Ad Widget

ಜ, 7. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯೋಗ ಷಣ್ಮುಖ ನಮಸ್ಕಾರ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ವತಿಯಿಂದ ಜನವರಿ 7ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾಜ್ಯಮಟ್ಟದ ಯೋಗ ಷಣ್ಮುಖ ನಮಸ್ಕಾರ ನಡೆಯಲಿರುವದೆಂದು ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಜಯರಾಮ್ ಅವರು ತಿಳಿಸಿರುತ್ತಾರೆ. ದಕ್ಷಿಣ ಭಾರತದ ಪುಣ್ಯಕ್ಷೇತ್ರ ನಾಗರಾಧನೆಯ ಕ್ಷೇತ್ರ ವಾಗಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜನವರಿ 7ರಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ರಾಜ್ಯಮಟ್ಟದ ಯೋಗ ಷಣ್ಮುಖ ನಮಸ್ಕಾರ ಜರಗಿಸುವುದಾಗಿ ಸಮಿತಿಯವರು ನಿರ್ಧರಿಸಿರುತ್ತಾರೆ. ಈ ಯೋಗ ಷಣ್ಮುಖ ನಮಸ್ಕಾರದಲ್ಲಿ ರಾಜ್ಯಾದ್ಯಂತ 3000ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ. ಶಿಬಿರಾರ್ಥಿಗಳಿಗೆ ಹಿಂದಿನ ದಿನ ರಾತ್ರಿ ತಂಗಲು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಸಭಾಂಗಣ ಹಾಗೂ ಕುಮಾರಸ್ವಾಮಿ ವಿದ್ಯಾಲಯದ ಸಭಾಂಗಣ ಶ್ರೀ ದೇವಳದ ವಸತಿಗೃಹ ವ್ಯವಸ್ಥೆ ಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು ಹಾಗೂ ದೇವಳದ ಕಾರ್ಯ ನಿರ್ವಹಣಾಧಿಕಾರಿಗಳು ಮಾಡಲು ಒಪ್ಪಿರುತ್ತಾರೆಂದು ಅವರು ತಿಳಿಸಿದರು. ಹಾಗೆ ಮರುದಿನ ಷಣ್ಮುಖ ನಮಸ್ಕಾರ ಯೋಗ ಮುಗಿದ ನಂತರ ಫಲಾಹಾರ ವ್ಯವಸ್ಥೆಯನ್ನು ಕೂಡ ಶ್ರೀ ದೇವಳದ ವತಿಯಿಂದ ನೀಡಲಾಗುವುದು. ಯೋಗರ್ಥಿಗಳಿಗೆ ಬೆಳಗ್ಗೆ ಜಾವ ಸ್ಥಾನ ಮಾಡಲು ಕುಮಾರಧಾರ ಸ್ಥಾನ ಘಟ್ಟದಲ್ಲಿ ವ್ಯವಸ್ಥೆಯನ್ನು ಕೂಡ ಮಾಡಿರುವರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಮುಂಭಾಗದ ವಿಶಾಲವಾದ ರಥ ಬೀದಿಯಲ್ಲಿ ಯೋಗ ಷಣ್ಮುಖ ನಮಸ್ಕಾರಕ್ಕೆ ಎಲ್ಲ ವ್ಯವಸ್ಥೆಗಳನ್ನು ಕೂಡ ಮಾಡಲಾಗುವುದೆಂದು ಅವರು ತಿಳಿಸಿದರು. ಯೋಗ ಷಣ್ಮುಖ ನಮಸ್ಕಾರವನ್ನು ವೀಕ್ಷಿಸಲು ಅಥವಾ ಭಾಗವಹಿಸಲು ಸಾರ್ವಜನಿಕರಿಗೆ ಕೂಡ ಅನುಕೂಲ ಮಾಡಿಕೊಡಲಾಗುವುದೆಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಎಸ್ ಪಿ ವೈ ಎಸ್ ಎಸ್ ಯೋಗ ಶಾಖೆಯ ಸಂಚಾಲಕ ಪ್ರಭಾಕರ ಪಟ್ರೆ ಜೊತೆಗಿದ್ದರು.

. . . . . . .

Related Posts

error: Content is protected !!