Ad Widget

ಕುಕ್ಕೆ ಸುಬ್ರಹ್ಮಣ್ಯ : ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

       ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ನಡೆದ ವಾರ್ಷಿಕ ಜಾತ್ರೋತ್ಸವದ ನಂತರ ಅಲ್ಲಲ್ಲಿ ಶೇಖರಣೆಗೊಂಡ ಕಸ ಕಡ್ಡಿಗಳನ್ನು ರವಿ ಕಕ್ಕೆ ಪದ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಡಿ.31ರಂದು ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಜಾತ್ರೋತ್ಸವದಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಎಲ್ಲಿಂದರಲ್ಲಿ ಕಸವನ್ನು ಹಾಕಿದ್ದರು. ಇಡೀ ಪರಿಸರ ಕಸದಿಂದ ತುಂಬಿಹೋಗಿತ್ತು. ಅದಲ್ಲದೆ ಅಲ್ಲಲ್ಲಿ ಪ್ಲಾಸ್ಟಿಕ್ ಬಾಟ್ಲಿಗಳು,ಚೀಲಗಳು, ತೊಟ್ಟಿಗಳು ಹಾಗೂ ಆಹಾರದ ಮೂಟೆಗಳು ಚದುರಿದ್ದು ಕೆಲವು ಕಡೆಗಳಲ್ಲಿ ಗಬ್ಬು ವಾಸನೆ ಕೂಡ ಬರುತ್ತಿತ್ತು. ಇದನ್ನ ಮನಗಂಡ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾl ರವಿಕಕ್ಕೆ ಪದವು ಹಾಗೂ ಅವರ ಸುಮಾರು 60 ಸ್ವಯಂಸೇವಕರು ಜನಾರ್ಧನ ಗೌಡ ಅವರ ನೇತೃತ್ವದಲ್ಲಿ ಇಡೀ ಪರಿಸರವನ್ನು ಸ್ವಚ್ಛಗೊಳಿಸಿದ್ದರು.  ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಯಾರು ಕೂಡ ಕಸ ಕಡ್ಡಿಗಳನ್ನು, ಪ್ಲಾಸ್ಟಿಕ್ ಬಾಟ್ಲಿಗಳು ,ಚೀಲದ ಪಟ್ಟಣಗಳನ್ನ ಅಲ್ಲಲ್ಲಿ ಎಸೆಯದಿರಿ. ಪಕ್ಕದಲ್ಲಿರುವ ಕಸದ ತೊಟ್ಟಿಗಳಲ್ಲಿ ಹಾಕಬೇಕು. ಹಾಗೂ ಸಣ್ಣ ಪುಟ್ಟ ಕಸ ,ಪ್ಲಾಸ್ಟಿಕ್ ,ಇತ್ಯಾದಿಗಳಿದ್ದಲ್ಲಿ ತಾವೇ ಅದನ್ನ ತಮ್ಮ ಬ್ಯಾಗಿನಲ್ಲಿ ಸೇರಿಸಿಕೊಂಡು ಎಲ್ಲಾದರೂ ಕಸದ ತೊಟ್ಟಿಗಳಿದ್ದಲ್ಲಿ ಹಾಕುವಂತೆ ಮನವಿ ಮಾಡಿದ್ದರು. ಅಲ್ಲದೆ ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯ ಇದೆ. ದೇವರ ಪಾವಿತ್ರತೆಯನ್ನ ಎಲ್ಲರೂ ಕಾಪಾಡಿಕೊಂಡು ಬರಬೇಕೆಂದು ವಿನಂತಿ ಮಾಡಿದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!