ಅರಂತೋಡು ಗ್ರಾಮದ ಕಿರ್ಲಾಯ ಪೂಜಾರಿಮನೆ ತರವಾಡು ಕುಟುಂಬದ ದೇವಸ್ಥಾನದಲ್ಲಿ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಉಪದೈವಗಳ ಪ್ರತಿಷ್ಠಾ ಮಹೋತ್ಸವ ಡಿ.27 ರಿಂದ ಡಿ.29 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದೊಂದಿಗೆ, ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ನಂತರ ಶ್ರೀ ದೈವಗಳ ಧರ್ಮ ನಡಾವಳಿ ನಡೆಯಲಿದೆ ಎಂದು ಕುಟುಂಬದ ಹಿರಿಯರಾದ ಪಿ.ಬೆಳ್ಯಪ್ಪ ಗೌಡ ತಿಳಿಸಿದ್ದಾರೆ.
ಕಾರ್ಯಕ್ರಮಗಳ ವಿವರ : ಡಿ.27 ಸಂಜೆ ಘಂಟೆ 5-00ಕ್ಕೆ ತಂತ್ರಿಗಳ ಆಗಮನ, ಸಂಜೆ ಘಂಟೆ 7-00ರಿಂದ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹವಾಚನ ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ, ರಾತ್ರಿ ಘಂಟೆ 9-00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಡಿ.28 ರಂದು ಬೆಳಿಗ್ಗೆ ಘಂಟೆ 5-00ರಿಂದ ಶ್ರೀ ಗಣಪತಿ ಹೋಮ, ಬೆಳಿಗ್ಗೆ ಘಂಟೆ 6-30ರಿಂದ ನಾಗಪ್ರತಿಷ್ಠೆ ಹಾಗೂ ತಂಬಿಲ, ಬೆಳಿಗ್ಗೆ ಘಂಟೆ 7-00ರಿಂದ ಬ್ರಹ್ಮಕಲಶ ಪೂಜೆ, ಬೆಳಿಗ್ಗೆ ಘಂಟೆ 8-30ರಿಂದ 9-50ರ ಶುಭ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಧರ್ಮದೈವ ರುದ್ರಚಾಮುಂಡಿ ಹಾಗೂ ಉಪದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ, ಮಧ್ಯಾಹ್ನ ಗಂಟೆ 1-00ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಘಂಟೆ 6-00ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, ಸಂಜೆ ಘಂಟೆ 6-30ಕ್ಕೆ ಸರಿಯಾಗಿ ದೈವಗಳಿಗೆ ಎಣ್ಣೆ ಕೊಡುವುದು, ರಾತ್ರಿ ಘಂಟೆ 7-00ರಿಂದ ಗುರುಕಾರ್ನೋರು ಹಾಗೂ ಪಾಷಾಣ ಮೂರ್ತಿ ದೈವಗಳ ಕೋಲ, ರಾತ್ರಿ ಘಂಟೆ 9-00ರಿಂದ ಅನ್ನಪ್ರಸಾದ ವಿತರಣೆ,ರಾತ್ರಿ ಘಂಟೆ 10-00ರಿಂದ ಧರ್ಮ ದೈವದ ಉಪದೈವಗಳಾದ ವರ್ಣಾರ ಪಂಜುರ್ಲಿ, ಪಿಲಿ ಭೂತ ಹಾಗೂ ಕುಕ್ಕೆತ್ತಿ ಬಲ್ಲು ದೈವಗಳ ಕೋಲ ನಡೆಯಲಿದೆ.
ಡಿ. 29 ರಂದು ಪೂ. ಗಂಟೆ 10-00ರಿಂದ ಧರ್ಮದೈವ ಶ್ರೀ ರುದ್ರಚಾಮುಂಡಿ ದೈವದ ಧರ್ಮ ನಡಾವಳಿ ನಡೆದ ಬಳಿಕ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, ಸಂಜೆ ಗಂಟೆ 3.00 ಕ್ಕೆ ಗುಳಿಗ ದೈವದ ನೇಮ ನಡೆಯಲಿದೆ.