ್ಯ ಕಮ್ಮಾರಿಕೆ ಸಂಜೀವಿನಿ ಪ್ರಶಸ್ತಿ, ಸುಧಾಕರ ಪಂಜಿಪಳ್ಳ ಮೆಸ್ಕಾಂ ಗುತ್ತಿಗಾರು ಹಾಗೂ ಊರ ವಿದ್ಯಾರ್ಥಿಗಳ ಪರವಾಗಿ ಶಾಸಕಿ ಭಾಗೀರಥಿ ಮುರುಳ್ಯರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಹಿ. ವಿ ಸಂಘದ ಅಧ್ಯಕ್ಷ ಜಯರಾಮ ಪಿ. ಶಾಲಾ ಮುಖ್ಯ ಶಿಕ್ಷಕಿ ಸ್ನೇಹಲತಾ, ವಿದ್ಯಾರ್ಥಿ ಮೇಘನಾ ಪಿ. ಉಪಸ್ಥಿತರಿದ್ದಾರು.
ಸಭಾ ಕಾರ್ಯಕಮವನ್ನು ಕು.ಭಾಗೀರಥಿ ಮುರುಳ್ಯ, ಶಾಸಕರು, ಸುಳ್ಯ ವಿಧಾನ ಸಭಾ ಕ್ಷೇತ್ರ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸುಮಿತ್ರಾ ಮೂಕ ಮಲೆ, ಅಧ್ಯಕ್ಷರು. ಗ್ರಾ.ಪಂ ಗುತ್ತಿಗಾರು, ಭಾರತಿ ಸಾಲ್ತಾಡಿ ಉಪಾಧ್ಯಕ್ಷರು ಗ್ರಾ.ಪಂ ಗುತ್ತಿಗಾರು, ಜಗದೀಶ್ ಕೆವಾಲ ಸದಸ್ಯರು ಗ್ರಾ.ಪಂ. ಗುತ್ತಿಗಾರು, ವೆಂಕಟ್ ದಂಬೆಕೋಡಿ ಅಧ್ಯಕ್ಷರು ಪಿ.ಎ.ಸಿ. ಎಸ್ ಗುತ್ತಿಗಾರು, ಮುಳಿಯ ಕೇಶವ ಭಟ್ ನಿರ್ದೆಶಕರು ಪಿ.ಎ.ಸಿ. ಎಸ್ ಗುತ್ತಿಗಾರು, ರಮೇಶ್ ಬಿ. ಈ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲಾ ಶಿಕ್ಷಣ ಇಲಾಖೆ ಉಪಸ್ಥಿತರಿದ್ದರು. ಹಾಗೂ ವೇದಿಕೆಯಲ್ಲಿ ಮಂಜಿನಾಥ ಕೆ. ಅಧ್ಯಕ್ಷರು ಎಸ್ ಡಿ ಸಿ ಪೈಕ ಸ್ನೇಹಲತಾ ಮುಖ್ಯಶಿಕ್ಷಕಿ, ಜಯರಾಮ ಪಿ, ಅಧ್ಯಕ್ಷರು ಹಿ.ವಿ. ಸಂಘ, ಮೇಘನಾ ಪಿ. ವಿದ್ಯಾರ್ಥಿ ನಾಯಕಿ ಉಪಸ್ಥಿತರಿದ್ದರು.
- Sunday
- November 24th, 2024