ಸುಳ್ಯ ತಾಲೂಕು ಅಮೆಚೂರು ಕಬ್ಬಡಿ ಅಸೋಸಿಯೇಶನ್ (ರಿ.)ಯವರ ಸಹಭಾಗಿತ್ವದಲ್ಲಿ ಪುರುಷರ ೬೨ ಕೆ.ಜಿ ಮುಕ್ತ ಮ್ಯಾಟ್ ಕಬ್ಬಡಿ ಪಂದ್ಯಾಟ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಡಿ.೩೧ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣ ಮೂವಪ್ಪೆಯಲ್ಲಿ ನಡೆಯಲಿದೆ ಎಂದು ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ (ರಿ.)ಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಕೆ.ಎಂರವರು ಹೇಳಿದರು.
ಡಿ.೨೩ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಅಮೆಚೂರ್ ಕಬ್ಬಡಿ ಅಸೋಸಿಯೇಶನ್ (ರಿ.)ಯ ಅಧ್ಯಕ್ಷರಾದ ಮಾಧವ ಬಿ.ಕೆ ನೆರವೇರಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ನ ಅಧ್ಯಕ್ಷರಾದ ಸುಬ್ರಹ್ಮಣ್ಯ ಕೆ.ಎಂ., ಮುಖ್ಯ ಅತಿಥಿಗಳಾಗಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಬೆಳ್ಳಾರೆ ಶಾಖೆಯ ಶಾಖಾ ವ್ಯವಸ್ಥಾಪಕರಾದ ಸಂತೋಷ್ ಕುಮಾರ್ ಮರಕ್ಕಡ, ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘ ನಿ. ಮಾಜಿ ಅಧ್ಯಕ್ಷರಾದ ಅನಿಲ್ ರೈ ಚಾವಡಿಬಾಗಿಲುರವರು ಉಪಸ್ಥಿತರಿರಲಿದ್ದಾರೆ.
ಗೌರವ ಉಪಸ್ಥಿತಿಯಲ್ಲಿ ದ.ಕ ಜಿಲ್ಲಾ ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಗೂ ಕ್ರೀಡಾ ಭಾರತಿ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಎ.ಸಿ ವಸಂತ್, ಕೊಡಿಯಾಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀಮತಿ ಚಿತ್ರಾ ದಿನೇಶ್, ಕೂಡುರಸ್ತೆ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಕಿರಣ್ ಮಲೆಕೆರ್ಚಿ, ಮೂವಪ್ಪೆ ಸ.ಕಿ.ಪ್ರಾ ಶಾಲೆಯ ಸಹಶಿಕ್ಷಕಿ ಪುಷ್ಪಾ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರಾದ ಸುಂದರ ಗೌಡ ಪೋಳಾಜೆ, ಮೂವಪ್ಪೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪದ್ಮಯ್ಯ ಗೌಡ ತೋಟ ಕಲ್ಪಡ ಹಾಗೂ ಲಕ್ಷö್ಮಣ ಕಣಿಲೆಗುಂಡಿಯವರು ಇರಲಿದ್ದಾರೆ.
ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು| ಭಾಗೀರಥಿ ಮುರುಳ್ಯ, ಅಧ್ಯಕ್ಷತೆಯನ್ನು ನಮ್ಮೂರ ನಮ್ಮ ಕನಸು ಜನಾಸೇವಾ ಟ್ರಸ್ಟ್ನ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರಧ್ವಾಜ್, ರಾಷ್ಟç ಪ್ರಶಸ್ತಿ ಪುರಸ್ಕೃತ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್ ಗಂಗಾಧರ್ ಭಾಗವಹಿಸಲಿದ್ದಾರೆ.
ಗೌರವ ಉಪಸ್ಥಿತಿಯಲ್ಲಿ ಕಾಣಿಯೂರು ಮಠದ ಮುಖ್ಯಕಾರ್ಯನಿರ್ವಹಣಾಧಿಕಾರಿ ನಿರಂಜನ್ ಆಚಾರ್, ಕೊಡಿಯಾಲ ಗ್ರಾ.ಪಂ ಅಧ್ಯಕ್ಷ ಹರ್ಷನ್ ಕೆ.ಟಿ, ಪಂ.ಅ.ಅಧಿಕಾರಿ ಪ್ರವೀಣ್ ಕುಮಾರ್ ಸಿ.ವಿ, ಭಾರತೀಯ ರೈಲ್ವೇ ಉದ್ಯೋಗಿಯಾಗಿರುವ ಪುರಂದರ ಕೆ. ಕಲ್ಪಡ, ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಫೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಹರೀಶ್ ಪೈಕ (ಕಟೀಲು), ಮೂವಪ್ಪೆ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ನಿರ್ಮಲ ಕೆ.ಎನ್, ಮಂಗಳೂರು ಪ್ರೊಗ್‌ಕ್ಯಾಪ್ ಮ್ಯಾನೇಜರ್ ಪ್ರಶಾಂತ್ ಅಂಬುಲ ಇರಲಿದ್ದಾರೆ.
ಪುರುಷರ ೬೨ ಕೆ.ಜಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ ೧೫,೫೫೫, ದ್ವಿತೀಯ ೧೨,೨೨೨ ರೂ.,ತೃತೀಯ ೬೦೦೦, ಚತುರ್ಥ ೫೦೦೦ ಹಾಗೂ ಶಾಶ್ವತ ಫಲಕ ನೀಡಲಾಗುವುದು.
ಪಂದ್ಯಾಟದ ಸವ್ಯಸಾಚಿ ಪ್ರಶಸ್ತಿಗೆ ೧೨೫೦, ಪಂದ್ಯಾಟದ ಉತ್ತಮ ದಾಳಿಗಾರ ಪ್ರಶಸ್ತಿಗೆ ೧೦೦೦, ಪಂದ್ಯಾಟದ ಉತ್ತಮ ಹಿಡಿತಗಾರ ಪ್ರಶಸ್ತಿಗೆ ೧೦೦೦ ಹಾಗೂ ಶಾಶ್ವತ ಫಲಕ ನೀಡಲಾಗುವುದು.
ಭಾಗವಹಿಸುವ ಎಲ್ಲಾ ತಂಡಗಳು ಡಿ.೨೬ರಂದು ಸಂಜೆ ೪.೩೦ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಮೊದಲು ನೋಂದಾಯಿಸಿ ಪ್ರವೇಶ ಶುಲ್ಕ ಪಾವತಿಸುವ ೩೨ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಸಂಘಟಕರ ತೀರ್ಮಾನವೇ ಅಂತಿಮ ಎಂದು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ನ ಕಾರ್ಯದರ್ಶಿ ಹರ್ಷನ್ ಕೆ.ಟಿ, ಎ.ಸಿ ವಸಂತ, ಜತೆ ಕಾರ್ಯದರ್ಶಿ ಗಣೇಶ್ ಪೆರ್ಲೊಡಿ, ಸದಸ್ಯರಾದ ಆಶ್ವನ್ ಕುಮಾರ್, ನವೀನ್ ಕೊಡಂಕಿರಿ, ಕೇಶವ ಕೆ.ಪಿ., ನವೀನ್ ಖಂಡಿಗ ಉಪಸ್ಥಿತರಿದ್ದರು.
- Thursday
- November 21st, 2024