ಪ್ರೀತಿ, ಅನ್ಯೋನತೆ ಹಾಗೂ ಸಾಮರಸ್ಯವನ್ನು ಸಾರಿ ಹೇಳುವ ಕ್ರಿಸ್ಮಸ್ ಕಾರೋಲ್ ಭವ್ಯ ಮೆರವಣಿಗೆ ಗುತ್ತಿಗಾರು ಪೇಟೆಯಲ್ಲಿ ನಡೆಯಿತು.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿ.24 ಸಂಜೆ ಗುತಿಗಾರು ಕೆಳಗಿನ ಪೇಟೆಯಿಂದ ಪ್ರಾರಂಭವಾದ ಭವ್ಯ ಮೆರವಣಿಗೆ ನಿಶ್ಚಲ ದೃಶ್ಯದೊಂದಿಗೆ ಚರ್ಚ್ ವಠಾರಕ್ಕೆ ಬಂದು ಸೇರಿತು. ಮೆರವಣಿಗೆಯಲ್ಲಿ ನೂರಾರು ಕ್ರೈಸ್ತ ಭಾಂದವರು ಭಾಗವಹಿಸಿದರು.
ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಪೂಜಾ ವಿಧಿಗಳು ವಿಜೃಂಭಣೆಯಿಂದ ನೆರವೇರಿತು. ಕ್ರಿಸ್ತ ಯೇಸುವಿನ ಜನನದ ಸಂಕೇತವಾದ ಸುಂದರವಾದ ಗೋದಲಿಯನ್ನು ಚರ್ಚ್ ಅಂಗಳದಲ್ಲಿ ನಿರ್ಮಿಸಲಾಯಿತ್ತು. ಸಮಾಜದಲ್ಲಿ ಪ್ರೀತಿ, ಅನ್ಯೋನತೆ, ಸಾಮರಸ್ಯ ಹಾಗೂ ಸಮಾನತೆಯನ್ನು ಬದುಕು ಕಟ್ಟಲು ಕ್ರಿಸ್ಮಸ್ ಹಬ್ಬ ಪ್ರೇರಣೆಯಾಗಲಿ ಎಂದು ಹೇಳಿ ಊರಿನ ಸಮಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.