ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಂಬಿ ಎಂಬಲ್ಲಿ ನೆರೆಹೊರೆಯ ಮನೆಯವರಾದ ರಾಮಣ್ಣ ನಾಯ್ಕ ಮತ್ತು ಕಮಲಾಕ್ಷ ನಾಯ್ಕ ಎಂಬುವವರ ಮಧ್ಯೆ ನಿನ್ನೆ ರಾತ್ರಿ ಮಾತಿಗೆ ಮಾತು ಬೆಳೆದು ಕಡಿದು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ . ಸದ್ಯ ಕಮಲಾಕ್ಷ ನಾಯ್ಕ್ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರಿಗೆ ರಾಮಣ್ಣ ನಾಯ್ಕರು ಹಲ್ಲೆಗೈದು ಕಡಿದಿದ್ದಾರೆ ಎಂದು ಹೇಳಲಾಗುತ್ತಿದ್ದು ಸದ್ಯ ರಾಮಣ್ಣಾ ನಾಯ್ಕರು ಮತ್ತು ಅವರ ಪತ್ನಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸಲು ಜನ ಇಲ್ಲದೆ ಮನೆಯಲ್ಲೆ ಇದ್ದಾರೆ ಎಂದು ಹೇಳಲಾಗುತ್ತಿದ್ದು ಮಾನವೀಯತೆ ಮರೆತರೆ ಸ್ಥಳೀಯ ಜನತೆ ಎಂಬುವುದು ಪ್ರಶ್ನೆ ಉದ್ಬವಿಸಿದ್ದು ತಕ್ಷಣವೇ ಪೋಲಿಸ್ ಇಲಾಖೆ ಇವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿದ್ದು ಇವರ ಪತ್ನಿಯ ಕೈಯಲ್ಲು ಗಾಯಗಳು ಕಾಣಿಸುತ್ತಿದ್ದು ಏನು ನಡೆಯಿತು ಎಂಬುವುದರ ಸಂಪೂರ್ಣ ವಿವರವನ್ನು
ನಿರೀಕ್ಷಿಸಲಾಗಿದೆ.