ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ಹಾಗೂ ಬಾರ್ಬಾರ್ಸ್ ಎಸೋಸಿಯೇಶನ್ ಸುಳ್ಯ ವತಿಯಿಂದ ದಿನಾಂಕ 26.12.2023ರಂದು ಸುಳ್ಯ ಯೋಜನಾ ಕಛೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಪ್ರಾಥಮಿಕ ಮಾಹಿತಿ ಕಾರ್ಯಗಾರ ಹಾಗೂ ನೋಂದಾವಣೆ ಕಾರ್ಯಕ್ರಮ ನಡೆಸಲಾಯಿತು. ಸದ್ರಿ ಕಾರ್ಯಕ್ರಮದ ಉದ್ಘಾಟನೆಯನ್ನು ನಾಗೇಶ್ ಪಿ ಯೋಜನಾಧಿಕಾರಿ, ಶ್ರೀ.ಕ್ಷೇ,ಧ.ಗ್ರಾ. ಯೋಜನೆ ಸುಳ್ಯ ಇವರು ನೆರವೇರಿಸಿದರು. ಪಿ.ಎಮ್ ವಿಶ್ವಕರ್ಮ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಗೌರವಾನ್ವಿತ ಪ್ರಧಾನ ಮಂತ್ರಿಯವರು 17 ಸೆಪ್ಟಂಬರ್ 2023ರಂದು ಈ ಯೋಜನೆಗೆ ಚಾಲನೆ ನೀಡಿರುತ್ತಾರೆ. ಸದ್ರಿ ಕಾರ್ಯಕ್ರಮದಲ್ಲಿ 18 ಸಾಂಪ್ರದಾಯಿಕ ವಹಿವಾಟುಗಳನ್ನು ಪಿ.ಎಮ್ ವಿಶ್ವಕರ್ಮ ಯೋಜನೆಯು ಒಳಗೊಂಡಿದ್ದು, ಇವುಗಳಲ್ಲಿ ಬಡಗಿ ಕೆಲಸ ಮಾಡುವವರು, ಕಮ್ಮಾರರು, ಕುಂಬಾರರು, ಅಕ್ಕಸಾಲಿಗರು, ಮೂರ್ತಿ ಮಾಡುವ ಶಿಲ್ಪಿ, ಕಲ್ಲು ಒಡೆಯುವವರು, ಚಮ್ಮಾರ, ಪಾದರಕ್ಷೆ ತಯಾರಕರು, ಗಾರೆ ಮೇಸ್ತ್ರಿಗಳು,ಬುಟ್ಟಿ/ಚಾಪೆ/ಹಿಡಿಸೂಡಿ ತಯಾರಕರು,ಸೆಣಬು ನೇಕಾರರು, ಗೊಂಬೆ & ಆಟಿಕೆ ತಯಾರಕರು, ಕ್ಷೌರಿಕರು, ಮಾಲೆ ತಯಾರಕರು, ಧೋಬಿ ಅಥವಾ ಮಡಿವಾಳರು, ಟೈಲರ್, ಸುತ್ತಿಗೆ ಮತ್ತು ಇತರೆ ಸಾಮಾಗ್ರಿ ತಯಾರಕರು, ಇವುಗಳ ಕುರಿತು ಶ್ರೀ ಗೋವರ್ಧನ್ ಸಿ.ಎಸ್.ಸಿ ವಿಭಾಗದ ಜಿಲ್ಲಾ ಪ್ರಬಂಧಕರು ಡಿ.ಸಿ ಅಫೀಸ್ ಮಂಗಳೂರುರವರು ವಿಶ್ವಕರ್ಮ ಯೋಜನೆಯ ಕುರಿತು ಮಾಹಿತಿಯನ್ನು ನೀಡಿದರು. ಸಿ.ಎಸ್.ಸಿ ಕಾರ್ಯಕ್ರಮಗಳ ಮತ್ತು ಸವಲತ್ತುಗಳ ಕುರಿತು ಶ್ರೀ ರಾಮ್ ಸಿ.ಎಸ್,ಸಿ ವಿಭಾಗದ ಜಿಲ್ಲಾ ನೋಡಲ್ ಅಧಿಕಾರಿಯವರು ಮಾಹಿತಿಯನ್ನು ನೀಡಿದರು. ಸದ್ರಿ ಕಾರ್ಯಕ್ರಮದಲ್ಲಿ 70 ಜನ ತರಬೇತಿಯಲ್ಲಿ ಭಾಗವಹಿಸಿ ವಿಶ್ವಕರ್ಮ ಯೋಜನೆಗೆ, ನೊಂದಾವಣೆ ಮಾಡಲಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಶ್ರೀ ಪದ್ಮನಾಭ ಭಂಡಾರಿ ಅಧ್ಯಕ್ಷರು, ಶ್ರೀ ಭವಾನಿ ಶಂಕರ್ ಕೇರ್ಪಳ ಕಾರ್ಯದರ್ಶಿ, ಶ್ರೀ ಧನಂಜಯ ಮೂರ್ನಾಡ್ ಖಜಾಂಜಿ ಬಾರ್ಬಾರ್ಸ್ ಎಸೋಸಿಯೇಶನ್, ಶ್ರೀ ಹೇಮಂತ್ ಸಿ.ಎಸ್.ಸಿ ವಿಭಾಗದ ತಾಲೂಕು ನೋಡಲ್ ಅಧಿಕಾರಿ ಉಪಸ್ಥಿತರಿದ್ದರು. ಸದ್ರಿ ಕಾರ್ಯಕ್ರಮದ ಸ್ವಾಗತವನ್ನು ಶ್ರೀ ಭವಾನಿ ಶಂಕರ್ ಕೇರ್ಪಳ ಕಾರ್ಯದರ್ಶಿರವರು ಮಾಡಿದರು. ಉದಯರವರು ಧನ್ಯವಾದ ಸಮರ್ಪಣೆಯನ್ನು ಮಾಡಿದರು.
- Thursday
- November 21st, 2024