ಆಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿನ ಯುವಕನೊಬ್ಬ ವಿವಾಹವಾದ ಮೂರೇ ದಿನದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಗುಂಡ್ಯ ದಿ.ಕೊರಗಪ್ಪ ಎಂಬವರ ಪುತ್ರ ರಾಜೇಶ್ ಗುಂಡ್ಯ( 29) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಇಂದು ಬೆಳಗ್ಗೆ ತನ್ನ ಕೋಣೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಡಿ.21 ರಂದು ಕಾಣಿಯೂರಿನ ಮೂಲದ ಯುವತಿಯನ್ನು ವಿವಾಹವಾಗಿದ್ದು ಇಂದು ಬೆಳಗ್ಗೆ ಮನೆಯವರು ಎದ್ದು ತಮ್ಮ ತಮ್ಮ ಕೆಲಸಗಳಿಗೆ ತೆರಳಿದ ಬಳಿಕ ಅಲ್ಲೇ ಇರಿಸಿದ್ದ ಸೀರೆಯನ್ನು ಬಳಸಿ ಈ ಕೃತ್ಯವೆಸಗಿಕೊಂಡಿರುವುದಾಗಿ ತಿಳಿದು ಬಂದಿದೆ. ಮೃತರು ತಾಯಿ ಶ್ರೀಮತಿ ಸುಶೀಲಾ,
ಪತ್ನಿ ಚೈತ್ರಾ ಹಾಗೂ ಕುಟುಂಬಸ್ಥರನ್ನು ,ಬಂಧು ಮಿತ್ರರನ್ನು ಅಗಲಿದ್ದಾರೆ.ಮೃತ ಯುವಕ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ಬಿನ ಸಕ್ರಿಯ ಸದಸ್ಯರಾಗಿದ್ದರು.